Govt Arun Shahapur: ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಸದಾಗಿ ವೇತನಾನುದಾನ, ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಒಪ್ಪಿಗೆ- ಸರಕಾರಕ್ಕೆ ಅರುಣ ಶಹಾಪುರ ಕೃತಜ್ಞತೆ

ವಿಜಯಪುರ: ಕೊರೊನಾ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಸದಾಗಿ ವೇತನಾನುದಾನಕ್ಕೆ ಒಳಪಡಿಸಲು ಮತ್ತು ಬೋಧಕ ಹಾಗೂ ಬೋಧಕರ ಹೊರತಾದ ಹುದ್ದೆಗಳ ಭರ್ತಿಗೆ ಸರಕಾರ ಒಪ್ಪಿಗೆ ನೀಡಿರುವುದಕ್ಕೆ ವಿಧಾನ ಪರಿಷತ ಬಿಜೆಪಿ ಮಾಜಿ ಸದಸ್ಯ ಅರುಣ ಶಹಾಪುರ ಸಂತಸ ವ್ಯಕ್ತಪಡಿಸಿದ್ದಾರೆ. 

ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಮಿತವ್ಯಯ ಕಾರಣದಿಂದ 2020-21ನೇ ವರ್ಷದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಸದಾಗಿ ವೇತನಾನುದಾನಕ್ಕೆ ಒಳಪಡಿಸದಂತೆ ಹಾಗೂ ಅನದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಂತೆ 10.06.2020 ರಂದು ಸರಕಾರ ಶಿಕ್ಷಣ ಇಲಾಖೆಗೆ ಸೂಚನೆ ನೀಡಿತ್ತು.

ಸರಕಾರದ ಅಧಿಕೃತ ಟಿಪ್ಪಣಿ

ಈಗ ಈ ನಿರ್ಧಾರವನ್ನು ಸರಕಾರ ಹಿಂಪಡೆದಿದ್ದು, ಈಗ ಆಡಳಿತ ಇಲಾಖೆಯ ಹಂತದಲ್ಲಿರುವ ವೇತನಾನುದಾನಕ್ಕೆ ಒಳಪಡಿಸಲು ಬಾಕಿ ಇರುವ ಪ್ರಸ್ತಾವನೆಗಳನ್ನು ಪರಿಗಣಿಸಲು ತೀರ್ಮಾನಿಸಿದೆ.  ಈ ಹಿನ್ನೆಲೆಯಲ್ಲಿ 31.12.2015 ವರೆಗೆ ನಿವೃತ್ತಿ, ನಿಧನ, ರಾಜಿನಾಮ ಇತ್ಯಾದಿ ಕಾರಣಗಳಿಂದಾಗಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ

ಅರುಣ ಶಹಾಪುರ ಅವರ ಫೇಸ್ ಬುಕ್ ಪೋಸ್ಟ್:

 

https://m.facebook.com/story.php?story_fbid=5177315229011410&id=100001989526832

ತೆರವಾಗಿರುವ ಭೋದಕ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಮುಂದುವರಿಸಲು ಹಣಕಾಸು ಇಲಾಖೆ ಸಮ್ಮತಿಸಿದೆ.  ಅಲ್ಲದೇ, ಆಡಳಿತ ಇಲಾಖೆ ಹಂತದಲ್ಲಿ ವೇತನಾನುದಾನಕ್ಕೆ ಒಳಪಡಿಸಲು ಬಾಕಿ ಇರುವ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆ ಪರಿಶೀಲನೆಗೆ ಸಲ್ಲಿಸುವಂತೆಯೂ ಸೂಚನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಸರಕಾರದ ನಿರ್ಧಾರವನ್ನು ವಿಧಾನ ಪರಿಷತ ಬಿಜೆಪಿ ಮಾಜಿ ಸದಸ್ಯ ಅರುಣ ಶಹಾಪುರ ಸ್ವಾಗತಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ. ಸಿ. ನಾಗೇಶ ಅವರಿಗೆ ಫೇಸ್ ಬುಕ್ ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌