Halakatti Jatti: ಹಳಕಟ್ಟಿ ಅವರ ಜೀವನವೇ ಒಂದು ಸಂದೇಶ- ಅರವಿಂದ ಜತ್ತಿ

ವಿಜಯಪುರ: ವಚನಪಿತಾಮಹ ಡಾ. ಫ. ಗು.‌ಹಳಕಟ್ಟಿಯವರ ಆದರ್ಶಗಳು ಮತ್ತು ಸಮಾಜಮುಖಿ ಸರಳ ಜೀವನ ನಮ್ಮೆಲ್ಲರಿಗೂ ಒಂದು ಬಹುದೊಡ್ಡ ಸಂದೇಶ ಎಂದು ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು‌.

ಹಳಕಟ್ಟಿ ಪ್ರತಿಮೆಗೆ ನಮನ ಸಲ್ಲಿಸಿದ ನಾನಾ ಮುಖಂಡರು

ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಿಜಯಪುರದಲ್ಲಿರುವ ಅವರ ಕರ್ತೃ ಗದ್ದುಗೆಗೆ ಭೇಟಿ ನೀಡಿ ಗೌರವ ಸಮರ್ಪಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ನಮ್ಮೆಲ್ಲರಿಗೂ ಆದರ್ಶ ಪ್ರಾಯರಾದ ವಚನ ಪಿತಾಮಹ ಡಾ. ಫ.‌ ಗು.‌ ಹಳಕಟ್ಟಿ ಅವರ ಜನ್ಮದಿನವನ್ನು ಸರಕಾರ’ವಚನ ಸಾಹಿತ್ಯ ಸಂರಕ್ಷಣಾ ದಿನ ಎಂದು ಘೋಷಣೆ ಮಾಡಿರುವದು ನಮ್ಮೆಲ್ಲರಿಗೂ ಸಂತೋಷವನ್ನು ಉಂಟುಮಾಡಿದೆ. ಹಳಕಟ್ಟಿಯವರು ಇರದಿದ್ದರೆ ವಚನ ಸಾಹಿತ್ಯ ಉಳಿಯುತ್ತಿರಲಿಲ್ಲ. ಅವರು ವಿಜಯಪುರದಲ್ಲಿ ಮೂರು ಪ್ರತಿಷ್ಠಿತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಅವರ ಕಾಯಕವನ್ನು ಪಠ್ಯದಲ್ಲಿ ಸೇರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಳಕಟ್ಟಿಯವರ ಮೊಮ್ಮಗ ಗಿರೀಶರ ಹಳಕಟ್ಟಿ ಕುಟುಂಬದ ಸದಸ್ಯರು, ಶಾಂತಪ್ಪ ಜತ್ತಿ ಪ್ರೊ. ವಿ. ಡಿ. ಐಹೊಳ್ಳಿ, ಶರಣ ಸಾಹಿತ್ಯ ಪರಿಷತ್ತಿನ ಎಂ. ಜಿ.‌ಯಾದವಾಡ ದಾನೇಶ ಅವಟಿ ಮತ್ತೀತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌