Earthquake Damage: ಭೂಕಂಪನ ಎಫೆಕ್ಟ್- ಬತ್ತಿದ ಭಾವಿ, ತಿಕೋಟಾ, ಇಂಡಿ ತಾಲೂಕುಗಳಲ್ಲಿ 48 ಮನೆಗಳಿಗೆ ಹಾನಿ
ವಿಜಯಪುರ: ಬೆಳಿಗ್ಗೆ ಸಂಭವಿಸಿದ ಭೂಕಂಪನ ದಿಂದಾಗಿ ವಿಜಯಪುರ ಜಿಲ್ಲೆಯ ತಿಕೋಟಾ ಮತ್ತು ಇಂಡಿ ತಾಲೂಕುಗಳಲ್ಲಿ ಹಾನಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. ತಿಕೋಟಾ ತಾಲೂಕಿನ ಅರಕೇರಿ ಮತ್ತು ಅರಕೇರಿ ತಾಂಡಾಗಳಲ್ಲಿ ಭೂಕಂಪನದಿಂದ ಹಾನಿಯಾಗಿದೆ. ಹಿರಿಯ ಭೂ ವಿಜ್ಞಾನಿ, ತಿಕೋಟಾ ಕಂದಾಯ ನಿರೀಕ್ಷಕರು ಮತ್ತು ಅರಕೇರಿ ಗ್ರಾಮ ಲೆಕ್ಕಾಧಿಕಾರಿ ಅವರು ತಹಸೀಲ್ದಾರ ಅವರ ಸಮ್ಮುಖದಲ್ಲಿ ಜಂಟಿಯಾಗಿ ಹಾನಿಯಾದ ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಅರಕೇರಿ ಮತ್ತು ಅರಕೇರಿ ತಾಂಡಾದಲ್ಲಿ ಎರಡು ಹಳೆಯ ಮನೆಗಳ ಹಿಂಭಾಗದ ಭಾಗವು […]
Earthquake DC: ವಿಜಯಪುರ ಜಿಲ್ಲೆಯಲ್ಲಿ ಹಲವೆಡೆ ಭೂಕಂಪನ: ಭಯಭೀತರಾಗದಂತೆ ಸಾರ್ವಜನಿಕರಲ್ಲಿ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮನವಿ
ವಿಜಯಪುರ: ಜಿಲ್ಲೆಯ ಕನ್ನೂರ ಸೇರಿದಂತೆ ನಾನಾ ಕಡೆ ಬೆಳಿಗ್ಗೆ ಸಂಭವಿಸಿದ 4.4 ತೀವ್ರತೆಯ ಲಘು ಭೂಕಂಪನ ಕುರಿತು ಖಚಿತ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕರು ಭಯಪಡಬಾರದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ. ಭೂಕಂಪನದ ವಿಷಯ ತಿಳಿಯುತ್ತಿದ್ದಂತೆ ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರ ಬೆಂಗಳೂರಿನ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಭೂಕಂಪನ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ವಿಜಯಪುರ ಮತ್ತು ಮಹಾರಾಷ್ಟ್ರ ಪ್ರದೇಶದ ಗಡಿ ಪ್ರದೇಶದ ವಿವಿಧೆಡೆ ಈ ಲಘು ಭೂಕಂಪನ ಸಂಭವಿಸಿದೆ. ಜುಲೈ 9ರಂದು ಬೆಳಗಿನ 6.22ರ ಸುಮಾರಿನ […]
Farmers Bapugouda Patil: ರೈತ ಸಂಪರ್ಕ ಕೇಂದ್ರಕ್ಕೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಾಪುಗೌಡ ಪಾಟೀಲ ಭೇಟಿ, ಮಾಹಿತಿ ಸಂಗ್ರಹಣೆ
ವಿಜಯಪುರ: ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಿಸಾನ್ ಕಾಂಗ್ರೆಸ್ ವಿಜಯಪುರ ಜಿಲ್ಲಾಧ್ಯಕ್ಷ ಬಾಪುಗೌಡ ಪಾಟೀಲ(ವಡವಡಗಿ) ಹೂವಿನ ಹಿಪ್ಪರಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿತ್ತನೆ ಬೀಜಗಳ ದಾಸ್ತಾನು ಕುರಿತು ಅದಿಕಾರಿಗಳಿಂದ ಮಾಹಿತಿ ಪಡೆದ ಅವರು, ಲಘು ಪೋಷಕಾಂಶಗಳ, ಬಿತ್ತನೆ ಬೀಜ ಕುರಿತೂ ಮಾಹಿತಿ ಸಂಗ್ರಹಿಸಿದರು. ಸರಿಯಾಗಿ ರೈತರಿಗೆ ತಲುಪಿಸಿ ರೈತರಿಗೆ ನೆರವಾಗಬೇಕು, ರೈತರಿಂದ ಹೆಚ್ಚುವರಿ ಹಣ ಪಡೆಯಬೇಡಿ. ಬೀಜ ದಾಸ್ತಾನು ಕಾಯ್ದುಕೊಳ್ಳಿ. ಎಲ್ಲಾ ರೈತರಿಗೂ ಬೀಜ ಸಿಗುವಂತೆ ನೊಡಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಕ್ಕೆ, […]
Liquor MBP Warn: ಮಹಿಳೆಯರ ಅಳಲಿಗೆ ಸ್ಪಂದಿಸಿ ಅಬಕಾರಿ, ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಎಂ. ಬಿ. ಪಾಟೀಲ- ಯಾಕೆ ಗೊತ್ತಾ?
ವಿಜಯಪುರ: ಅಬಕಾರಿ ಮತ್ತು ಪೊಲೀಸ ಇಲಾಖೆ ಅಧಿಕಾರಿಗಳನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟದಿಂದ ಸಮಸ್ಯೆಯಾಗುತ್ತಿದೆ. ಅಪ್ರಾಪ್ತ ಯುವಕರು ಕೂಡ ಮದ್ಯದ ದಾಸರಾಗುತ್ತಿದ್ದಾರೆ. ಈಗಾಗಲೇ ಕೆಲವು ಪುರುಷರು ಸಾವಿಗೀಡಾಗಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಜವಾಬ್ದಾರಿ ಮಹಿಳೆಯರಿಗೆ ಭಾರವಾಗುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮದ ಮಹಿಳೆಯರು ವಿಜಯಪುರದಲ್ಲಿ ತಮ್ಮ ಶಾಸಕರಾದ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ […]
Govt M. B. Patil: ಸರಕಾರಕ್ಕೆ ಜನಹಿತಕ್ಕಿಂತ ಸ್ವಹಿತ ಮುಖ್ಯವಾಗಿದೆ- ಎಂ. ಬಿ. ಪಾಟೀಲ ವಾಗ್ದಾಳಿ
ವಿಜಯಪುರ: ರಾಜ್ಯ ಬಿಜೆಪಿ ಸರಕಾರಕ್ಕೆ ಜನರ ಸಂಕಷ್ಟ, ಅಭಿವೃದ್ಧಿ, ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡುವ ಬಗ್ಗೆ ಗಮನವಿಲ್ಲ. ಬಿಜೆಪಿಯವರಿಗೆ ಅವರದೆ ಆದ ಆಧ್ಯತೆಗಳಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳಿಗೆ ಈಗಾಗಲೇ ಮುಖ್ಯಮಂತ್ರಿಗಳು ಭೇಟಿನೀಡಬೇಕಿತ್ತು. ಕಂದಾಯ ಸಚಿವ ಆರ್. ಅಶೋಕ ಮಾತ್ರ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆಯನ್ನಾದರೂ ಮಾಡಿ ಪ್ರವಾಹ ಸಂತ್ರಸ್ಥರ ನೆರವಿಗೆ ಧಾವಿಸಬೇಕಿತ್ತು. ಎಲ್ಲವೂ […]
Earthquake Kannur: ಕನ್ನೂರಿನಿಂದ ಆಗ್ನೆಯಕ್ಕೆ 2.30 ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಕೇಂದ್ರ ಬಿಂದು
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬೆಳಿಗ್ಗೆ ಸಂಭವಿಸಿದ ಭೂಕಂಪನದ ಕೇಂದ್ರಬಿಂದು ಕನ್ನೂರಿನಿಂದ ಆಗ್ನೆಯ ಭಾಗದಲ್ಲಿ ಸುಮಾರು 2.30 ಕಿ. ಮೀ. ದೂರದಲ್ಲಿ ಪತ್ತೆಯಾಗಿದೆ. ಬೆಳಿಗನ ಜಾವ 6.22ಕ್ಕೆ ಭೂಮಿಯೊಳಗಿಂದ ಗಢಗಢ ಶಬ್ದ ಕೇಳಿ ಬಂದಿದ್ದು, ಭೂಕಂಪನ ಉಂಟಾಗಿತ್ತು. ವಿಜಯಪುರ ಜಿಲ್ಲೆ ಮಾತ್ರವಲ್ಲ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ಮತ್ತ ಸೋಲಾಪುರ ಜಿಲ್ಲೆಯ ದಕ್ಷಿಣ ಸೋಲಾಪುರ ತಾಲೂಕಿನ ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಇದರಿಂದಾಗಿ ಜನರಲ್ಲಿ ಆತಂಕ ಉಂಟಾಗಿತ್ತು. ಇದನ್ನೂ ಓದಿ: Earthquake 4.9 magnitude?: ಬಸವ […]
Earthquake 4.9 magnitude?: ಬಸವ ನಾಡಿನಲ್ಲಿ ಕಂಪಿಸಿದ ಭೂಮಿ- ಮಹಾರಾಷ್ಟ್ರದಲ್ಲೂ ಅನುಭವ- ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ?
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೂಕಂಪವನ ಅನುಭವವಾಗಿದ್ದು, ಇದು ನೆರೆಯ ಮಹಾರಾಷ್ಟ್ರದಲ್ಲಿಯೂ ಅನುಭವಕ್ಕೆ ಬಂದಿದೆ. ಒಂದು ಮೂಲದ ಪ್ರಕಾರ ಭೂಕಂಪದ ಕೇಂದ್ರ ಬಿಂದು ವಿಜಯಪುರ ನಗರದ ಸುತ್ತಮತ್ತಲು ದಾಖಲಾಗಿದ್ದು, ಭೂಮಿಯಿಂದ 5 ಕಿ. ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ. ಈ ಭೂಕಂಪದ ತೀವ್ರತೆ 4.9 ಮೆಗ್ನಿಟ್ಯೂಡ್ ಎಂದು ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಇದನ್ನೂ ಓದಿ: https://basavanadu.com/2022/07/09/vijayapura-earthquake-and-sound-felt-in-district-people-come-out-of-home-in-early-morning/ ಬೆಳಿಗ್ಗೆ 6.22ಕ್ಕೆ […]
Sound Earthquake: ವಿಜಯಪುರ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೂಕಂಪನ ಅನುಭವ
ವಿಜಯಪುರ ನಗರ, ಇಂಡಿ ಸೇರಿದಂತೆ ಬಹುತೇಕ ಕಡೆ ಬೆಳ್ಳಂಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಶಬ್ದವೂ ಕೇಳಿ ಬಂದಿದೆ. ಬೆ. 5.40ರ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಅನುಭವಕ್ಕೆ ಬಂದಿದ್ದರೆ, ಬೆ. 6.22ರ ಸುಮಾರಿಗೆ ಭೂಮಿ ಗಢಗಢ ನಡುಗಿದ ಅನುಭವವಾಗಿದೆ. ಸಕ್ಕರೆ ನಿದ್ದೆಯಲ್ಲಿದ್ದ ಜನ ಭೂಮಿ ನಡುಗಿದ ಅನುಭದಿಂದಾಗಿ ಹೌಹಾರಿ ಎದ್ದು ಕುಳಿತು ಮನೆಯಲ್ಲಿದ್ದವರಿಗೆ ಭೂಕಂಪ ಆಯ್ತಾ ಎಂದು ಗಾಬರಿಯಿಂದ ಪ್ರಶ್ನಿಸಿದ್ದಾರೆ. ವಿಜಯಪುರ ನಗರದ ಆದರ್ಶ ನಗರ, ಕಾಸಗೇರಿ ಓಣಿ, ಗೋಳಗುಮ್ಮಟ ಪ್ರದೇಶ, ಕೆಸಿ ನಗರ, ಜಲನಗರ ಸೇರಿದಂತೆ ಬಹುತೇಕ […]