ವಿಜಯಪುರ: ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಿಸಾನ್ ಕಾಂಗ್ರೆಸ್ ವಿಜಯಪುರ ಜಿಲ್ಲಾಧ್ಯಕ್ಷ ಬಾಪುಗೌಡ ಪಾಟೀಲ(ವಡವಡಗಿ) ಹೂವಿನ ಹಿಪ್ಪರಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿತ್ತನೆ ಬೀಜಗಳ ದಾಸ್ತಾನು ಕುರಿತು ಅದಿಕಾರಿಗಳಿಂದ ಮಾಹಿತಿ ಪಡೆದ ಅವರು, ಲಘು ಪೋಷಕಾಂಶಗಳ, ಬಿತ್ತನೆ ಬೀಜ ಕುರಿತೂ ಮಾಹಿತಿ ಸಂಗ್ರಹಿಸಿದರು. ಸರಿಯಾಗಿ ರೈತರಿಗೆ ತಲುಪಿಸಿ ರೈತರಿಗೆ ನೆರವಾಗಬೇಕು, ರೈತರಿಂದ ಹೆಚ್ಚುವರಿ ಹಣ ಪಡೆಯಬೇಡಿ. ಬೀಜ ದಾಸ್ತಾನು ಕಾಯ್ದುಕೊಳ್ಳಿ. ಎಲ್ಲಾ ರೈತರಿಗೂ ಬೀಜ ಸಿಗುವಂತೆ ನೊಡಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಕ್ಕೆ, ಬರುವ ರೈತರನ್ನು ಗೌರವ ಭಾವನೆಯಿಂದ ಕಾಣಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಮಂಜುನಾಥ ಬುದ್ನಿ ಮಾತನಾಡಿ, ರೈತರಿಗೆ ಸರಕಾರದಿಂದ ಸಿಗುವ ಸೌಲ್ಯಭ್ಯಗಳನ್ನು, ಸಬ್ಸಿಡಿಗಳನ್ನು, ಸಿಬ್ಬಂದಿಗಳ ಕೊರತೆಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಲಕನಗೌಡ ಬಿರಾದಾರ, ಪ್ರಧಾನ ಕಾರ್ಯದರ್ಶಿ ಕಾಂತು ನಾಯಕ, ಸಂಗನಗೌಡ ತೆಗ್ಗಿಹಳ್ಳಿ, ಚಿದಾನಂದ ಹುಗ್ಗಿ ಮುಂತಾದವರು ಉಪಸ್ಥಿತರಿದ್ದರು.