DySP Charge: ವಿಜಯುರ ನೂತನ ಡಿವೈಎಸ್ಪಿಯಾಗಿ ಸಿದ್ಧೇಶ್ವರ ಅಧಿಕಾರ ಸ್ವೀಕಾರ

ವಿಜಯಪುರ: ವಿಜಯಪುರ ನೂತನ ಡಿವೈಎಸ್ಪಿಯಾಗಿ ಸಿದ್ಧೇಶ್ವರ ಅಧಿಕಾರ ವಹಿಸಿಕೊಂಡಿದ್ದಾರೆ.

ಕರ್ನಾಟಕ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿದ್ದ ಅವರನ್ನು ಎತಡು ದಿನಗಳ ಹಿಂದೆ ಸರಕಾರ ವಿಜಯಪುರ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಿತ್ತು.

ವಿಜಯಪುರ ನೂತನ ಡಿವೈಎಸ್ಪಿ ಸಿದ್ಧೇಶ್ವರ

ಸಿದ್ದೇಶ್ವರ ಅವರಿಗೆ ನಿಕಟಪೂರ್ವ ಡಿವೈಎಸ್ಪಿ ಲಕ್ಷ್ಮಿನಾರಾಯಣ ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಬಳಿಕ ಸಿದ್ಧೇಶ್ವರ ಅವರು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಅವರನ್ನು ಭೇಟಿ ಮಾಡಿ ವಿಶ್ ಮಾಡಿದರು. ಸಿದ್ಧೇಶ್ವರ ಅವರು ಈ ಮುಂಚೆ ವಿಜಯಪುರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಮತ್ತು‌ ಸಿಂದಗಿ ಸಿಪಿಐ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ವಿಜಯಪುರ ಡಿವೈಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸಿದ್ಧೇಶ್ವರ ಅವರು ವಿಜಯಪುರದ ಲೋಕಾಯುಕ್ತ ನಿವೃತ್ತ ಎಸ್ಪಿ ಕಾಶೀನಾಥ ತಳಕೇರಿ ಅವರ‌ ಅಳಿಯರಾಗಿದ್ದಾರೆ.

Leave a Reply

ಹೊಸ ಪೋಸ್ಟ್‌