ವಿಜಯಪುರ: ರಸ್ತೆ ಪಕ್ಕದಲ್ಲಿ ಎಲ್ಲಿ ನೋಡಿದರೂ ಜನಜಂಗುಳಿ. ಬಹುತೇಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರೆ, ಹಲವರು ನಾನಾ ಅಂಗಡಿಗಳು ಮನೆಗಳ ಜಗುಲಿಗಳ ಮೇಲೆ ನಿಂತಿದ್ದರು. ಒಂದೊಂದಾಗಿ ಎತ್ತುಗಳು ಓಡಾಡುತ್ತಿದ್ದರೆ, ಕಟ್ಟಿರುವ ಹಗ್ಗಗಳದ ಅವುಗಳನ್ನು ಯಿವಕರು ನಿಭಾಯಿಸುತ್ತಿದ್ದರು. ಮೈ ನವಿರೇಳಿಸುವ ಈ ದೃಷ್ಯ ಕಂಡು ಬಂದದ್ದು ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ.
ಕೇಕೆ ಹಾಕುತ್ತ ಶಿಳ್ಳೆಯ ಶಬ್ದ ಮಾಡುತ್ತ ಒಂದೆಡೆ ದಿಕ್ಕಾ ಪಾಲಾಗಿ ಜನರು ಓಡುತ್ತಿದ್ದರು. ಮತ್ತೊಂದೆಡೆ ಸುರಕ್ಷಿತ ಸ್ಥಳ ಹುಡುಕುತ್ತಾ ಕೆಲವರು ಪರದಾಡುತ್ತಿದ್ದರು. ಹಲವಾರು ತಲೆ ಮಾರುಗಳಿಂದ ಈ ಗ್ರಾಮದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ ಈಗಲೂ ಮುಂದುವರೆದಿದೆ. ಬಂದ ಇತರಡೆಗಳಿ
ಕಾರಹುಣ್ಣಿಮೆಯಾದ ಒಂದು ವಾರದ ನಂತರ ನಡೆಯುವ ಎತ್ತುಗಳ ಓಡಿಸುವ ಸಂಪ್ರದಾಯ ಈಗಲೂ ಖ್ಯಾತಿ ಪಡೆದಿದೆ. ಕರಿ ಹರಿಯೋ ಆಚರಣೆ ಅಂಗವಾಗಿ ರೈತರು ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ ನಾನಾ ಬಣ್ಣಗಳನ್ನು ಬಳಿದು ಸಿಂಗಾರ ಮಾಡುತ್ತಾರೆ. ನಂತರ ಆ ಎತ್ತುಗಳಿಗೆ ಹಗ್ಗ ಕಟ್ಟಿ ನಾಲ್ಕಾರು ಜನ ಅವುಗಳನ್ನು ಓಡಿಸುತ್ತ ನಿಯಂತ್ರಿಸುತ್ತ ಖುಷಿ ಪಡುತ್ತಾರೆ. ಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೊನಾ ಕಾರಣದಿಂದ ಕಾರಹುಣ್ಣಿಮೆಯ ಕರಿ ಹರಿಯೋ ಆಚರಣೆ ನಡೆದಿರಲಿಲ್ಲ. ಅದರೆ ಈ ಬಾರಿ ಕೊತೊನಾ ನಿಯಮ ಸಾಕಷ್ಟು ಸಡಿಲವಾಗಿರುವುದರಿಂದ ಗ್ರಾಮದ ಜನರು ಬಲು ಹುರುಪಿನಿಂದಲೇ ಕಾರಹುಣ್ಣಿಮೆ ಕರಿ ಹರಿಯುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.
ಕಾಖಂಡಕಿ ಗ್ರಾಮದ ಪಾಟೀಲರ ಮನೆಯಿಂದ ಆರಂಭವಾಗೋ ಕರಿ ಹರಿಯೋ ನಾನಾ ಆಚರಣೆಗಳು ನಂತರ ಅದೇ ಪಾಟೀಲರ ಮನೆಯಿಂದ ಎತ್ತುಗಳನ್ನು ಕರಿ ಹರಿಯುವ ಪದ್ದತಿ ಮಾಡುವರೆಗೂ ಇಲ್ಲಿ ತರಹೇವಾರಿ ಆಚರಣೆಗಳು ನಡೆಯುತ್ತವೆ. ಕರಿ ಹರಿಯುವ ಆಚರಣೆಯಲ್ಲಿ ಇಲ್ಲಿ ಎತ್ತು ಹಾಗೂ ಹೋರಿಗಳನ್ನು ಓಡಿಸಲಾಗುತ್ತದೆ ಎನ್ನುಥತಾರೆ ಗ್ರಾಮದ ಯುವ ಸಂತೋಷ ಕುಲಕರ್ಣಿ.
ಗ್ರಾಮದ ನಾನಾ ಮನೆತನದವರು ತಂತಮ್ಮ ಎತ್ತು ಹಾಗೂ ಹೋರಿಗಳನ್ನು ಅಲಂಕಾರ ಮಾಡಿ ಓಡಿಸಿದರು. ಅಲ್ಲದೇ ಉದ್ದವಾದ ಹಗ್ಗಳನ್ನು ಅವುಗಳಿಗೆ ಕಟ್ಟಿ ಗ್ರಾಮದ ಮಧ್ಯಭಾಗದಲ್ಲಿ ತಂದು ಓಡಿಸಿದರು. ಒಂದೊಂದೇ ತಂಡದ ಯುವಕರು ಆ ಎತ್ತುಗಳನ್ನು ಬೆದರಿಸುತ್ತ ರೊಚ್ಚಿಗೇಳಿಸಿದರು. ಅಗ ಅಲ್ಲಿ ನೆರೆದವರು ಹೌಹಾರಿ ರಕ್ಷಣೆಗೆ ಓಡುತ್ತಿದ್ದರು.
ಕೆಲವು ಎತ್ತುಗಳಿಗೆ ಮದ್ಯವನ್ನೂ ಕುಡಿಸಿರುವ ಆರೋಪ ಕೇಳಿ ಬಂದವು. ಇದೇ ಕಾರಣಕ್ಕೆ ಮದ್ಯದ ಅಮಲಿನಲ್ಲಿದ್ದ ಎತ್ತು ಹಾಗೂ ಹೋರಿಗಳು ಕಂಡ ಕಂಡ ಓಡುತ್ತ, ಕಂಡ ಕಂಡವನ್ನು ಹಾಯಲು ಅಂದರೆ ಗುಮ್ಮಲು ಮುನ್ನುಗ್ಗುತ್ತಿದ್ದವು ಎಂದು ಸಾರ್ವಜನಿಕರು ಚರ್ಚಿಸುತ್ತಿದ್ದರು.
ಕೆಲವರು ಎತ್ತುಗಳು ಹಾಯ್ದ ಪರಿಣಾಮನೆಲ್ಕೆ ಉರುಳಿದ ಘಟನೆಗಳೂ ನಡೆದವು. ಈ ಹಿಂದೆ ಎತ್ತುಗಳಿಂದ ಗುಮ್ಮಿಸಿಕೊಂಡು ಕೆಲವರಿಗೆ ಗಾಯಗಳೂ ಆದ ಉದಾಹರಣೆಗಳೂ ಇವೆ.
ಉತ್ತರ ಕರ್ನಾಟಕ ಭಾಗದಲ್ಲಿ ಕಾರುl ಹುಣ್ಣಿಮೆಯನ್ನು ಸಂಭ್ರಮದಿಂಸ ಆಚರಣೆ ಮಾಡುತ್ತಾರೆ. ಇಲ್ಲಿ ಕರಿ ಹರಿಯುವ ಆಚರಣೆ ಗಮನ ಸೆಳೆಯುತ್ತಿದೆ. ಪಾಟೀಲ ಮನೆಯತನದ ಮೂಲಕ ಎಲ್ಲಾ ಪದ್ದತಿಗಳು ನಡೆಯುತ್ತವೆ. ಜೊತೆಗೆ ಗ್ರಾಮದಲ್ಲಿ ಎತ್ತುಗಳನ್ನು ಹೊರಿಗಳನ್ನು ಓಡಿಸುವುದು ಬೆದರಿಸುವ ಆಚರಣೆ ಕಾಖಂಡಕಿ ಗ್ರಾಮದಲ್ಲಿ ಮಾತ್ರ ನಡೆಯುತ್ತದೆ. ಎತ್ತುಗಳ ಓಟದ ಬಳಿಕ ಮತ್ತೇ ಕೆಲ ಸಂಪ್ರದಾಯಗಳನ್ನು ಆಚರಣೆ ಮಾಡುವುದರ ಮೂಲಕ ಕರಿ ಹರಿಯುವ ಪದ್ದತಿಗೆ ತೆರೆ ಬೀಳುತ್ತದೆ ಎಂಬುದು ಗ್ರಾಮದ ಮುಖಂಡರ ಅಭಿಪ್ರಾಯವಾಗಿದೆ.
ಕಾಖಂಡಕಿಯ ಕಾರಹುಣ್ಣಿಮೆ ಕರಿ ಹರಿಯುವ ಕಾರ್ಯಕ್ರಮ ವೀಕ್ಷಿಸಲು ನೆರೆಯ ಗ್ರಾಮಗಳ ಜನರೂ ಬಂದಿದ್ದು ಗಮನ ಸೆಳೆಯಿತು.
ಕರಿ ಹರಿಯುವ ಆಚರಣೆಗೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ಈ ಆಚರಣೆಯ ಜನಪ್ರೀಯತೆಗೆ ಸಾಕ್ಷಿಯಾಗಿದೆ.
ಜನರ ನಿಯಂತ್ರಣಕ್ಕೆ ಪೊಲೀಸರ ಭದ್ರತೆ ಜೊತೆಗೆ ಡಿಎಆರ್ ತುಕಡಿಯನ್ನೂ ಸಹ ನಿಯೋಜಿಸಲಾಗಿತ್ತು. ಆಚರಣೆಗೆ ಎತ್ತು ಹೋರಿಗಳನ್ನು ಸಹಜವಾಗಿ ಓಡಿಸಲು. ಅದು ಬಿಟ್ಟು ಮದ್ಯ ಕುಡಿಸಿ ಬೇಕಾಬಿಟ್ಟಿಯಾಗಿ ಓಡಿಸೋದು ಸರಿಯಲ್ಲ ಎಂಬ ಅಭಿಪ್ರಾಯವೂ ಇಲ್ಲಿ ವ್ಯಕ್ತವಾಯಿತು.
ಈ ನಿಟ್ಟಿನಲ್ಲಿ ಸಂಬಂಧಿಸಿ ಆಧಿಕಾರಿಗಳು ಸಂಘಟನೆಗಳು ಗಮನ ಹರಿಸಬೇಕಿದೆ.