Halakatti M B Patil: ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಸ್ಮರಣೆ ದಿನ- ಎಂ. ಬಿ. ಪಾಟೀಲ ಅವರಿಂದ ನಮನ

ವಿಜಯಪುರ: ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ 58ನೇ ಪುಣ್ಯಸ್ಮರಣೆ ದಿನದ ಅಂಗವಾಗಿ ಬಿ ಎಲ್ ಡಿ ಇ.ಲ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ನಮನ ಸಲ್ಲಿಸಿದರು.

ಹಳಕಟ್ಟಿ ಅವರ ಸಮಾಧಿಗೆ ತೆರಳಿ ನಮನ ಸಲ್ಲಿಸಿದ ಎಂ. ಬಿ. ಪಾಟೀಲ

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿರುವ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ ಎಂ. ಬಿ. ಪಾಟೀಲ ಅವರು ಪುಷ್ಪಾರ್ಚನೆ ಮಾಡಿ ಕೆಲಕಾಲ ಧ್ಯಾನ ಮಾಡಿದರು. ನಂತರ ಫ. ಗು. ಹಳಕಟ್ಟಿಯವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೇಂದ್ರದ ಕಾರ್ಯದರ್ಶಿಗಳಾದ ಡಾ. ಎಂ. ಎಸ್. ಮದಭಾವಿ, ಸಂಯೋಜನಾಧಿಕಾರಿ ಡಾ. ವಿ. ಡಿ. ಐಹೊಳ್ಳಿ ಮತ್ತು ಪ್ರೊ. ಎ. ಬಿ. ಬೂದಿಹಾಳ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌