Earthquake Kannur: ಕನ್ನೂರಿನಿಂದ ಆಗ್ನೆಯಕ್ಕೆ 2.30 ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಕೇಂದ್ರ ಬಿಂದು

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬೆಳಿಗ್ಗೆ ಸಂಭವಿಸಿದ ಭೂಕಂಪನದ ಕೇಂದ್ರಬಿಂದು ಕನ್ನೂರಿನಿಂದ ಆಗ್ನೆಯ ಭಾಗದಲ್ಲಿ ಸುಮಾರು 2.30 ಕಿ. ಮೀ. ದೂರದಲ್ಲಿ ಪತ್ತೆಯಾಗಿದೆ.  

ಬೆಳಿಗನ ಜಾವ 6.22ಕ್ಕೆ ಭೂಮಿಯೊಳಗಿಂದ ಗಢಗಢ ಶಬ್ದ ಕೇಳಿ ಬಂದಿದ್ದು, ಭೂಕಂಪನ ಉಂಟಾಗಿತ್ತು. ವಿಜಯಪುರ ಜಿಲ್ಲೆ ಮಾತ್ರವಲ್ಲ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ಮತ್ತ ಸೋಲಾಪುರ ಜಿಲ್ಲೆಯ ದಕ್ಷಿಣ ಸೋಲಾಪುರ‌ ತಾಲೂಕಿನ ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಇದರಿಂದಾಗಿ‌ ಜನರಲ್ಲಿ ಆತಂಕ‌ ಉಂಟಾಗಿತ್ತು.

ಇದನ್ನೂ ಓದಿ:

Earthquake 4.9 magnitude?: ಬಸವ ನಾಡಿನಲ್ಲಿ ಕಂಪಿಸಿದ ಭೂಮಿ- ಮಹಾರಾಷ್ಟ್ರದಲ್ಲೂ ಅನುಭವ- ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ?

ಕರ್ನಾಟಕ- ಮಹಾರಾಷ್ಟ್ರದ ಗಡಿ ಕೇಂದ್ರ ಬಿಂದು

ಕನ್ನೂರಿನಿಂದ 2.30 ಕಿ. ಮೀ. ದೂರದಲ್ಲಿ ಆಗ್ನೆಯ ಭಾಗದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕನ್ನೂರಿನಿಂದ ಆಗ್ನೆಯ ಭಾಗದಲ್ಲಿ ಈ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಮಿಯಿಂದ ಸುಮಾರು 10 ಕಿ. ಮೀ. ಆಳದಲ್ಲಿ ಭೂಮಿ‌ ಕಂಪಿಸಿದ್ದು ರಿಕ್ಚರ್ ಮಾಪಕದಲ್ಲಿ‌ 4.40 ತೀವ್ರತೆಯ ಭೂಕಂಪನ‌ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌