ವಿಜಯಪುರ: ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾಲೇಜಿನ ಎದುರು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿಧ್ಯಾರ್ಥಿಗಳು ಅಧಿಕಾರಿಗೞ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಕುಡಿಯುವ ನೀರಿಗೂ ಪರದಾಡಬೇಕಾಗಿದೆ. ಕುಳಿತುಕೊಳ್ೞಲು ಬೇಂಚುಗಳ ವ್ಯವಸ್ಥೆಯೂ ಸರಿಯಿಲ್ಲ. ಲ್ಯಾಬ, ವಿಧ್ಯಾರ್ಥಿಗಳ ವಸತಿ ವ್ತವಸ್ಥೆಗಳು ಸರಿಯಿಲ್ಲ. ಬಸ್ಸುಗಳೂ ಕೂಡು ನಿಲುಗಡೆಯಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಸ್ಥಳಕ್ಕೆ ಇಂಡಿ ತಹಸೀಃಹಲ್ದಾರರ ಸಿದ್ದಲಿಂಗಯ್ಯ ಹಿರೇಮಠ, ಮತ್ತು ಉಪ ತಹಶಿಲ್ದಾರರ ಎ. ಎಸ್. ಗೋಟ್ಯಾಳ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದರು. ಅಲ್ಲದೇ ವಿಧ್ಯಾರ್ಥಿಗಳ ಮನವೊಲಿಸಲು ಮುಂದಾದರು.
ಎರಡು ತಿಂಗಳಲ್ಲಿ ವಸತಿ ವ್ಯವಸ್ಥೆ ಮಾಡುತ್ತವೆ. ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಶೌಚಾಲಯ ವ್ಯವಸ್ಥೆ ಸರಿಪಡಿಸಲಾಗುವುದು. ಬಸ್ ನಿಲ್ಲುಗಡೆ ಮಾಡಲು ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆಗೆ ಮಾತನಾಡಿ ನಿಲುಗಡೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಬಿವಿಪಿ ವಿಧ್ಯಾರ್ಥಿ ಸಂಘದ ನಗರ ಕಾರ್ಯದರ್ಶಿ ರಾಹುಲ್ ಹಿರೇಮಠ, ಅಶೋಕ ಕಾಗರ, ಸುನೀಲ ಕಾಗರ, ಭೀರಪ್ಪ ಆಸಂಗಿ, ಇಲಿಯಾಸ ಬಾಗವಾನ, ಉದಯ ಹೊನಗೊಂಡ, ವಿದ್ಯಾರ್ಥಿನಿಯರು ಉಪಸ್ಥಿತರಿದ್ಸರು.