Yatnal Inaguration: ಶಾಸಕ ಯತ್ನಾಳ ಅವರಿಂದ ತರಗತಿ ಕೊಠಡಿ, ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ವಿಜಯಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ 7 ಹೆಚ್ಚುವರಿ ತರಗತಿ ಕೊಠಡಿಗಳ ಹಾಗೂ ಕಂಪ್ಯೂಟರ್ ಲ್ಯಾಬ್‌ನ್ನು ವಿಜಯಪುರ ನಗರ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಸನಗೌಡ ಪಾಟೀಲ ಯತ್ನಾಳ ಅವರು ಉದ್ಘಾಟಿಸಿದರು.

ವಿಜಯಪುರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿ ಉದ್ಘಾಟನೆ ಸಮಾರಂಭ ನಡೆಯಿತು

ಕಾಲೇಜು ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಇವರ ಆಶ್ರಯದಲ್ಲಿ ಜೂನ್ 28ರಂದು ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ಕಾಲೇಜಿನ ಆವರಣದಲ್ಲಿ ಹೈ-ಮಾಸ್ಕ್ ವಿದ್ಯುತ್ ದೀಪ್, ಹೈಟೆಕ್ ಶೌಚಾಲಯ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡೆಸ್ಕ್ಗಳ ವ್ಯವಸ್ಥೆ, ಕಾಲೇಜಿನ ಮೈದಾನದ ಅಭಿವೃದ್ಧಿ ಇತ್ಯಾದಿ ಅವಶ್ಯಕ ಬೇಡಿಕೆಗಳಿಗೆ ಸ್ಪಂದಿಸಿ ಒದಗಿಸಿಕೊಡಲು ಭರವಸೆ ನೀಡಿದರು. ಜೊತೆಗೆ ಭೌತಿಕವಾಗಿ ಹಾಗೂ ಶೈಕ್ಷಣಿಕವಾಗಿ ಈ ಕಾಲೇಜು ರಾಜ್ಯದಲ್ಲಿ ಉತ್ತಮ ಮತ್ತು ಮಾದರಿ ಕಾಲೇಜನ್ನಾಗಿ ಪರಿವರ್ತಿಸಲು ನಾವು ಹಾಗೂ ಅಧ್ಯಾಪಕರು ಶ್ರಮೀಸೋಣ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮುದಕಣ್ಣವರ ಎ.ಟಿ., ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಶೋಕ ದತ್ತುರಾವ್ ದೇಶಪಾಂಡೆ, ಮಹಾದೇವಪ್ಪ ನೀಲಪ್ಪ ದಿಂಡೂರ, ಬಸಪ್ಪ ಶಿವಪ್ಪ ಜನಗೊಂಡ, ಸದಾಶಿವ ಷಣ್ಮುಖಪ್ಪ ಗುಡ್ಡೋಡಗಿ, ಲಾಲ್‌ಚಂದ ಅಂಬಾರಿಮಲ್ ಜೈನ್, ವಿಜಯಕುಮಾರ ಎಸ್.ಚವ್ಹಾಣ್, ಸಂಗನಗೌಡ ಎಚ್.ನಾಡಗೌಡ, ಪ್ರಕಾಶ ಎಸ್.ಪಾಟೀಲ(ಹಾಲಳ್ಳಿ), ವೆಂಕಟೇಶ ಚಿದಂಬರಾವ್ ಕುಲಕರ್ಣಿ, ಮಡಿವಾಳ ಯಾಳವಾರ, ಆನಂದ ವಿಜಯ ಚೌಧರಿ, ಮಲ್ಲಮ್ಮ ರಾ.ಜೋಗುರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌