Arrest Protest: ಗುಮ್ಮಟ ನಗರಿಯಲ್ಲಿ ನಾನಾ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ- ಯಾಕೆ ಗೊತ್ತಾ?

ವಿಜಯಪುರ: ನಾನಾ ಪ್ರಗತಿಪರ ಸಂಘಟನೆಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲವಾಡ ಬಂಧನ‌ ಖಂಡಿಸಿ ಪ್ರಗತಿಪರ ಸಂಘಟನೆಗಳ ವೇದಿಕೆ ಮತ್ತು ಪ್ರಾಂತ ರೈತ ಸಂಘ ಸಂಯುಕ್ತಾಶ್ರಯದಲ್ಲಿ ಈ ಪ್ರತಿಭಟನೆ ನಡೆಸಲಾಯಿತು.
ಗುಜರಾತ್ ಭಯೋತ್ಪಾದನೆ ನಿಗ್ರಹ ದಳವು ಆಧಾರರಹಿತವಾಗಿ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದೆ. ಇದು ಬಿಜೆಪಿ ಸರಕಾರಗಳ ಪ್ಯಾಸಿಸ್ಟ್ ಧೊರಣೆಯ ಮುಂದುವರಿಕೆಯಾಗಿದೆ. 2002ರ ಗುಜರಾತ ಗಲಭೆಯಲ್ಲಿ ಅಂದಿನ‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಅಂದಿನ ಸರಕಾರ ಮತ್ತು ಪೊಲೀಸ್ ವ್ಯವಸ್ಥೆ ಎಲ್ಲವೂ ಕೋಮು ಗಲಭೆಗೆ ಸಹಕಾರ ನೀಡಿದ್ದವು ಎಂಬ ಆರೋಪ ಕೇಳಿಬಂದಿತ್ತು. ಆದರೆ, ಶನಿವಾರ ಸುಪ್ರೀಂ ಕೋರ್ಟ್ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದೆ. ಇದರ ಬೆನ್ನಲ್ಲೇ ಈ ಬಂಧನವಾಗಿರುವುದು ಸರ್ವಾಧಿಕಾರವಲ್ಲದೆ ಮತ್ತೇನೂ ಅಲ್ಲ. ಆದ್ದರಿಂದ ಕೂಡಲೇ ತೀಸ್ತಾ ಸೆಟಲ್ವಾಡ್ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಾನಾ ಮುಖಂಡರು, ಇತ್ತೀಚಿನ ದಿನಗಳಲ್ಲಿ ಸರಕಾರದ ವೈಪಲ್ಯವನ್ನು ಪ್ರಶ್ನಿಸುವವರನ್ನು ಮತ್ತು ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವವರನ್ನು ರಕ್ಷಣೆ ಹಾಗೂ ಸುರಕ್ಷತೆಯ ಹೆಸರಿನಲ್ಲಿ ವ್ಯವಸ್ಥಿತವಾಗಿ ಬಂಧಿಸಿ ಹೋರಾಟ, ಚಳವಳಿಗಳನ್ನು ಸದೆ ಬಡಿಯಲು ಪ್ರಯತ್ನಿಸುತ್ತಿದೆ. ಆದರೆ ಜನರ ಆಕ್ರೋಶ ಹೆಚ್ಚಿದಾಗ ಹೋರಾಟ ಭುಗಿಲೇಳುವದನ್ನು ತಡೆಯಲಾಗುವುದಿಲ್ಲ ಎಂಬುದನ್ನು ಇತಿಹಾಸ ಸಾಬೀತು ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರಾದ ಸದಾನಂದ ಮೋದಿ, ಅಕ್ರಮ ಮಾಶಾಳಕರ, ಇರ್ಫಾನ್ ಶೇಖ್, ನ್ಯಾಯವಾದಿಗಳಾದ ತಿಪ್ಪಣ್ಣ ದೊಡಮನಿ, ಲಕ್ಮಣ ಹಂದ್ರಾಳ, ಸಿದ್ದಲಿಂಗ ಬಾಗೇವಾಡಿ, ನಿರ್ಮಲಾ ಹೊಸಮನಿ, ಸುರೇಖಾ ರಜಪೂತ, ಅಕ್ಷಯ ಅಜಮನಿ, ಶಂಕರ ಚಲವಾದಿ, ಸಂಜು, ದಸ್ತಗೀರ ಉಕ್ಕಲಿ ಮುಂತಾದವರು ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಅನುಶ್ರೀ ಹಜೇರಿ, ಕಾವೇರಿ ರಜಪೂತ, ಅನುರಾಗ ಸಾಳುಂಕೆ, ಗೀತಾ ಕಟ್ಟಿ, ಸುನಂದಾ ನಾಯಕ, ರೂಪಾ ಕೊಟ್ಯಾಳ, ಜಾಯಿದ್ ಸಿಂದಗಿ, ಅತಾವುಲ್ಲಾ ದ್ರಾಕ್ಷಿ, ಕೃಷ್ಣಾ ಜಾಧವ, ಎಂ. ಸಿ. ಕಮ್ಮಾರ, ಶರಣು ಗಡ್ಡಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌