New DySP: ಸಿದ್ಧೇಶ್ವರ ವಿಜಯಪುರ ನೂತನ ಡಿವೈಎಸ್ಪಿ
ವಿಜಯಪುರ: ಸಿದ್ಧೇಶ್ವರ ಅವರನ್ನು ವಿಜಯಪುರ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಸಿದ್ಧೇಶ್ವರ ಅವರು ಈ ಮುಂಚೆ ವಿಜಯಪುರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಸಿಂದಗಿ ಸಿಪಿಐ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಈವರೆಗೆ ಸಿದ್ಧೇಶ್ವರ ಅವರು ಬೆಂಗಳೂರಿನಲ್ಲಿ ಲೋಕಾಯುಕ್ತ ಕಚೇರಿಯಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಈಗ ವಿಜಯಪುರ ಡಿವೈಎಸ್ಪಿಯಾಗಿ ಸರಕಾರ ವರ್ಗಾವಣೆ ಮಾಡಿದೆ. ಸಿದ್ಧೇಶ್ವರ ಅವರ ಲೋಕಾಯುಕ್ತ ನಿವೃತ್ತ […]
ZP CEO: ಚಡಚಣ ತಾಲೂಕಿನಲ್ಲಿ ಇಂಚಗೇರಿ, ನಂದರಗಿ, ಬರಡೋಲ ಗ್ರಾ. ಪಂ. ಗಳಲ್ಲಿ ರಾಹುಲ ಶಿಂಧೆ ವಿಶೇಷ ಪರಿಶೀಲನೆ
ವಿಜಯಪುರ: ಜಿ. ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಅವರು ಚಡಚಣ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಇಂಚಗೇರಿ, ನಂದರಗಿ ಹಾಗೂ ಬರಡೊಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನಾನಾ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ಇಂಚಗೇರಿ ಗ್ರಾಮದ ಮಹಾತ್ಮಗಾಂಧಿ ನರೇಗಾ ಅಮೃತ ಸರೋವರ ಕಾರ್ಯಕ್ರಮದಡಿ ಆಯ್ಕೆಯಾದ ಕೆರೆ ಹೂಳೆತ್ತುವ ಕಾಮಗಾರಿಗೆ ಭೇಟಿ ಮಾಡಿ ಕಾಮಗಾರಿಯ ಕಡತ ಪರಿಶೀಲನೆ ಮಾಡಿದರು. ಕೂಲಿಕಾರರ ಕುಂದುಕೊರತೆಗಳನ್ನು ಆಲಿಸಿದರು. ನರೇಗಾ ಯೋಜನೆಯಲ್ಲಿ 60 ವರ್ಷ ಮೇಲ್ಪಟ್ಟ ಕೂಲಿಕಾರರಿಗೆ ಹಾಗೂ ವಿಶೇಷಚೇತನರಿಗೆ ಆದ್ಯತೆಯ ಮೇರೆಗೆ […]
Idiot Syndrome: ಇಡಿಯಟ್ ಸಿಂಡ್ರೋಮ್ ನಿಂದ ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಪದ್ಮಶ್ರೀ ಡಾ. ಸಿ. ಎನ್ ಮಂಜನಾಥ
ಬೆಂಗಳೂರು: ಜನರಲ್ಲಿ ಇಡಿಯಟ್ ಸಿಂಡ್ರೋಮ್ (IDIOT SYNDROME – Internet Derived Information Obstruction Treatment) ನಿಂದಾಗಿ ವಿದ್ಯಾವಂತರಿಗೆ ಚಿಕಿತ್ಸೆ ನೀಡುವುದು ಬಹಳ ಕ್ಲಿಷ್ಟಕರವಾಗುತ್ತಿದೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಆವಿಷ್ಕಾರಗಳಿಂದಾಗಿ ಜನರು ಹಾಗೂ ರೋಗಿಗಳಲ್ಲಿ ವೈದ್ಯರ ಮೇಲಿನ ನಿರೀಕ್ಷೆಗಳು ಹೆಚ್ಚಾಗುತ್ತಿದೆ. ಇದರಿಂದ ವೈದ್ಯರು ಒತ್ತಡಕ್ಕೆ ಒಳಗಾಗುತ್ತಿದ್ದು ಆನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ ಎಂದು ಬೆಂಗಳೂರು ಜಯದೇವ ಆಸ್ಪತ್ರೆಯ ನಿರ್ದೇಶಕ, ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಹಿರಿಯ […]
College Protest: ಝಳಕಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಂದ ಪ್ರತಿಭಟನೆ
ವಿಜಯಪುರ: ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾಲೇಜಿನ ಎದುರು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿಧ್ಯಾರ್ಥಿಗಳು ಅಧಿಕಾರಿಗೞ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಕುಡಿಯುವ ನೀರಿಗೂ ಪರದಾಡಬೇಕಾಗಿದೆ. ಕುಳಿತುಕೊಳ್ೞಲು ಬೇಂಚುಗಳ ವ್ಯವಸ್ಥೆಯೂ ಸರಿಯಿಲ್ಲ. ಲ್ಯಾಬ, ವಿಧ್ಯಾರ್ಥಿಗಳ ವಸತಿ ವ್ತವಸ್ಥೆಗಳು ಸರಿಯಿಲ್ಲ. ಬಸ್ಸುಗಳೂ ಕೂಡು ನಿಲುಗಡೆಯಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಸ್ಥಳಕ್ಕೆ ಇಂಡಿ ತಹಸೀಃಹಲ್ದಾರರ ಸಿದ್ದಲಿಂಗಯ್ಯ ಹಿರೇಮಠ, […]
National Doctor’s Day: ರಾಷ್ಟ್ರೀಯ ವೈದ್ಯರ ದಿನಾಚರಣೆ- ಡಾ. ಬಿ. ಸಿ. ರಾಯ್ ಜನ್ಮದಿನದ ವಿಶೇಷ
ಡಾ. ರವಿ ಎಸ್. ಕೋಟೆಣ್ಣವರ ವಿಜಯಪುರ: ನಾವು ಭೂಮಿಯ ಮೇಲೆ ದೇವರನ್ನು ನೋಡಲು ಸಾಧ್ಯವಿಲ್ಲ ಎನ್ನುವುದು ಎಲ್ಲರು ತಿಳಿದಿರುವ ಸತ್ಯ. ಆದರೆ ನಮ್ಮ ಆರೋಗ್ಯವನ್ನು ಉತ್ತಮ ಗೊಳಿಸಿ, ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೈವ ಶಕ್ತಿಯನ್ನು ಪಡೆದುಕೊಂಡು, ಕಣ್ಣೆದುರಿಗೆ ನಿಲ್ಲುವ ದೇವರು ಎಂದು ಹೇಳಬಹುದು. ಈ ಕೋವಿಡ್ ಹೆಮ್ಮಾರಿ ವೈದ್ಯನೇ ಭೂಮಿಯ ಮೇಲಿನ ದೈವ ಎಂದು ಜನಸಾಮನ್ಯರಿಗೆ ಸಾಬಿತು ಪಡೆಸಿದೆ. ಜು.1 ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಅಲೋಪತಿ, ಹೋಮಿಯೋಪತಿ, ಆಯುರ್ವೇದ. ಯುನಾನಿ ಹೀಗೆ […]