Rowdy Parade: ಭೀಮಾ ತೀರದ ಕೆಟ್ಟ ಹೆಸರು ಹೋಗಲಾಡಿಸುವೆ ಎಂದ ಎಸ್ಪಿ ಎಚ್. ಡಿ. ಆನಂದಕುಮಾರ

ವಿಜಯಪುರ: ಕಳೆದ ಒಂದು ವಾರದಿಂದ ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ನಾನಾ ಪೊಲೀಸ್ ಠಾಣೆಗಳಿಗೆ ತೆರಳಿ ರೌಡಿಗಳ ಪರೇಡ್ ನಡೆಸುತ್ತ ಛಳಿ ಬಿಡಿಸುತ್ತಿದ್ದಾರೆ. ಈಗ ಬೀಮಾ ತೀರಕ್ಕೆ ತೆರಳಿ ರೌಡಿಗಳ ಛಳಿ ಬಿಡಿಸಿದರು ಕಳೆದ ವಾರವಷ್ಟೇ ವಿಜಯಪುರ ನಗರದಲ್ಲಿ ರೌಡಿಗಳ ಪರೇಡ್ ನಡೆಸಿದ ಎಸ್ಪಿ ರೌಡಿಗಳು ಅಪರಾಧ ಚಟುವಟಿಕೆಗಳನ್ನು ಕೈ ಬಿಡದಿದ್ದರೆ ತಕ್ಕ ಶಾಸ್ತಿ ಮಾಡುವುದಾಗಿ ಖಡಕ್ ವಾರ್ನಿಂಗ್ ನೀಡಿದ್ದರು.

ಈಗ ಭೀಮಾ ತೀರದ ಖ್ಯಾತಿಯ ಚಡಚಡಣ ಪೊಲೀಸ್ ಠಾಣೆಗೆ ತೆರಳಿದ ಅವರು ಮುಸ್ಸಂಜೆ ರೌಡಿಗಳ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದರು. ಯಾಕೊ ಮಗನೇ ಇನ್ನೂ ಹಳೆಯದನ್ನು ಬಿಟ್ಟಿಲ್ಲವಾ? ನೀನು ವರ್ತನೆ ಸರಿಪಡಿಸಿಕೊಳ್ಳಬೇಕು ಎಂದು ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಯಾವ ಕೇಸಿನಲ್ಲಿದ್ದೀಯಾ? ಮರ್ಡರ್ ಕೇಸಾ? ಯಾಕೆ ಸುಳ್ಳು ಹೇಳುತ್ತೀಯಾ? ನನ್ನ ಬಳಿ ನಾಟಕವಾಡಬೇಡ. ಹುಷಾರ್ ಎಂದು ಎಚ್ಚರಿಕೆ ನೀಡಿದ ಅವರು, ಅಪರಾಧ ಮುಂದುವರೆಸಿದರೆ ನಿಮಗೆ ಏನು ಮಾಡಬೇಕು ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.

ಈ ಪರೇಡ್ ನಲ್ಲಿ ಪಾಲ್ಗೋಂಡಿದ್ದ 50 ರೌಡಿಗಳನ್ನು ಸರಿಯಾಗಿಯೇ ಡ್ರಿಲ್ ಮಾಡಿದ ಎಸ್ಪಿ, ಈಗ ಮಾಡಿರುವ ತಪ್ಪುಗಳು ಮರುಕಳಿಸಬಾರದು. ಬಾಲ ಬಿಚ್ಚಿದರೆ ಸುಮ್ಮನೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ, ಅವರ ಕೈಗಳನ್ನು ಪರಿಶೀಲಿಸಿದರು.

ಇದೇ ವೇಳೆ ಮಾತನಾಡಿದ ಎಚ್. ಡಿ. ಆನಂದ ಕುಮಾರ, ಭೀಮಾ ತೀರಕ್ಕೆ ಅಂಟಿರುವ ಕಳಂಕವನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಳಂಕನ್ನು ಶಾಶ್ವತವಾಗಿ ತೊಲಗಿಸಲು ಪೊಲೀಸ್ ಇಲಾಖೆ ಕಂಕಣಬದ್ಧವಾಗಿ ಕೆಲಸ ಮಾಡುತ್ತಿದೆ. ಅಲ್ಲದೇ, ಈ ಭಾಗದಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಕೂಡ ಪೊಲೀಸರು ಹಗಲಿರುಳು ಶ್ರಮ ವಹಿಸುತ್ತಿದ್ದಾರೆ ಎೞದು ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಇಂಡಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಚಡಚಣ ಸಿಪಿಐ ಸಾಹೇಬಗೌಡ ಪಾಟೀಲ, ಪಿ ಎಸ್ ಐ ಸಂಜು ತಿಪ್ಪಾರೆಡ್ಡಿ, ಝಳಕಿ ಪಿ ಎಸ್ ಎಸ್ ಸಿದ್ದಣ್ಣ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌