ವಿಜಯಪುರ: ರಾಜ್ಯ ಬಿಜೆಪಿ ಸರಕಾರ 40% ಸರಕಾರ ಎಂದು ಪ್ರತಿಪಕ್ಷಗಳ ಆರೋಪ ವಿಚಾರವಾಗಿ ಪ್ರಧಾನಿ ಕಚೇರಿ ಬಹಳ ಬೇಗ ವರದಿ ಕೇಳಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ವ್ಯಂಗ್ಯವಾಡಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್. ಟಿ-1 ರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ರಾಜ್ಯ ಸರಕಾರ 40% ಕಮಿಷನ್ ಸತಕಾರ ಎಂದು ಪ್ರತಿಪಕ್ಷಗಳ ಆರೋಪ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ವರದಿ ಕೇಳಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
40% ಕಮಿಷನ್ ಕುರಿತು ಪ್ರಧಾನಿ ಕಚೇರಿ ಬಹಳ ಬೇಗ ವರದಿ ಕೇಳಿದೆ ಎಂದು ವ್ಯಂಗ್ಯವಾಡಿದ ಅವರು, ಪಿಎಂ ಕಚೇರಿ ಬೇಗಾ ವರದಿ ಕೇಳಿದೆ. ಪ್ರಧಾನಿ ಕಚೇರಿ ಬಹಳ ಬೇಗ ಎಚ್ಚೆತ್ತುಕೊಂಡಿದೆ ಎಂದು ವ್ಯಂಗ್ಯವಾಡಿದತು.
ಬೇರೆ ವಿಷಯಗಳಲ್ಲಿ ಎರಡನೇ ದಿನಕ್ಕೆ ಇಡಿ ನೋಟೀಸ್, ಇನಕಮ್ ಟ್ಯಾಕ್ಸ್ ನೊಟೀಸ್, ಸಿಬಿಐ ನೋಟೀಸ್ ಬರುತ್ತದೆ. ಇಲ್ಲಿ 40% ಕಮೀಷನ್ ವಿಚಾರ ಒಂದು ವರ್ಷದ ಹಿಂದೆಯೇ ಬಹಿರಂಗವಾಗಿದೆ. ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ನವರು ಒಂದು ವರ್ಷದ ಹಿಂದೆಯೇ ಆರೋಪ ಮಾಡಿದ್ದಾರೆ. ಈಗ 40% ಕಮಿಷನ್ ವಿಚಾರ ಮುಚ್ವಿ ಹಾಕಲು ಹೊರಟಿದ್ದಾರೆ. ಒಂದು ರಿಪೋರ್ಟ್ ಕೇಳಿ ಎನ್ಕ್ವಾಯರಿ ಮಾಡಿ ಮುಚ್ಚಿ ಹಾಕಲಿಕ್ಕೆ ರಿಪೋರ್ಟ್ ಕೇಳಿರಬಹುದು ಎಂದೆನಿಸುತ್ತದೆ ಎಂದು ಎಂ. ಬಿ. ಪಾಟೀಲ ಅಭಿಪ್ರಾಯಪಟ್ಟರು.
ವಿಧಾನಸಭೆ ಚುನಾವಣೆ ಬರ್ತಿದೆಯಲ್ಲ. ಈ ಕಾರಣ ಮುಚ್ಚಿ ಹಾಕಲು ಯತ್ನ ಮಾಡುತ್ತಿದ್ದಾರೆ. ಜನರು 40% ವಿಚಾರದಲ್ಲಿ ಬೇಸರಗೊಂಡಿದ್ದಾರೆ. ಅದಕ್ಕಾಗಿ ಐ ವಾಶ್ ಮಾಡಲು ಹೊರಟಿದ್ದಾರೆ. ಇದನ್ನು ಯಾವ ರೀತಿ ತನಿಖೆ ಮಾಡಿ ಎಷ್ಟು ಜನರನ್ನು ಬಂದಿಸುತ್ತಾರೆ ಎಂಬುದನ್ನು ನೋಡೋಣ. ಅವರ ವಿರುದ್ಧ ಯಾವ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನ ನೋಡೋಣ. ಅವರು ಕೈಗೊಳ್ಳುವ ಕ್ರಮಗಳ ಮೇಲೆ ಗೊತ್ತಾಗತ್ತೆ ಇದು ಐ ವಾಶ್ ಅಥವಾ ಏನು ಎಂಬುದು ಗೊತ್ತಾಗಲಿದೆ ಎಂದು ಅವರು ಹೇಳಿದರು.
ಪಠ್ಯ ಪರಿಷ್ಕರಣೆ ವಿಚಾರ
ಪಠ್ಯಪುಸ್ತಕ ಪರಿಷ್ಕರಣೆ ಬಳಿಕ ಇದೀಗ ಸಾಕಷ್ಟು ಅಪಸ್ವರಗಳು ಮತ್ತು ವಿರೋಧಗಳು ಬಂದ ಬಳಿಕ ಇದೀಗ ಸರಕಾರ ಬಸವಣ್ಣನವರ ಪಠ್ಯದಲ್ಲಿ ತಿದ್ದುಪಡಿಗೆ ಮುಂದಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರೊಹೀತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಣೆಯಾದ ಪಠ್ಯವನ್ನು ಸಾರಾಸಗಟಾಗಿ ತಿರಸ್ಕಾರ ಮಾಡಬೇಕು. ಚಕ್ರತೀರ್ಥ ಸಮಿತಿ ಬಸವಣ್ಣನವರಿಗೆ ಅಷ್ಟೇ ಅಲ್ಲ, ಕುವೆಂಪು, ಆದಿಚುಂಚನಗಿರಿ ಸ್ವಾಮೀಜಿ, ಸಿದ್ದಗಂಗಾ ಸ್ವಾಮೀಜಿ ನಾರಾಯಣಗುರು ಅವರಿಗೆ ಅಪಮಾನ ಮಾಡಿದ್ದಾರೆ. ಮಹಾತ್ಮ ಗಾಂಧೀಜಿಯನ್ನೂ ಬಿಟ್ಟಿಲ್ಲ. ಈಗ ಸಮಿತಿಯನ್ನು ವಿಸರ್ಜಿಸಲಾಗಿದೆ. ಸಮೀತಿ ನೀಡಿದ ಪರಿಷ್ಕೃತ ಪಠ್ಯಕ್ರಮವನ್ನು ತಿರಸ್ಕಾರ ಮಾಡಬೇಕು. ಬರಗೂರು ರಾಮಚಂದ್ರಪ್ಪ ಅವರು ಹಿಂದೆ ಪರಿಷ್ಕರಿಸಿದ್ದ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಅಲ್ಲದೇ, ಪಠ್ಯ ಪರಿಷ್ಕರಣೆಗೆ ರಾಜ್ಯ ಸರಕಾರ ಹೊಸ ಸಮಿತಿ ರಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಶ್ರೇಷ್ಠ ಸಾಹಿತಿಗಳು, ಚಿಂತಕರು, ವಿದ್ವಾಂಸರು, ಇತಿಹಾಸಕಾರರ ನೇತೃತ್ವದ ಸಮಿತಿ ರಚಿಸಲಿ. ವಿಶ್ವಾಸಾರ್ಹತೆ ಹೊಂದಿದ ಜನರ ನೇತ್ರತ್ವದಲ್ಲಿ ಹೊಸ ಪಠ್ಯ ಪರಿಷ್ಕರಣಾ ಸಮಿತಿ ರಚನೆಯಾಗಲಿ. ಇತಿಹಾಸವನ್ನು ತಿರುಚದೇ ನಮ್ಮ ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವ ಕೆಲಸ ಆಗಬೇಕು ಎಂದು ಎಂ. ಬಿ. ಪಾಟೀಲ ಹೇಳಿದರು.
ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ ದೆಹಲಿ ಪ್ರವಾಸ ವಿಚಾರ
ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ದರಾಮಯ್ಯ ಮತ್ತು ಕೆ ಪಿ ಸಿ ಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ದಿಢೀರಾಗಿ ದೆಹಲಿಗೆ ಭೇಟಿ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರನ್ನು ನಮ್ಮ ಪಕ್ಷದ ವರಿಷ್ಟರು ಕರೆಯಿಸಿಕೊಂಡಿದ್ದಾರೆ. ಅದೇನು ಹೊಸದಲ್ಲ. ನಮ್ಮ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಕರೆಯಿಸಿಕೊಂಡಿದ್ದಾರೆ. ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡುತ್ತಾರೆ. ನಾನಾ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಅದರಲ್ಲಿ ಹೊಸದೇನೂ ಇಲ್ಲ ಎಂದು ಅವರು ಹೇಳಿದರು
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ವಿಚಾರ
ಮಹಾರಾಷ್ಟ್ರದ ಪರಿಸ್ಥಿತಿ ಗೊತ್ತಿದೆಯಲ್ಲ. ಆಪರೇಷನ್ ಕಮಲ ಇದು. ಕರ್ನಾಟಕದಲ್ಲಿ ಕಾಂಟ್ರ್ಯಾಕ್ಟರ್ ಅಸೋಷೊಯೇಷನ್ ಮಾಡಿದ್ದ ಆರೋಪ ಬಗ್ಗೆ ಗಮನ ಹರಿಸಲು ಒಂದು ವರ್ಷವಾಗುತ್ತದೆ. ಮಹಾರಾಷ್ಟ್ರದಲ್ಲಿ ಸಂಜಯ್ ರಾವತ್ ಗೆ ರಾಜಕೀಯ ಬೆಳವಣಿಗೆಯಾಗುತ್ತಿದ್ದಂತೆ ಇಡಿ ನೊಟೀಸ್ ಬರುತ್ತದೆ ಎಂದು ಅವರು ವ್ಯಂಗ್ಯವಾಡಿದರು. ಅಲ್ಲಿ 24 ಗಂಟೆಗಳಲ್ಲಿ ನೊಟೀಸ್ ಕೊಡುತ್ತಾರೆ. ಇಲ್ಲಿ 24 ಗಂಟೆಗಳಲ್ಲಿ ಆಗಿಲ್ಲ. ಆಪರೇಷನ್ ಕಮಲ ಮಹಾರಾಷ್ಟ್ರದಲ್ಲಿ ಮುಂದುವರೆದ ಭಾಗ. ಅದೊಂದು ಕೆಟ್ಟ ಚಾಳಿ. ಕರ್ನಾಟಕ, ಗೋವಾದಲ್ಲಿ ಆಪರೇಷನ್ ಕಮಲ ಆಗಿದೆ. ಈಗ ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಆಪರೇಷನ್ ಕಮಲ ಪ್ರಜಾತಂತ್ರದ ವಿರುದ್ಧವಾಗಿದೆ. ಇವರು ಜನರಿಗೆ ನೀತಿ ಪಾಠ ಹೇಳುತ್ತಾರೆ. ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಜನ ಇವರಿಗೆ ಬುದ್ದಿ ಕಲಿಸುತ್ತಾರೇ ಎಂದು ಸೋಮದೇವರಹಟ್ಟಿ ಲಂಬಾಣಿ ತಾಂಡಾ 1 ರ ದುರ್ಗಾದೇವಿ ಭಾಗಿಯಾಗಲು ಬಂದಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.