Amrut Bharati: ಹಲಸಂಗಿಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ- ಸಂಸದ ರಮೇಶ ಜಿಗಜಿಣಗಿ, ಶಾಸಕ ಡಾ. ದೇವಾನಂದ‌ ಚವ್ಹಾಣ ಭಾಗಿ

ವಿಜಯಪುರ: ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆಯಿತು.

ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಹಲಸಂಗಿಯಲ್ಲಿ ಸಂಸದ ರಮೆಶ ಜಿಗಜಿಣಗಿ, ಶಾಸಕ ಡಾ. ದೇವಾನಂದ ಚವ್ಹಾಣ ಚಾಲನೆ ನೀಡಿದರು

ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಿಜೆಪಿ ಶಾಸಕ ರಮೇಶ ಜಿಗಜಿಣಗಿ‌ ಮತ್ತು ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಉದ್ಘಾಟಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಡೆದ ಈ ಕಾರ್ಯಕ್ರಮ ಹಲಸಂಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ, ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ಚಡಚಣ ತಹಶಿಲ್ದಾರ ಶಿರಹಟ್ಟಿ, ಕಾರ್ಯಕ್ರಮದ ಸಂಯೋಜಕ ರಾಘವೇಂದ್ರ ಕಾಪಸೆ, ಹಲಸಂಗಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಸುವರ್ಣ ತಳಕೇರಿ, ಪಿಎಸ್ಐ ಸಿದ್ದಾರಾಮ ಯಡಹಳ್ಳಿ, ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ಎ. ಡಿ. ದ್ರಾಕ್ಷಿ, ಗ್ರಾ. ಪಂ. ಸದಸ್ಯರು, ಮುಖಂಡರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಬಾಲಪ್ಪ ಗೂಗಿಹಾಳ ವಿಶೇಷ ಉಪನ್ಯಾಸ ನೀಡಿದರು.

ಕಾರ್ಕ್ರಮಕ್ಕೂ ಮೊದಲು ಹಲಸಂಗಿ ಗ್ರಾಮದ ದ್ವಾರ ಬಾಗಿಲ ಬಳಿ ಇರುವ ಗ್ರಾ. ಪಂ. ಆವರಣದಿಂದ ಭಾರತಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅಧಿಕಾರಿಗಳು ಮೆರವಣಿಗೆಗೆ ಚಾಲನೆ ನೀಡಿದರು.

ದೇಶ ಭಕ್ತಿಗೀತೆಗಳು, ನಾಡಗೀತೆಯೊಂದಿಗೆ, ಶಾಲಾ ಮಕ್ಕಳು ಪಾಲ್ಗೊಂಡರು. ಡೋಳ್ಳು ಕುಣಿತ, ಗೊಂಬೆ ಕುಣಿತ, ಕರಬಲ್ ಹೆಜ್ಜೆ, ಯುವಕ ರಿಂದ ಹಲಗೆ ಬಾರಿಸುವದು, ರಾಷ್ಟ್ರೀಯ ಸ್ವಯಂ ಸೇವಕ ತಂಡ, ಮಹಿಳೆಯರು ಕುಂಬ ಮೇಳದಲ್ಲಿ ಭಾಗಿಯಾದರು. ಹಲಸಂಗಿ ಪ್ರಮುಖ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣವರೆಗೆ ನಡೆಯಿತು

Leave a Reply

ಹೊಸ ಪೋಸ್ಟ್‌