Series Theft: ಭೀಮಾ ತೀರದ ಉಮರಾಣಿ ಗ್ರಾಮದ ಮನೆಗಳಲ್ಲಿ ಸರಣಿ ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರ ಓಡಾಟ

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಭೀಮಾ ತೀರದ ಉಮರಾಣಿ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿದ್ದರು, ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿದೆ‌.

ಉಮರಾಣಿ ಗ್ರಾಮದಲ್ಲಿ ತಿಜೋರಿ ಒಡೆದು ಕಳ್ಳತನ ನಡೆಸಿರುವ ಖದೀಮರು

ಉಮರಾಣಿ ಗ್ರಾಮದಲ್ಲಿ ಮೂರು ಮನೆಗಳ ಸರಣಿ ಕಳ್ಳತನ ನಡೆದಿದೆ. ಗ್ರಾನದ ಸದಾಶಿವ ಕೋಳಿ, ಜಗದೇವ ಕೋಳಿ, ಮಲ್ಲಯ್ಯ‌ ಎಂಬುವವರಿಗೆ ಸೇರಿದ ಮನೆಗಳಲ್ಲಿ ಸರಣಿ ಕಳ್ಳತನ
ನಡೆದಿದೆ.

ಮನೆಗೆ ಬೀಗ ಹಾಕಿ‌ ಮನೆಯವರು ಬೇರೆಡೆ ತೆರಳಿದ್ದರು. ಈ ವೇಳೆ ಕಳ್ಳರು ಕೈ ಚಳಕ ತೊರಿಸಿದ್ದಾರೆ. ಸುಮಾರು 40 ಗ್ರಾಂ ಚಿನ್ನಾಭರಣ, ರೂ. 50 ಸಾವಿರ ನಗದು ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಕಳ್ಳರ ಒಡಾಟ ಸಿಸಿಟಿವಿಯಲ್ಲಿ ಸೆರೆ

ಈ‌ ಖದೀಮರ ಓಡಾಟ ಸಿಸಿ‌‌ ಕೆಮೆರಾದಲ್ಲಿ ಸೆರೆಯಾಗಿದೆ.  ಕಳ್ಳತನ ನಡೆದ ಘಟನಾ ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

ಹೊಸ ಪೋಸ್ಟ್‌