Earthquake 4.9 magnitude?: ಬಸವ ನಾಡಿನಲ್ಲಿ ಕಂಪಿಸಿದ ಭೂಮಿ- ಮಹಾರಾಷ್ಟ್ರದಲ್ಲೂ ಅನುಭವ- ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ?

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೂಕಂಪವನ ಅನುಭವವಾಗಿದ್ದು, ಇದು ನೆರೆಯ ಮಹಾರಾಷ್ಟ್ರದಲ್ಲಿಯೂ ಅನುಭವಕ್ಕೆ ಬಂದಿದೆ.

ಒಂದು ಮೂಲದ ಪ್ರಕಾರ ಭೂಕಂಪದ ಕೇಂದ್ರ ಬಿಂದು ವಿಜಯಪುರ ನಗರದ ಸುತ್ತಮತ್ತಲು ದಾಖಲಾಗಿದ್ದು, ಭೂಮಿಯಿಂದ 5 ಕಿ. ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ.

ಈ ಭೂಕಂಪದ ತೀವ್ರತೆ 4.9 ಮೆಗ್ನಿಟ್ಯೂಡ್ ಎಂದು ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.  ಆದರೆ, ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಇನ್ನಷ್ಟೇ ಮಾಹಿತಿ ನೀಡಬೇಕಿದೆ.

ಇದನ್ನೂ ಓದಿ:

https://basavanadu.com/2022/07/09/vijayapura-earthquake-and-sound-felt-in-district-people-come-out-of-home-in-early-morning/

ಬೆಳಿಗ್ಗೆ 6.22ಕ್ಕೆ ಉಂಟಾದ ಭೂಕಂಪದ ಅನುಭವ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ, ಬಸವ ನಾಡಿನ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ತಿಕ್ಕುಂಡಿ, ಮರಬಗಿ, ತಿಕ್ಕುಂಡಿ, ಜಾಲಿಹಾಳ ಮುಚ್ಚಂಡಿ ಕಡೆಗಳಲ್ಲಿ ಹಾಗೂ ಸೋಲಾಪುರ ಜಿಲ್ಲೆಯ ದಕ್ಷಿಣ ಸೋಲಾಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿಯೂ ಅನುಭವಕ್ಕೆ ಬಂದಿದೆ ಎಂದು ಜನರು ತಿಳಿಸಿದ್ದಾರೆ.

 

Leave a Reply

ಹೊಸ ಪೋಸ್ಟ್‌