Lokayukta Case: ಬಸವ ನಾಡಿನಲ್ಲಿ ಹಸಿರು ಕೊರತೆ- ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೇಸ್- ಲೋಕಾಯುಕ್ತ ಬಿ. ಎಸ್. ಪಾಟೀಲ

ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ(Vijayapura District) ಅರಣ್ಯ ಪ್ರದೇಶ+Forest Kind) ನಿಗದಿಗಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ(Department Officers) ವಿರುದ್ಧ ಕೇಸ್(Case) ಹಾಕಲಾಗುವುದು ಎಂದು ಲೋಕಾಯುಕ್ತ ಬಿ..ಎಸ್. ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿ. ಎಸ್. ಪಾಟೀಲ

ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಸರಕಾರದ ನಾನಾ ಇಲಾಖೆಗಳಿಗೆ ಭೇಟಿ ನೀಡುತ್ತಿದ್ದಾರೆ. ‌ಈ ಸಂದರ್ಭದಲ್ಲಿ ಸಸಿ‌ನೆಡುವ ಮತ್ತೀತರ ಕಾರ್ಯಗಳ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯಲ್ಲಿ ಭೌಗೋಳಿಕವಾಗಿ ನಿಗದಿಗಿಂತ ಅತೀ ಕಡಿಮೆ ಅರಣ್ಯ‌ ಪ್ರದೇಶವಿದೆ. ಶೇ. 33 ರಷ್ಟು ಹಸಿರು ಪ್ರದೇಶ ಇರಬೇಕು. ಆದರೆ, ಜಿಲ್ಲೆಯಲ್ಲಿ ಕೇವಲ ಶೇ. 0.17 ಅಂದರೆ ಶೇ. 1ಕ್ಕಿಂತಲೂ‌ ಕಡಿಮೆ ಅರಣ್ಯ ಪ್ರದೇಶಗಳಿವೆ. ಈ ವೈಪಲ್ಯದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಇಲ್ಲವೇ ವಿಭಾಗ ಮಟ್ಟದ ಅಥವಾ ರಾಜ್ಯಮಟ್ಡದ ಅರಣ್ಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಅವರು‌ ತಿಳಿಸಿದರು.

ಅರಣ್ಯದ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತುವೆ. ಈಗ ವಿಜಯಪುರ ಜಿಲ್ಲೆಯಲ್ಲಿ ನೀರಾವರಿಯಾಗಿದೆ. ಕಾಲುವೆಗಳ ಮೂಲಕ ನೀರು ಸಿಗುತ್ತಿದೆ. ಜನ ಕೂಡ ಗಿಡ ನೆಡಲು ಮುಂದಾಗುತ್ತಿದ್ದಾರೆ. ಆದರೆ, ಸಸಿ ವಿತರಣೆಯಲ್ಲಿ ತಾರತಮ್ಯವಾಗುತ್ತಿದೆ. ಅರಣ್ಯ ಪ್ತದೇಶ‌ ಹೆಚ್ಚಾಗಿರುವ ಜಿಲ್ಲೆಗಳು ಮತ್ತು‌ ನಿಗದಿಗಿಂತ‌ ಕಡಿಮೆ ಇರುವ ಜಿಲ್ಲೆಗಳಿಗೆ ಸಸಿ ವಿತರಣೆಯಲ್ಲಿ ಒಂದೇ ಮಾನದಂಡ ಅನುಸರಿಸುವುದು ಸರಿಯಲ್ಲ. ಅರಣ್ಯ ಪ್ರದೇಶ ಕಡಿಮೆ ಇರುವ ವಿಜಯಪುರದಂಥ ಜಿಲ್ಲೆಗಳಿಗೆ ಹೆಚ್ಚಿನ ಸಸಿ ನೀಡಬೇಕು. ಅರಣ್ಯ ಸಂಪತ್ತು ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತರು ತಿಳಿಸಿದರು.

ಆಡಳಿತದಲ್ಲಿ ಚುರುಕಿಗೆ ಕ್ರಮ

ಈಗಾಗಲೇ ವಿಜಯಪುರ ಮತ್ತು ಬಾಗಲಕೋಟೆ ಲೋಕಾಯುಕ್ತ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬಾಗಲಕೋಟೆ ಜಿಲ್ಲೆಯಲ್ಲಿ ಅಧಿಕಾರಿಗಳಯ ಎಲ್ಲ ತಾಲೂಕುಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿಯೂ ಎಲ್ಲ ತಾಲೂಕುಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

ಕಂದಾಯ, ಪಂಚಾಯಿತಿ ರಾಜ್, ಆರೋಗ್ಯ ಇಲಾಖೆ, ಆಸ್ಪತ್ರೆಗಳು ಸೇರಿದಂತೆ ಯಾವುದೇ ಇಲಾಖೆಗಳಿದ್ದರೂ ಜನರಿಗೆ ತಲುಪಬೇಕಾದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು. ದೂರುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸಾಧ್ಯವಾದರೆ ತಕ್ಷಣವೇ ಪರಿಹಾರ ಒದಗಿಸಬೇಕು. ಪ್ರಕರಣಗಳು ಗಂಭೀರವಾಗಿದ್ದರೆ ಕೇಸ್ ದಾಖಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಬ್ ರಿಜಿಸ್ಟ್ರಾರ್ ಆಫೀಸ್ ಇರಲಿ, ಆರ್ ಟಿ ಓ ಕಚೇರಿಯ ಇರಲಿ, ತಾಲೂಕು ಆಫೀಸ್ ಇರಲಿ, ಯಾವುದೇ ಪಂಚಾಯಿತಿ ಇರಲಿ, ವೈಯಕ್ತಿಕ ಸಮಸ್ಯೆ ಇರಲಿ ಸಾಮೂಹಿಕ ಸಮಸ್ಯೆ ಯಾಬುದೇ ಇರಲಿ, ನಗರದಲ್ಲಿ ತ್ಯಾಜ್ಯ ವಿಲೇವಾರಿಯೇ ಇರಲಿ, ಚರಂಡಿ ಸಮಸ್ಯೆ ಇರಲಿ. ಅವುಗಳಿಗೆ ಸ್ಪಂದಿಸಲು ಸೂಚನೆ ನೀಡಿದ್ದೇನೆ ಎಂದು ಬಿ. ಎಸ್. ಪಾಟೀಲ ತಿಳಿಸಿದರು.

 

ತಹಸೀಲ್ದಾರ್ ಆಫೀಸುಗಳಲ್ಲಿ ಇಲ್ಲಿವರೆಗೆ ಬಾಕಿ ಇರುವ ದೂರುಗಳ ಕುರಿತು ಫಸ್ಟ ಮಾಹಿತಿ ನೀಡಲು ಕೋರಲಾಗಿದೆ. ತಪ್ಪಿತಸ್ಥರ ವಿರುದ್ಧ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಮಂದಗತಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗುವುದು. ಎಲ್ಲ ವಿಭಾಗಗಳಲ್ಲಿ ಅಧಿಕಾರಿಗಳು ಚಾಕಚಕ್ಯತೆಯಿಂದ ಕೆಲಸ ಮಾಡಿದರೆ ಆಡಳಿತದಲ್ಲಿ ಸುಧಾರಣೆ ಸಾಧ್ಯ ಎಂದು ಹೇಳಿದ ಅವರು, ಸಮಸ್ಯೆಗಳನ್ನು ಎದುರಿಸುವ ಜನರು ತಮ್ಮ ದೂರುಗಳನ್ನು‌ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತರಬೇಕು. ಇದರಿಂದ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಮತ್ತು ಸಮಾರೋಪದಲ್ಲಿ ಪರಿಹಾರ ಒದಗಿಸಲು ಸಾಧ್ಯ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಮತ್ತು‌ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌