Sports Sunilgouda: ಒತ್ತಡ ನಿವಾರಣೆಗೆ ಕ್ರೀಡೆಗಳು ಉತ್ತಮ ಸಾಧನವಾಗಿವೆ- ಸುನೀಲಗೌಡ ಪಾಟೀಲ

ವಿಜಯಪುರ: ಆಧುನಿಕ ಯುಗದಲ್ಲಿ ಒತ್ತಡ ನಿವಾರಕವಾರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯು ಒಳ್ಳೆಯ ಸಾಧನೆವಾಗಿದೆ ಎಂದು ವಿಜಯಪುರ-ಬಾಗಲಕೋಟ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬೆಂಗಳೂರು ಮತ್ತು ಕಲಬುರಗಿ ವಲಯ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಅವರು ಮಾತನಾಡಿದರು.

ವಿಜೇತ ತಂಡಗಳಿಗೆ ವಿಧಾನ‌ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಬಹುಮಾನ ವಿತರಿಸಿದರು

ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಕ್ರೀಡೆಗೂ ಸಮಾನ ಪ್ರಾಶಸ್ತ್ಯ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಅದರಂತೆ ಕ್ರಿಕೆಟ್ ಆಟಕ್ಕೆ ನೀಡುವ ಮಹತ್ವವನ್ನು ಇನ್ನಿತರೆ ಕ್ರೀಡೆಗಳಿಗೂ ನೀಡಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕಲಬುರಗಿ ವಲಯ ಮಟ್ಟದ ಸಂಯೋಜಕ ನತಾನಿಯೇಲ್ ವಿ., ಬಿ.ಎಲ್.ಡಿ.ಇ ಸಂಸ್ಥೆ ಕ್ರೀಡಾ ನಿರ್ದೇಶಕ ಎಸ್.ಎಸ್. ಕೋರಿ, ಸಹಾಯಕ ಕ್ರೀಡಾ ನಿರ್ದೇಶಕ ಕೈಲಾಸ ಹಿರೇಮಠ, ವಿಜಯಪುರ ಜಿಲ್ಲಾ ಥ್ರೋ ಬಾಲ್ ಸಂಸ್ಥೆಯ ಅಧ್ಯಕ್ಷ ಆರ್.ಆರ್. ಕುಲಕರ್ಣಿ, ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ನಡೆದ ಮಹಿಳೆಯರ ಪೈನಲ್ ತಂಡದಲ್ಲಿ ಕೊಪ್ಪಳದ ಎಸ್.ಜೆ. ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ವನಿತೆಯರು ರಾಯಚೂರಿನ ನವೋದಯ ವೈದ್ಯಕೀಯ ಮಹಾವಿದ್ಯಾಲಯವನ್ನು ಸೋಲಿಸಿ ಗೆಲುವಿನ ನಗೆ ಬೀರಿದರು.

ಪುರುಷರ ಪೈನಲ್ ಪಂದ್ಯದಲ್ಲಿ ರಾಯಚೂರು ನವೋದಯ ವೈದ್ಯಕೀಯ ಮಹಾವಿದ್ಯಾಲಯ ತಂಡ ವಿಜಯಪುರದ ಅಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯದ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೆರಿಸಿಕೊಂಡಿತು.
ಪೆÇೀಟೊ ಕ್ಯಾಪ್ಚನ್: ವಿಜಯಪುರದಲ್ಲಿ ನಡೆದ ರಾಜೀವಗಾಂಧಿ ವಿವಿ ಬೆಂಗಳೂರು ಮತ್ತು ಕಲಬುರಗಿ ವಲಯಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಜಯಿಸಿದ ಕೊಪ್ಪಳದ ಎಸ್.ಜೆ. ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಮಹಿಳೆಯರ ತಂಡ.

Leave a Reply

ಹೊಸ ಪೋಸ್ಟ್‌