Cheater Arrest: ಪೊಲೀಸರ ಭರ್ಜರಿ ಬೇಟೆ- ಓರ್ವ ಬಂಧನ, ಎಂಟು ಲಾರಿ ಸೇರಿ ರೂ. 2.20 ಮೌಲ್ಯದ ಒಣದ್ರಾಕ್ಷಿ ವಶ

ವಿಜಯಪುರ: ದ್ರಾಕ್ಷಿ ಕಣಜ ಬಸವ ನಾಡು ವಿಜಯಪುರ ಜಿಲ್ಲೆಯ ರೈತರಿಗೆ ಕೋಟ್ಯಂತರ ರೂಪಾಯಿ ಟೋಪಿ ಹಾಕಿದ್ದ ಗುಜರಾತ ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ ಎಂಟು ಕಾರು ವಶಪಡಿಸಿಕೊಂಡಿದ್ದು, ಉಳಿದ ಆತೋಪಿಗಳಿಗೆ ಬಲೆ ಬೀಸಿದ್ದಾರೆ.

ಲಾರಿ ಪರಿಶೀಲಿಸುತ್ತಿರುವ ಎಸ್ಪಿ ಎಚ್. ಡಿ. ಆನಂದ ಕುನಾರ ಇತರ ಅಧಿಕಾರಿಗಳು

ಗುಜರಾತ ಮೂಲದ ಕಮಲಕುಮಾರ ಸೋಹನಲಾಲ್, ಕೃನಾಲಕುಮಾರ ಉರ್ಫ್ ಸಚೀನ ಮಹೇಂದ್ರಕುಮಾರ ಪಟೇಲ, ಸುನೀಲ, ಜಯೇಶ, ಭರತ ಜೇಟಾಬಾಯಿ ಪಟೇಲ, ನೀಲ ದಿನೇಶಬಾಯಿ ಪಟೇಲ್, ರೋಣಿಕಕುಮಾರ ಪಟೇಲ ಮತ್ತು ಪಿಂಕೇಶ ಸುರೇಶ ಭಾಯಿ ಪಟೇಲ ಅವರು ಗುಮ್ಮಟ ನಗರಿಯಲ್ಲಿ ವ್ಯಾಪಾರ ಮಾಡುವ ವೇಷದಲ್ಲಿ ವಿಜಯಪುರ ನಗರದ ಕೈಗಾರಿಕೆ ಪ್ರದೇಶದಲ್ಲಿ ಉಗ್ರಾಣವೊಂದನ್ನು‌ ಬಾಡಿಗೆ ಪಡೆದಿದ್ದರು. ಶ್ರೀ ಮಹಾಲಕ್ಷ್ಮಿ ಟ್ರೇಡರ್ಸ್ ಎಂಬ ಹೆಸರಿನಲ್ಲಿ ವಿಜಯಪುರ ಜಿಲ್ಲೆಯ ರೈತರಿಂದ ಒಣದ್ರಾಕ್ಷಿ ಖರೀದಿಸುತ್ತ ಸುಮಾರು‌ ಒಂದು ತಿಂಗಳೊಳಗೆ ಆರ್ ಟಿ ಜಿ‌ ಎಸ್ ಮೂಲಕ ರೈತರ ಬ್ಯಾಂಕು ಖಾತೆಗಳಿಗೆ ಹಣ ಹಾಕುತ್ತ ವಿಶ್ಚಾಸ ಗಳಿಸಿದ್ದರು. ಆದರೆ, ಇದೇ ರೈತರಿಂದ ಇತ್ತೀಚಿನ ತಿಂಗಳುಗಳಲ್ಲಿ ರೂ.‌84 ಲಕ್ಷ 77 ಸಾವಿರದ 250 ಮೌಲ್ಯದ 43.672 ಟನ್ ಒಣ ದ್ರಾಕ್ಷಿ ಖರೀದಿಸಿ ಒಪ್ಪಂದದ ಅವಧಿ ಮುಗಿದರೂ‌ ಹಣ ನೀಡಿರಲಿಲ್ಲ.

ಮೋಸ ಹೊದ ರೈತರಿಂದ ದೂರು ದಾಖಲು

ಈ ಹಿನ್ನೆಲೆಯಲ್ಲಿ ವಂಚನೆಗೆ ಒಳಗಾದ ರೈತರು ಮತ್ತು ವ್ಯಾಪಾರಿಗಳು ದೂರು ನೀಡಿದ್ದರು.

ಅಬ್ದುಲ್ ಖಾದರ್ ಮೊಹಮ್ಮದ್ ಖಾಸಿಂ ತಸಿಲ್ದಾರ್ ಅವರು ರೂ. 18.19 ಲಕ್ಷ ಮೌಲ್ಯದ 9.44 ಟನ್ ಒಣದ್ರಾಕ್ಷಿ ತುಂಬಿದ 636 ಬಾಕ್ಸಗಳನ್ನು ಇವರಿಗೆ ಮಾರಾಟ ಮಾಡಿದ್ದರು. ಆದರೆ, ಮಾರಾಟ ಮಾಡಿ ಒಂದು ತಿಂಗಳ ನಂತರ ಆರ್ ಟಿ ಜಿ ಎಸ್ ಜಿಎಸ್ ಮೂಲಕ ಹಣವನ್ನು ಪಾವತಿಸದ ಹಿನ್ನೆಲೆ ಅಬ್ದುಲ್ ಖಾದರ್ ಮೊಹಮ್ಮದ್ ಖಾಸಿಂ ತಹಸೀಲ್ದಾರ್ ಅವರು ಕೋಲ್ಡ್ ಸ್ಟೋರೇಜ್ ಅವರಿಗೆ ಹೋಗಿ ನೋಡಿದರೂ ಖರೀದಿ ಮಾಡಿದವರು ನಾಪತ್ತೆಯಾಗಿದ್ದರು. ಆಗ ಅವರು ಅವರು ವಿಜಯಪುರ ನಗರದ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದೇ ರೀತಿ ಸಂತೋಷಕುಮಾರ ಸಿದ್ದರಾಮ ಗುಂಜಟಗಿ ಅವರಿಂದ ರೂ. 20.69 ಲಕ್ಷ ಮೌಲ್ಯದ 10.42 ಟನ್ ಒಣದ್ರಾಕ್ಷಿ ತುಂಬಿದ 695 ಬಾಕ್ಸ್ ಗಳನ್ನು ಖರೀದಿಸಿ ಹಣ ನೀಡದೆ ವಂಚಿಸಿದ್ದರು.

ಅಷ್ಟೇ ಅಲ್ಲ ವಿಜಯಪುರದವರೇ ಆದ ತೌಫಿಕ್ ಸಲೀಂ ಅಂಗಡಿ ಅವರ ಫಾರ್ಮ್ ಆರ್ಯಾನಿಕ್ ಎಕ್ಸಪ್ರೆಸ್ ಟ್ರೇಡರ್ಸ್ ಕೋಲ್ಡ್ ಸ್ಟೋರೇಜ್ ನಿಂದ ರೂ. 24.29 ಲಕ್ಷ ಮೌಲ್ಯದ 12. 77 ಟನ್ ತೂಕದ ಒಣ ದ್ರಾಕ್ಷಿಯನ್ನು ಖರೀದಿಸಿ ಹಣ ನೀಡದೆ ವಂಚಿಸಿದ್ದರು.

ಮತ್ತೋಂದು ಪ್ರಕರಣದಲ್ಲಿ ವಿಜಯಪುರ ನಗರದ ಜಾಕಿರ್ ಹಾಜಿಲಾಲ್ ಭಗವಾನ್ ಅವರಿಗೆ ಸೇರಿದ ಜಾಕಿರ್ ಆಗ್ರೋ ಇಂಡಸ್ಟ್ರೀಸ್ ಕೋಲ್ಡ್ ಸ್ಟೋರಿನಲ್ಲಿದ್ದ ರೂ. 21.59 ಲಕ್ಷ ಮೌಲ್ಯದ 11.54 ಟನ್ ತೂಕದ 746 ಒಣ ದ್ರಾಕ್ಷಿ ಬಾಕ್ಸ್ ಗಳನ್ನು ಖರೀದಿಸಿ ಹಣ ನೀಡದೇ ವಂಚಿಸಿದ್ದರು.

ಈ ಹಿನ್ನೆಲೆಯಲ್ಲಿ ವಂಚನೆಗೆ ಒಳಗಾದ ಎಲ್ಲ ರೈತರು ವಿಜಯಪುರ ನಗರದ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಟ್ಟು ರೂ. 84.77 ಮೌಲ್ಯದ 43.67 ಟನ್ ಒಣದ್ರಾಕ್ಷಿ ಖರೀದಿಸಿ ಹಣ ನೀಡದೇ ವಂಚಿಸಿದ್ದ ಆರೋಪಿಗಳ ಪತ್ತೆಗೆ ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ ಪೊಲೀಸರ ತಂಡ ರಚಿಸಿದ್ದರು.

ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ದಿ, ವಿಜಯಪುರ ಡಿವೈಎಸ್ಪಿ ಲಕ್ಷ್ಮೀನಾರಾಯಣ, ವಿಜಯಪುರ ನಗರದ ಗೋಲಗುಂಬಜ ಸಿಪಿಐ ರಮೇಶ ಅವಜಿ ಮತ್ತು ವಿಜಯಪುರ ನಗರಷ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಐ ಉಮೇಶ ಗೆಜ್ಜೆ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಭರ್ಜರಿ‌ ಕಾರ್ಯಾಚರಣೆ ನಡೆಸಿದೆ.

ಈ ತಂಡ ವಿಜಯಪುರ ಜಿಲ್ಲೆಯ ನಿಡಗುಂದಿ ಬಳಿ ಆರೋಪಿಗಳಲ್ಲಿ ಒಬ್ಬನಾದ ಜೂ. 28 ರಂದು ಕೃನಾಲಕುಮಾರ ಉರ್ಫ್ ಸಚೀನ್ ಅಲಿಯಾಸ್ ಮಹೇಂದ್ರಕುಮಾರ ಪಟೇಲ‌್ ನನ್ನು ಬಂಧಿಸಿ ತನಿಖೆ ನಡೆಸಿದೆ. ಅಲ್ಲದೇ, ಗುಜರಾತಿಗೆ ತೆರಳಿ ಎಂಟು ಲಾರಿಗಳ ಸಮೇತ ಅಂದಾಜು ರೂ. 2.20 ಕೋ. ಮೌಲ್ಯದ ಮತ್ತು ತಲಾ 15 ಕೆಜಿಯಂತೆ 7842 ಬಾಕ್ಸ್ ಗಳಲ್ಲಿ ಸಂಗ್ರಹಿಸಿದ್ದ 117 ಒಣದ್ರಾಜ್ಷಿಯನ್ನು ವಶಪಡಿಸಿಕೊಂಡಿದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಆರೋಪಿ ಕೃಣಾಲ ಕುಮಾರ

ಪೊಲೀಸರ ಚಾಕಚಕ್ಯತೆಯಿಂದಾಗಿ ಪ್ರಕರಣ ತನಿಖೆ

ತಲೆ ನೋವಾಗಿದ್ದ ಈ ಪ್ರಕರಣವನ್ಮು ಭೇದಿಸಲು ಗೋಲಗುಂಬಜ ಸರ್ಕಲ್ ವ್ಯಾಪ್ತಿಯ ಪೊಲೀಸರು ಹರಸಾಹಸ ಪಟ್ಟಿದ್ಸಾರೆ. ವಿಜಯಪುರ ನಗರದ ಕೈಗಾರಿಕೆ ಪ್ರದೇಶದಲ್ಲಿ ವ್ಯಾಪಾರಿಗಳೇ ಈ ಹಿಂದೆ ಸುಮಾರು ರೂ. 8 ಲಕ್ಷ ಖರ್ಚು ಮಾಡಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳು ಪೊಲೀಸರ ನೆರವಿಗೆ ಬಂದಿವೆ‌. ಕಾರಿನ ನಂಬರೊಂದನ್ನು‌ ಪತ್ತೆ ಮಾಡಿ ಅದರ ಆಧಾರದಲ್ಲಿ ಪೊಲೀಸರು ಈ ಪ್ರಕರಣ ಭೇದಿಸಿ ಓರ್ವ ಆರೋಪಿಯನ್ನು ಬಂಧಿಸಿ ಬಾಕಿ ಉಳಿದಿರುವ 7 ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಈ ಪ್ರಕರಣಗಳನ್ನು ಬೇಧಿಸಿದ ಪೊಲೀಸರ ತಂಡಕ್ಕೆ ವಿಜಯಪುರ ಎಸ್ ಪಿ ಎಚ್ ಡಿ ಆನಂದ್ ಕುಮಾರ್ ಅವರ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

ಈ ಸಂದರ್ಭದಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಜ್ಷ್ನಣ ಅರಸಿದ್ಧಿ, ಡಿವೈಎಸ್ಪಿ ಲಕ್ಷ್ಮಿನಾರಾಯಣ, ಗೋಲಗುಂಬಜ ಸಿಪಿಐ ರಮೇಶ ಅವಜಿ, ಎಪಿಎಂಸಿ ಪಿಎಸ್ಐ ಉಮೇಶ ಗೆಜ್ಜಿ ಮತ್ತೀತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌