Highmask Light Foundation: ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಗೆ ಡಾ. ದೇವಾನಂದ ಚವ್ಹಾಣ ಭೂಮಿಪೂಜೆ

ವಿಜಯಪುರ: ನಾಗಠಾಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿಜಯಪುರ ನಗರದ ವಾರ್ಡ್ ನಂ.12ರ ಗಚ್ಚಿನಕಟ್ಟಿ ಕಾಲನಿ ಬಾಳಿ ಪರಿಸಿ ಅಡ್ಡೆ ಹತ್ತಿರ ಹೊಸದಾಗಿ ರೂ. 17.30 ಲಕ್ಷ ರೂ. ವೆಚ್ಚದಲ್ಲಿ 16 ಮೀಟರ್ ಎತ್ತರದ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಗೆ ಹಾಗೂ ವಾರ್ಡ್ ನಂ.12ರ ಅಕ್ಕಿ ಕಾಲೋನಿ ಬಲಮುರಿ ಗಣಪತಿ ದೇವಸ್ಥಾನ ಹತ್ತಿರ ರೂ. 4 ಲಕ್ಷ ರೂ. ವೆಚ್ಚದಲ್ಲಿ 12.50 ಮೀಟರ್ ಎತ್ತರದ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಗೆ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಭೂಮಿ ಪೂಜೆ ನೆರವೇರಿಸಿದರು. 

ಗಚ್ಚಿನಕಟ್ಟಿ ಕಾಲನಿ ಬಳಿ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಹೈಮಾಸ್ಕ್ ಕಾಮಗಾರಿಗೆ ಚಾಲನೆ ನೀಡಲಾಯಿತು

ಬಳಿಕ ಮಾತನಾಡಿದ ಅವರು, ನಾಗಠಾಣ ಮತಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ರಸ್ತೆ ಮೊದಲಾದ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಜನತೆಯ ಆಶೀರ್ವಾದ ಬಲದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಜನರ ಋಣ ತೀರಿಸುವ ಕಾಯಕ ಮಾಡುತ್ತಿರುವೆ.  ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿಯ ಬಗ್ಗೆ ನಿಗಾ ವಹಿಸಿ, ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಡಾ. ದೇವಾನಂದ ಚವ್ಹಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ, ವಿಡಿಎ ಸದಸ್ಯ ಲಕ್ಷ್ಮಣ ಜಾಧವ, ಮುಖಂಡ ರಾಜು ಚಿಂಚಲಿಕರ, ಅಶೋಕ್ ಜೈನ, ಲಖನ ದೋತ, ಚನ್ನಪ್ಪ ಡಮಾಗಾರ, ಪ್ರಕಾಶ ಚವಾಣ, ಸಂಪತ ರಾಠೋಡ, ಬಸಲಿಂಗಪ್ಪ ಸಾರವಾಡ, ಶಿವು ಕೋಳಿ, ರಾಜು ಹಿರೇಮಠ, ವಿಡಿಎ ಎಂಜಿನಿಯರ್ ಶಂಭುಲಿಂಗ ಹೆರಲಗಿ, ಪ್ರಮೀಳಾ ಚಿಮ್ಮಲಗಿ, ಮಹಾನಗರ ಪಾಲಿಕೆ ಎಂಜಿನಿಯರ್ ಸುನೀಲ ಹಿರೇಮನಿ  ಮುಂತಾದವರು ಉಪಸ್ಥಿತರಿದ್ದರು.

ಅಕ್ಕಿ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲು ಪಟ್ಟಣಶೆಟ್ಟಿ, ಲಕ್ಷ್ಮಣ ಕುಂಬಾರ, ಪ್ರವೀಣ ಬೆಳ್ಳನವರ, ಅಭಿಷೇಕ ಹಾವಳಗಿ, ಲಿಂಗರಾಜ ಬಿರಾದಾರ, ಪ್ರವೀಣ ಕುಂಟೋಜಿ, ದಯಾನಂದ ಬಿಳಿಜಾಡರ, ಮನೋಹರ ಇನಾಮದಾರ, ಮುತ್ತು ಜಂಗಮಶೆಟ್ಟಿ, ಪ್ರಶಾಂತ ದೇಸಾಯಿ, ಅರುಣ ಕುಂಬಾರ, ಪ್ರಕಾಶ ಚವ್ಹಾಣ, ಅರುಣ ಪಾರಶೆಟ್ಟಿ, ಪ್ರವೀಣ ಅಕ್ಕಿ, ರೋಹಿತ ಮೆಳ್ಳಿ, ಬಸಲಿಂಗಪ್ಪ ಸಾರವಾಡ, ಶಿವು ಕೋಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌