ವಿಜಯಪುರ: ದೇಶ ಕಾಯುವ ಯೋಧರನ್ನು ಕೇಂದ್ರ ಸರಕಾರ ಬಿಜೆಪಿ ಗುತ್ತಿಗೆ ಕಾರ್ಮಿಕರನ್ನಾಗಿ ಮಾಡಲು ಹೊರಟಿದೆ ಎಂದು ಆರೋಪಿಸಿ ಅಗ್ನಿಪಥ ಯೋಜನೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಗುಮ್ಮಟ ನಗರಿ ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ್ ನೇತೃತ್ವದಲ್ಲಿ ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯಪುರ ನಗರದ ಡಾ. ಬಿ. ಆರ್. ಅಂಬೇಡ್ಕರ ಚೌಕಿನಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್‌ಹಮೀದ ಮುಶ್ರೀಫ್, ಕೇಂದ್ರದ ಬಿಜೆಪಿ ಸರಕಾರ ಯುವಕರಿಗಾಗಿ ರಕ್ಷಣಾ ಕ್ಷೇತ್ರದಲ್ಲಿ ಅಗ್ನಿಪಥ ಯೋಜನೆ ಹಾರಿ ಮಾಡುತ್ತಿದೆ. ಇದರಿಂದ ದೇಶಕ್ಕೆ ಹಾಗೂ ಸೈನ್ಯಕ್ಕೆ ಯಾವುದೇ ಉಪಯೋಗವಿಲ್ಲ. ಇದು ಯುವಕರು ನಿರುದ್ಯೋಗಿಗಳಾಗುವ ಯೋಜನೆಯಾಗಿದ್ದು, ಇದರಿಂದ ದೇಶಕ್ಕೆ ಹಾಗೂ ಸೈನ್ಯಕ್ಕೆ ಮಾಡಿದ ಅವಮಾನ ಮಾಡಿದಂತಾಗಿದೆ. ಈ ಯೋಜನೆಯನ್ನು ಹಿಂಪಡೆಯಲು ಆಗ್ರಹಿಸಿ ಇಡೀ ದೇಶಾದ್ಯಂತ ಹೋರಾಟಗಳು ಪ್ರಾರಂಭವಾಗಿವೆ. ಕಾಂಗ್ರೆಸ್ ಪಕ್ಷ ಈ ಯೋಜನೆಯನ್ನು ಬಲವಾಗಿ ಖಂಡಿಸುತ್ತದೆ. ಅಲ್ಲದೇ, ಕೇಂದ್ರ ಸರಕಾರ ಈ ಯೋಜನೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮಹ್ಮದರಫೀಕ ಟಪಾಲ ಎಂಜಿನಿಯರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆಜಾದ ಪಟೇಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಛಾಯಾಗೋಳ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪೂರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಮಹಾದೇವಿ ಗೋಕಾಕ, ಸೋಸಿಯಲ್ ಮಿಡಿಯಾ ವಿಭಾಗದ ಮಾಜಿ ಅಧ್ಯಕ್ಷ ಇರ್ಫಾನ ಶೇಖ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ನಾಟಿಕಾರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಬ್ಬೀರ ಜಾಗೀರದಾರ ಈ ಸಂದರ್ಭದಲ್ಲಿ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಜಿ. ಪಂ. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಸಾಹೇಬಗೌಡ ಎನ್. ಬಿರಾದಾರ, ಐ. ಎಂ. ಇಂಡಿಕರ, ಶರಣಪ್ಪ ಯಕ್ಕುಂಡಿ, ಸೋಮನಾಥ ಕಳ್ಳಿಮನಿ, ರಾಕೇಶ ಕಲ್ಲೂರ, ಹಾಜಿಲಾಲ ದಳವಾಯಿ, ಚನಬಸಪ್ಪ ನಂದರಗಿ, ಜಿಲ್ಲಾ ಮಹಿಳಾ ಸೇವಾದಳ ಅಧ್ಯಕ್ಷೆ ರಾಜೇಶ್ವರಿ ಚೋಳಕೆ, ರವೀಂದ್ರ ಜಾಧವ, ತಿಪ್ಪಣ್ಣ ಕಮಲದಿನ್ನಿ, ಧನರಾಜ ಎ., ಎಂ. ಎ. ಬಕ್ಷಿ, ಅಜೀಮ ಇನಾಮದಾರ, ಮೈನುದ್ದೀನ ಬೀಳಗಿ, ಇದ್ರೂಸ್ ಬಕ್ಷಿ, ಮಂಜುನಾಥ ನಿಡೋಣಿ, ಮಲ್ಲು ತೊರವಿ, ಶಬ್ಬೀರ ಮನಗೂಳಿ, ಫಯಾಜ ಕಲಾದಗಿ, ಸುನೀಲ ಬಿರಾದಾರ, ಮಂಜುಳಾ ಗಾಯಕವಾಡ, ಗಂಗೂಬಾಯಿ ಧೂಮಾಳೆ, ಭಾರತಿ ಹೊಸಮನಿ, ಆಸ್ಮಾ ಕಾಲೇಬಾಗ, ಶಮಿಮ ಅಕ್ಕಲಕೋಟ, ದೀಪಾ ಕುಂಬಾರ, ಲಲಿತಾ ದೊಡಮನಿ, ಆಯೇಶಾ ಬೇಪಾರಿ, ಲಕ್ಷ್ಮಿ ಬಳ್ಳಾರಿ, ಸೂಫಿಯಾ ವಾಟಿ, ಅರುಣ ಭಜಂತ್ರಿ, ನಾಸೀರ್ ನಾಗರಬಾವಡಿ, ಆಸಿಫ್ ಜುನೇದಿ, ಕಲ್ಲಪ್ಪ ಪಾರಶೆಟ್ಟಿ, ಆಬಿದ್ ಸಂಗಮ, ಬಸವರಾಜ ಬಿರಾದಾರ, ಸುಂದರಪಾಲ ರಾಠೋಡ, ಮೀರಾಸಾಬ ಮುಲ್ಲಾ, ಈರಪ್ಪ ಕುಂಬಾರ, ಸಂತೋಷ ಬಾಲಗಾಂವಿ, ತಾಜುದ್ದೀನ ಖಲೀಫಾ, ರಾಜೇಸಾಬ ಹೊನ್ನುಟಗಿ, ಅಕ್ಬರ್ ನಾಯಕ, ಆಸಿಫ್ ಅಥಣಿ, ಶಕೀಲ ಸುತಾರ, ಇಸಾಕ ಗುಲಬರ್ಗಾ, ಅಲ್ಲಾಬಕ್ಷ ಮುಲ್ಲಾ, ಶಾಹು ಇಂಗಳೆ, ಲತೀಫ್ ಕಲಾದಗಿ, ಎಂ. ಎಚ್. ಮಹಾಬರಿ, ಸಂತೋಷ ಪೂಜಾರಿ, ಪ್ರಕಾಶ ಚವ್ಹಾಣ, ಈರಪ್ಪ ಕುಂಬಾರ, ಬಾಬು ಯಾಳವಾರ, ಪಿರೋಜ ಬಳಬಟ್ಟಿ, ವಸೀಮ್ ಇನಾಮದಾರ, ಅಸ್ಫಾಕ್ ಮನಗೂಳಿ, ಜಾವೀದ ಶೇಖ್, ಆಸಿಫ್ ಪುಂಗೆವಾಲೆ, ಮಹಿಬೂಬಸಾಬ ಶೇಖ್ ಮುಂತಾದವರು ಉಪಸ್ಥಿತರಿದ್ದರು.