ವಿಜಯಪುರ: ಅಪ್ಪಟ ದೇಶಾಭಿಮಾನಕ್ಕೆ ಇನ್ನೊಂದು ಹೆಸರು ಡಾ. ಶ್ಯಾಂಪ್ರಸಾದ್ ಮುಖರ್ಜಿ ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದ್ದಾರೆ.
ವಿಜಯಪುರ ನಗರದ ಚಿದಂಬರ ದೇವಾಲಯದ ಮಂಗಲ ಕಾರ್ಯಾಲಯದಲ್ಲಿ ವಿಜಯಪುರ ನಗರ ಮಂಡಳ ರೈತ ಮೋರ್ಚಾ ಏರ್ಪಡಿಸಿಗಿದ್ದ ಡಾ. ಶ್ಯಾಂ ಪ್ರಸಾದ ಮುಖರ್ಜಿ ಅವರ ಬಲಿದಾನ ದಿವಸ ಕಾರ್ಯಕ್ರಮವನ್ನು ಸಸಿ ನೆಡುವ ಅವರು ಚಾಲನೆ ನೀಡಿ ಮಾತನಾಡಿದರು.
ಅಪ್ಪಟ ದೇಶಾಭಿಮಾನಿಯಾಗಿದ್ದ ಡಾ. ಶ್ಯಾಂ ಪ್ರಸಾದ ಮುಖರ್ಜಿ ಅವರಿಗೆ ಕಾಂಗ್ರೆಸ್ ತುಷ್ಟೀಕರಣ ನೀತಿ ಕಿಂಚಿತ್ತೂ ಇಷ್ಟವಾಗಿರಲಿಲ್ಲ. ಡಾ. ಮುಖರ್ಜಿ ಅವರ ವಿದ್ವತ್ತಿಗೆ ಮನಸೋತು ನೆಹರೂ ಅವರು ಡಾ. ಮುಖರ್ಜಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ನಂತರ ಈ ಸಂಪುಟದಿಂದ ಹೊರಬಂದ ಮುಖರ್ಜಿ ಅವರು ಭಾರತೀಯ ಜನ ಸಂಘ ಸ್ಥಾಪಿಸಿದರು ಎಂದು ಹೇಳಿದರು.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಡಾ. ಶ್ಯಾಂ ಪ್ರಸಾದ ಮುಖರ್ಜಿ ಅವರ ಸ್ವದೇಶಾಭಿಮಾನ, ಆದಮ್ಯ ರಾಷ್ಟ್ರಪ್ರೇಮ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ. ಲಕ್ಷಾಂತರ ಯುವಕರಿಗೆ ದೇಶಾಭಿಮಾನ ಭಾವನೆ ಮೂಡಲು ಡಾ. ಶ್ಯಾಂ ಪ್ರಸಾದ ಮುಖರ್ಜಿ ಅವರ ಜೀವನವೇ ಸ್ಪೂರ್ತಿಯಾಗಿತ್ತು. ದೇಶ ಯಾವುದೇ ರಾಜ್ಯಗಳಿಗೆ ಪ್ರತ್ಯೇಕ ಸ್ಥಾನಮಾನ ನೀಡುವುದನ್ನು ಅವರು ವಿರೋಧಿಸಿದ್ದರು. ಈ ಆಶಯವನ್ನು ಈಗ ಅವರು ಕಟ್ಟಿದ ಬಿಜೆಪಿ ಈಗ ಸಾಕಾರಗೊಳಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ಸ್ಥಾನಮಾನವನ್ನು ರದ್ದುಗೊಳಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ರವಿಕಾಂತ ಬಗಲಿ, ಪ್ರಮುಖರಾದ ಮಳುಗೌಡ ಪಾಟೀಲ, ಬಸವರಾಜ ಬಿರಾದಾರ, ರಮೇಶ ಶಾಹಾಪೇಟಿ, ರಾಹುಲ ಜಾಧವ, ಛಾಯಾ ಮಸಿಯನವರ, ಸಿದಗೊಂಡ ಬಿರಾದಾರ, ಪ್ರಕಾಶ ಮಿರ್ಜಿ, ಉಮೇಶ ವಂದಾಲ, ಭೀಮಾಶಂಕರ ಹದನೂರ, ವಿಜಯ ಜೋಶಿ, ಚಂದ್ರು ಚೌಧರಿ, ಸಂದೀಪ ಪಾಟೀಲ, ರಾಜೇಶ ತಾವಸೆ, ವಿನಾಯಕ ದಹಿಂಡೆ, ಸಿದ್ಧು ಮಲ್ಲಿಕಾರ್ಜುನಮಠ, ಸಂತೋಷ್ ಜಾಧವ್, ಭರತ್ ಕೋಳಿ, ಸದಾಶಿವ ಬುಟಾಳೆ, ಸತೀಶ ಡೋಬಳೆ, ಸಂತೋಷ ನಿಂಬರಗಿ, ಸುನೀಲ ಜೈನಾಪುರ, ಕಿರಣ ಬಾಗಲಕೋಟ, ಬಸವರಾಜ ಜಿರಳೆ, ರಾಜಲಕ್ಷ್ಮಿ, ಶೈಲಜಾ ಚಬನೂರ, ಅಕ್ಷಯ ಹಿರೇಮಠ, ವೆಂಕಟೇಶ ಜೋಶಿ, ಸಂದೀಪ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.
ಪಾಪುಸಿಂಗ ರಜಪೂತ್ ನಿರೂಪಿಸಿದರು. ಶಂಕರ ಹೂಗಾರ ವಂದಿಸಿದರು.