ವಿಜಯಪುರ: ಪ್ರೀತಿ, ಪ್ರೇಮ ಅವರುಸಿರಾಗಿತ್ತು. ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಹಿರಿಯರೂ ಕೂಡ ಯಾವುದೇ ಪ್ರತಿರೋಧ ತೋರಿಸದೇ ಒಪ್ಪಿಗೆ ಸೂಚಿಸಿದ್ದೂ ಗಮನಾರ್ಹವಾಗಿತ್ತು. ಇದು ಸಪ್ತಸಾಗರದಾಚೆ ನಡೆದ ಲವ್ ಸ್ಟೋರಿಯ ಕಥೆ.
ಒಂದೇ ಊರಿನಲ್ಲಿ ಪರಸ್ಪರ ಪ್ರೀತಿಸುತ್ತಿದ್ದರೂ ನಾನಾ ಕಾರಣಗಳಿಂದಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಾಧ್ಯವಾಗದೇ ಪ್ರೇಮ, ಪ್ರೀತಿ ಮದುವೆಗೂ ಮುಂಚೆಯೇ ಮುರಿದು ಬಿದ್ದಿರುವ ಹಲವಾರು ಘಟನೆಗಳ ಮಧ್ಯೆಯೇ ಈ ವಿವಾಹ ಗಮನ ಸೆಳೆಯಿತು. ವರ ಭಾರತದ ಬಸವ ನಾಡಿನವನಾಗಿದ್ದಾರೆ, ವಧು ಸಪ್ತಸಾಗರದಾಚೆಯ ಕೆನೆಡಾ ಮೂಲದವಳಾಗಿದ್ದಾಳೆ.
ಬಸವ ನಾಡು ವಿಜಯಪುರ ನಗರದ ವಿಶ್ವನಾಥ ಮತ್ತು ಶೋಭಾ ಚಿಮ್ಮಲಗಿ ಅವರ ಪುತ್ರ ರವಿಕುಮಾರ ಚಿಮ್ಮಲಗಿ ಕೆನಡಾದ ದ ಯುವಕ ರವಿಕುಮಾರ ಕೆನಡಾದ ರೋಜ್‌ಮೇರಿ ಪ್ಲಾಟ್ ಮತ್ತು ಹ್ಯಾರಿ ಪೋಲಾರ್ಡ್ ದಂಪತಿ ಪುತ್ರಿ ಸಾರಾ ಪ್ರೀತಿಗೆ ಐದು ವರ್ಷಗಳ ಇತಿಹಾಸವಿದೆ. ಕೆನಡಾದಲ್ಲಿ ಒಂದೇ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುವ ರವಿಕುಮಾರ ಚಿಮ್ಮಲಗಿ ಹಾಗೂ ಸಾರಾ ನಡುವೆ 2017ರಲ್ಲೆ ಪ್ರೀತಿ ಚಿಗುರೊಡೆದಿತ್ತು. ಬಳಿಕ ಇವರಿಬ್ಬರೂ ತಂತಮ್ಮ ಮನೆಯವರನ್ನು ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರವಿಕುಮಾರ ಚಿಮ್ಮಲಗಿ ಹಿಂದೂವಾಗಿದ್ದರೆ, ಸಾರಾ ಕ್ರಿಶ್ಚಿಯನ್ ಆಗಿದ್ದಾರೆ. ಆದರೆ, ಇವರಿಬ್ಬರೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಡುವ ಮೂಲಕ ಸುಖ ಸಂಸಾರದ ಕನಸು ಹೊಂದಿದ್ದಾರೆ.
ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ಟೌನಹಾಲ ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದೆ. ವಿಜಯಪುರದ ಹುಡುಗನೊಂದಿಗೆ ಕೆನಡಾ ಬೆಡಗಿ ಸಪ್ತಪದಿ ತುಳಿದಿದ್ದು, ಅಪರೂಪದ ಮದುವೆಯನ್ನು ಇಲ್ಲಿನ ಜನರೂ ಕಣ್ತುಂಬಿಕೊಂಡಿದ್ದಾರೆ. ಈ ನವಜೋಡಿಗಳಿಗೆ ಮನಸಾರೆ ಶುಭ ಹಾರೈಸಿದ್ದಾರೆ.
ವಧು ಸಾರಾ ಕ್ರಿಶ್ಚಿಯನ್ ಧರ್ಮಿ, ರವಿಕುಮಾರ್ ಹಿಂದೂ ಧರ್ಮಿಯರಾದ್ರೂ ಮದುವೆ ಮಾತ್ರ ಪಕ್ಕಾ ಹಿಂದೂ ಸಂಪ್ರದಾಯದಂತೆಯೇ ನಡೆದಿದೆ. ಸೀರೆಯನ್ನುಟ್ಟು ನೇರಿಗೆ ಹೊದ್ದು ಹಿಂದೂ ಯುವತಿಂತೆ ಸಿಂಗಾರ ಮಾಡಿಕೊಂಡಿದ್ದ ಸಾರಾ ಸಂಪ್ರದಾಯ ಪಾಲನೆ ಗಮನ ಸೆಳೆದಿದೆ.
ಈ ಲವ್ ಕಮ್ ಅರೆಂಜ್ ಮ್ಯಾರೇಜಿನಲ್ಲಿ ಎಲ್ಲವೂ ಭಾರತೀಯ ಮತ್ತು ಹಿಂದೂ ಸಂಪ್ರದಾಯದಂತೆ ಮುದುವೆ ಕಾರ್ಯಕ್ರಮ ನಡೆದಿದೆ. ಸಾರಾಗೆ ಹಿಂದೂ ಆಚರಣೆಗಳು ಎಂದರೇ ಬಲು ಇಷ್ಟವಂತೆ. ಹೀಗಾಗಿ ಇಬ್ಬರ ನಡುವಿನ ಪ್ರೀತಿ ಮದುವೆ ಮೂಲಕ ಈಗ ಮತ್ತಷ್ಟು ಗಟ್ಟಿಗೊಂಡಿದೆ. ಮದುವೆಯಲ್ಲಿಯೂ ಸಾರಾ ಹಿಂದೂ ಸಂಪ್ರದಾಯದಂತೆ ಸೀರೆ ಉಟ್ಟು ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸಿದ್ದಾರೆ.
ವಿಜಯಪುರ ನಗರದ ಗಣ್ಯರು, ರಾಜಕಾರಣಿಗಳು ಈ ಅಪರೂಪದಲ್ಲಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ, ಈ ಭಾರತೀಯ ವರ ಮತ್ತು ಕೆನಡಾ ವಧುವಿನ ಮದುವೆಯಲ್ಲಿ ಪಾಲ್ಗೋಂಡು ದಾಂಪತ್ಯ ಜೀವನಕ್ಕೆ ಶುಭ ಕೋರಿದ್ದಾರೆ. ಸಾಗರ ಮೀರಿದ ಪ್ರೀತಿಯಿಂದ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ಈ ಜೋಡಿ ನೂರು ಕಾಲ ಇದೇ ರೀತಿ ಸದಾ ಸಂತೋಷದಿಂದ ಬಾಳಲಿ ಎಂದು ಹರಸಿದ್ದಾರೆ.
ಸಾಗರ ಮೀರಿದ ಪ್ರೀತಿ ಹಿರಿಯರ ಒಪ್ಪಿಗೆಯಂತೆ ಮದುವೆಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಟ್ಟಿರುವುದು ಗಮನಾರ್ಹವಾಗಿದೆ.
ಮದುವೆಗಳೆಂದರೇ ಹಾಗೆನೇ. ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿಗೆ ಈ ಮದುವೆ ನಿಜ ಎಂಬುವಂತಿದೆ.