ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಹೆಚ್ಚಿನ ಅನುದಾನವನ್ನು ಮಮದಾಪುರ ಗ್ರಾಮದ ನಾನಾ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಶಾಸಕ ಎಂ. ಬಿ. ಪಾಟೀಲ ಹೇಳಿದರು.
ಮಮದಾಪುರ ಗ್ರಾಮದಲ್ಲಿ ರೂ. 8.50 ಕೋ. ಅನುದಾನದಲ್ಲಿ ಮಮದಾಪುರ-ಶೇಗುಣಸಿ ರಸ್ತೆ ಸುಧಾರಣೆ ಭೂಮಿ ಪೂಜೆ ಸಲ್ಲಿಸಿ, ಜೆಜೆಎಂ ಯೋಜನೆಯಡಿ ಮನೆ-ಮನೆಗೆ ನಳದ ಮೂಲಕ ನೀರು ಸರಬರಾಜು ಮಾಡುವ ಕಾಮಗಾರಿಗೆ ಚಾಲನೆ ನೀಡಿ, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಖರೀದಿಸಿದ ಆ್ಯಂಬುಲೇನ್ಸ್ ಚಾಲನೆ, ಪಶು ಆಸ್ಪತ್ರೆ ಕಟ್ಟಡ ಉದ್ಘಾಟಿಸಿ, ಮಾತನಾಡಿದ ಅವರು ಈಗ ಲಭ್ಯವಾಗಿರುವ ರೂ. 50 ಕೋ. ಅನುದಾನದಲ್ಲಿ ರೂ. 35 ಕೋ. ಅನುದಾನ ಮಮದಾಪುರ ಗ್ರಾಮಕ್ಕೆ ನೀಡಲಾಗಿದೆ ಎಂದು ಹೇಳಿದರು.
ಮಮದಾಪುರಗ್ರಾಮದಲ್ಲಿ ಆದಿಲ್ ಶಾಹಿ ಕೆರೆಹೂಳು ತುಂಬಿ ನೀರಿಲ್ಲದೆ ಒಣಗಿ ನಿಂತಿತ್ತು.ಈ ಕೆರೆಯ ಹೂಳು ತೆಗೆದು ಕೃಷ್ಣಾ ನದಿಯಿಂದ ನೀರು ತುಂಬಿಸಲು ಪ್ರಯತ್ನಿಸಿದಾಗ ಇಲ್ಲಿಯವರೇ ಹಾಸ್ಯ ಮಾಡಿದ್ದರು.ಇದೀಗ ಕೆರೆತುಂಬಿ ನಿಂತಿದ್ದು, ಸುತ್ತಲು ಸಮೃದ್ಧಿಯಾಗಿದೆ. ಅಲ್ಲದೇ, ಗ್ರಾಮದಲ್ಲಿನಅರಣ್ಯ ಪ್ರದೇಶವನ್ನುರಕ್ಷಿಸಲು ಸುತ್ತಲುತಂತಿಬೇಲಿ ಅಳವಡಿಸಿ, ಸಾವಿರಾರು ಸಸಿಗಳನ್ನು ಪೋಷಿಸಲಾಗುತ್ತಿದೆ. ಇದು ಮುಂದೆ ಮಾನವನ ದೊಡ್ದ ಅರಣ್ಯ ಪ್ರದೇಶವಾಗಲಿದೆ ಎಂದು ಹೇಳಿದರು.
ಶೇಗುಣಶಿ-ಮಮದಾಪುರ ಸುಸಜ್ಜಿತ ರಸ್ತೆಯನ್ನು ರೂ. 5 ಕೋ. ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ರೂ. 50 ಕೋ. ಅನುದಾನವನ್ನು ರಸ್ತೆ ಅಭಿವೃದ್ದಿ ಕಾಮಗಾರಿ ತೆಗೆದುಕೊಳ್ಳಲಾಗುವುದು ಎಂದು ಎಂ. ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರಸ್ವಾಮೀಜಿ, ಜಿ. ಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ವಿ. ಎಸ್. ಪಾಟೀಲ ಬಬಲೇಶ್ವರ, ನಂದಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಕುಮಾರ ದೇಸಾಯಿ, ನಂದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ಕೆ. ಎಚ್. ಮುಂಬಾರೆಡ್ಡಿ, ಬಾಪುಗೌಡ ಶೇಗುಣಶಿ, ಸಂಗಮೇಶ ಬಬಲೇಶ್ವರ, ಸೋಮನಾಥ ಕಳ್ಳಿಮನಿ, ಕೃಷ್ಣಾ ಕುಲಕರ್ಣಿ, ಮಲ್ಲಿಕಾರ್ಜುನ ಗಂಗೂರ, ಸುಭಾಷಗೌಡ ಪಾಟೀಲ, ಬಸನಗೌಡ ಪಾಟೀಲ, ಲಕ್ಷ್ಮಣ ತೇಲಿ, ಡಾ. ಕೌಸರ ಅತ್ತಾರ, ಮುತ್ತಪ್ಪ ಶಿವಣ್ಣವರ, ರಫೀಕ ಖಾನೆ, ವಾಸು ಗಿರೆವ್ವಗೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕಿಂತಲೂ ಮುಂಚೆ ಬೆ.10ಕ್ಕೆ ಶೇಗುಣಶಿ ಗ್ರಾಮದಲ್ಲಿ ರೂ. 850 ಕೋ. ವೆಚ್ಚದಶೇಗುಣಶಿ-ಮಮದಾಪುರರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ ಸಲ್ಲಿಸಿದರು. ಬೆ.10.30ಕ್ಕೆ ಗುಣದಾಳ ಕ್ರಾಸ್‍ನಲ್ಲಿ ರೂ. 1.25 ಕೋ. ವೆಚ್ಚದ ಗುಣದಾಳ-ಬೋಳ ಚಿಕ್ಕಲಕಿ ರಸ್ತೆ ಸುಧಾರಣೆ ಭೂಮಿ ಪೂಜೆ, ಬೆ.11ಕ್ಕೆ ಶಿರಬೂರ ಗ್ರಾಮದಲ್ಲಿ ರೂ. 12.93 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ, ರೂ.20.37 ಲಕ್ಷ ವೆಚ್ಚದ ಹೈಟೆಕ್ ಶೌಚಾಲಯ ಉದ್ಘಾಟನೆ, ರೂ. 53 ಲಕ್ಷ ವೆಚ್ಚದ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳನ್ನು ಉದ್ಘಾಟಿಸಿದರು. ಮ.12ಕ್ಕೆ ಕಣಬೂರ ಕಣಬೂರ ಗ್ರಾಮದಲ್ಲಿ ರೂ. 1.30 ಕೋ. ವೆಚ್ಚದ ಜೆಜೆಎಂ ಅಡಿ ಮನೆ-ಮನೆಗೆ ನಳದ ಮೂಲಕ ನೀರು ಸರಬರಾಜು ಮಾಡುವ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದರು.