Govt M. B. Patil: ಸರಕಾರಕ್ಕೆ ಜನಹಿತಕ್ಕಿಂತ ಸ್ವಹಿತ ಮುಖ್ಯವಾಗಿದೆ- ಎಂ. ಬಿ. ಪಾಟೀಲ ವಾಗ್ದಾಳಿ

ವಿಜಯಪುರ: ರಾಜ್ಯ ಬಿಜೆಪಿ ಸರಕಾರಕ್ಕೆ ಜನರ ಸಂಕಷ್ಟ, ಅಭಿವೃದ್ಧಿ, ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡುವ ಬಗ್ಗೆ ಗಮನವಿಲ್ಲ. ಬಿಜೆಪಿಯವರಿಗೆ ಅವರದೆ ಆದ ಆಧ್ಯತೆಗಳಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳಿಗೆ ಈಗಾಗಲೇ ಮುಖ್ಯಮಂತ್ರಿಗಳು ಭೇಟಿನೀಡಬೇಕಿತ್ತು. ಕಂದಾಯ ಸಚಿವ ಆರ್. ಅಶೋಕ ಮಾತ್ರ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆಯನ್ನಾದರೂ ಮಾಡಿ ಪ್ರವಾಹ ಸಂತ್ರಸ್ಥರ ನೆರವಿಗೆ ಧಾವಿಸಬೇಕಿತ್ತು. ಎಲ್ಲವೂ ಕಣ್ಣಾಡಿಸುವ ತಂತ್ರವಾಗಬಾರದು ಎಂದು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ

ಈ ಹಿಂದೆ ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಕಾಗವಾಡ ಮುಂತಾದೆಡೆ ಪ್ರವಾಹ ಉಂಟಾದಾಗ ಯಾವ ಪರಿಹಾರ ನೀಡಿದ್ದಾರೆ. ಪ್ರವಾಹ ಬಂದಾಗ ಕೇವಲ ಪರಿಹಾರದ ಬಗ್ಗೆ ಮಾತನಾಡಿ ಸುಮ್ಮನಾಗಿ ಬಿಡುವುದು ಸರಿಯಲ್ಲ. ಅದರ ಬದಲು ಶಾಶ್ವತ ಪರಿಹಾರ ಒದಗಿಸಬೇಕು. ತಾಂತ್ರಿಕ ನೆಪವೊಡ್ಡಿ ಪರಿಹಾರ ಕಾರ್ಯಗಳನ್ನು ನೀಡದಿರುವುದು ಸರಿಯಲ್ಲ. ತಕ್ಷಣ ಸ್ಪಂದಿಸಿ ಶಾಶ್ವತ ಪರಿಹಾರವನ್ನು ಒದಗಿಸಲು ಮುಂದಾಗಬೇಕು. ಹೀಗೆ ಮಾಡದಿರುವುದು ಖಂಡನೀಯ. ಸರಕಾರ ಹಿಂದಿನ ಅನುಭವಗಳನ್ನು ಬಳಸಿ ಸೂಕ್ತ ಪರಿಹಾರ ಒದಗಿಸಬೇಕು. ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅವರದೇ ಆಧ್ಯತೆ ಹೊಂದಿರುವ ಕೆಟ್ಟ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂದು ಆರೋಪಿಸಿದರು.

ಪಿಎಸ್‍ಆಯ್ ನೇಮಕಾತಿ ಅಕ್ರಮ ಪ್ರಕರಣ

ಹಿಂದಿನ ಸರಕಾರಗಳಲ್ಲಿಯೂ ಅಕ್ರಮ ನೇಮಕಾತಿ ನಡೆದಿದೆ ಎಂದು ಬಿಜೆಪಿ ನಾಯಕರು ಮಾಡುತ್ತಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಾನು ಸಮ್ಮಿಶ ಸರಕಾರದಲ್ಲಿ ್ರಗೃಹ ಸಚಿವನಾಗಿದ್ದಾಗ ಔರಾದಕರ ನೇತೃತ್ವದಲ್ಲಿ ನೇಮಕಾತಿ ಮಾಡಿದ್ದೇವು ಆಗ ಒಂದೇ ಒಂದು ಪಿಎಸ್‍ಐ ಅಥವಾ ಪೇದೆ ನೇಮಕಾತಿಯ ಅಕ್ರಮದ ಕುರಿತು ಒಂದೇ ಒಂದು ದೂರು ಬಂದಿರಲಿಲ್ಲ. ಪೊಲೀಸ ಇಲಾಖೆಯಲ್ಲಿ ಒಳ್ಳೆಯ ಅಧಿಕಾರಿಗಳು ಇದ್ದಾರೆ. ಸರಕಾರಕ್ಕೆ ಒಳ್ಳೆಯ ಮನಸ್ಸಿದ್ದರೆ ಅಂಥ ಪ್ರಾಮಾಣಿಕ ಅಧಿಕಾರಿಗಳ ನೇತೃತ್ವದಲ್ಲಿ ನೇಮಕಾತಿ ನಡೆಸಬೇಕು. ನಾವು ಹೇಗಿರುತ್ತೇವೊ ಅಧಿಕಾರಿಗಳು ಅದೇ ರೀತಿ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.
ಈ ಪ್ರಕರಣ ಇನ್ನೂ ಎಲ್ಲಿಗೆ ಮುಟ್ಟುತ್ತೊ ಗೊತ್ತಿಲ್ಲ. ಒಬ್ಬ ಉನ್ನತ ಮಟ್ಟದ ಅಧಿಕಾರಿಯೇ ಬಂಧನಕ್ಕೊಳಗಾಗಿದ್ದಾರೆ ಎಂದರೆ ಇದರಂಥ ಕೆಟ್ಟ ಸರಕಾರ ಬೇರೊಂದಿಲ್ಲ. ಯಾವ ಸರಕಾರದ ಅವಧಿಯಲ್ಲಿ ಯಾವ ಅಕ್ರಮವಾಗಿದೆ ಎಂಬುದನ್ನು ಹೇಳಲಿ. ಅದನ್ನು ಬಿಟ್ಟು ತಾವು ತಪ್ಪು ಮಾಡಿ ಬೇರೆಯವರ ಮೇಲೆ ಆರೋಪ ಮಾಡುವ ಕೆಲಸವಾಗಬಾರದು. ಹಿಂದೆ ಯಾವ ಸರಕಾರದಲ್ಲಿ ಯಾರು ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ನಡೆದಿದೆ ಸ್ಪಷ್ಟಪಡಿಸಿ. ಈಗಿನ ಪ್ರಕರಣವನ್ನು ನಿದ್ರಾಕ್ಷೀಣ್ಯವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ, ಈ ಪ್ರಕರಣದಲ್ಲಿ ಕಾಣದ ಕೈಗಳ ಕುರಿತು ತನಿಖೆ ಮಾಡಿ. ಎಷ್ಟೇ ದೊಡ್ಡವರಿದ್ದರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಎಂ. ಬಿ. ಪಾಟೀಲ ಹೇಳಿದರು.

ಪಠ್ಯಪುಸ್ತಕ ವಿವಾದ, ಶೂ ಭಾಗ್ಯ ವಿಚಾರ

40% ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ರಾಜ್ಯ ಸರಕಾರದಿಂದ ಅಭಿವೃದ್ಧಿ ಆಗುತ್ತಿಲ್ಲ. ಯಾವ ಸಚಿವರು ಏನು ಕೆಲಸ ಮಾಡುತ್ತಿದ್ದಾರೆ ಯಾರಿಗೂ ಗೊತ್ತಿಲ್ಲ. 2023ರಲ್ಲಿ ಇವರನ್ನು ಕಿತ್ತು ಹಾಕಲು ಜನ ಕಾಯುತ್ತಿದ್ದಾರೆ. ಈ ರೀತಿ ಸರಕಾರ ಬೇಕಿತ್ತಾ ಎಂದು ಇವರ ವರ್ತನೆಯಿಂದ ಸ್ವತಃ ಬಿಜೆಪಿ ಕಾರ್ಯಕರ್ತರೆ ಬೇಸರಗೊಂಡಿದ್ದಾರೆ. ಆಫರೇಷನ ಕಮಲದ ಪಾಪದ ಕೂಸು ಈ ಸರಕಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇವರು ರಾಜ್ಯ ಸರಕಾರಕ್ಕೆ ಅವರದೇ ಆದ ಆಧ್ಯತೆಗಳಿರುವುದರಿಂದ ಮಕ್ಕಳ ಹಿತರಕ್ಷಣೆಯನ್ನು ಕಡೆಗಣಿಸಲಾಗಿದೆ. ಯಾವ ಸಮಯಕ್ಕೆ ಪಠ್ಯಪುಸ್ತಕ ಕೊಡಬೇಕು. ಶೂ ನೀಡಬೇಕು ಎಂಬುವುದರ ಬಗ್ಗೆ ಅವರಿಗೆ ಗಂಭೀರತೆ ಇಲ್ಲ. ಅವರಿಗೆ ಇದೆಲ್ಲ ಬೇಕಾಗಿಯೂ ಇಲ್ಲ. ಚಕ್ರತೀರ್ಥರಂಥವರ ನೇತೃತ್ವದಲ್ಲಿ ಪಠ್ಯಪುಸ್ತಕ ರಚನಾ ಸಮಿತಿ ಹೆಸರಿನಲ್ಲಿ ಇತಿಹಾಸ ತಿರುಚುವುದು, ಕೋಮು ಗಲಭೆ ಸೃಷ್ಟಿಸುವುದು ಇದೇ ಬೇಕಾಗಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.

ಸಿದ್ಧರಾಮಯ್ಯ ಜನ್ಮದಿನೋತ್ಸವ ಕಾರ್ಯಕ್ರಮ

ಇದು ಸಿದ್ಧರಾಮೋತ್ಸವ ಕಾರ್ಯಕ್ರಮವಲ್ಲ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ 75ನೇ ಜನ್ಮದಿನೋತ್ಸವ ಕಾರ್ಯಕ್ರಮ. ಗ್ರಾಮೀಣ ಪ್ರದೇಶದಲ್ಲಿ, ರೈತ ಕುಟುಂಬದಲ್ಲಿ ಜನಿಸಿ, ತಮ್ಮ ಪರಿಶ್ರಮದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅವರು ಅರ್ಥ ಸಚಿವರಾಗಿ, ಪ್ರತಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಯಾವುದೇ ಓರ್ವ ವ್ಯಕ್ತಿ ತಮ್ಮ 50ನೇ, 75ನೇ, 100ನೇ ವರ್ಷದ ಜನ್ಮದಿನ ಆಚರಿಸುವುದು ನಮ್ಮ ಸಂಪ್ರದಾಯ. ಇದು ಜಗತ್ತಿನಲ್ಲಿಯೂ ನಡೆಯುವ ಒಂದು ಕಾರ್ಯಕ್ರಮ. ಜೀವನದಲ್ಲಿ ಮಹತ್ವದ ಘಟ್ಟ ತಲುಪಿದಾಗ ಆಚರಿಸುವ ಮೈಲುಗಲ್ಲು. ಇದು ಅವರ ಆಶಯವಲ್ಲ. ಅವರ ಹಿತೈಷಿಗಳು, ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಎಲ್ಲರೂ ಸೇರಿ ಮಾಡುತ್ತಿರುವ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರಾದ ರಾಹುಲ ಗಾಂಧಿಯವರು ಬರುತ್ತಿದ್ದಾರೆ. ಈ ಆಚರಣೆಯಲ್ಲಿ ಯಾವುದೇ ತಪ್ಪಿಲ್ಲ. ಇದಕ್ಕೆ ಬೇರೆ ಅರ್ಥ ನೀಡುವ ಅರ್ಥವು ಇಲ್ಲ. ಅದರಲ್ಲಿ ಸಿದ್ಧರಾಮಯ್ಯನವರ ಪಾತ್ರವಿಲ್ಲ. ನಾನೂ ಸೇರಿದಂತೆ ನಾವೆಲ್ಲರೂ ಕೂಡಿಕೊಂಡು ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಪಕ್ಷವು ಇದರಲ್ಲಿ ಪಾಲ್ಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.
ಈ ಕಾರ್ಯಕ್ರಮದ ಕುರಿತು ಕಾಂಗ್ರೆಸ್ಸಿನ ಯಾವ ನಾಯಕರು ಅಸಮಾಧಾನಗೊಂಡಿಲ್ಲ. ಈ ಕಾರ್ಯಕ್ರಮಕ್ಕೆ ರಾಹುಲ ಗಾಂಧಿ ಬರುತ್ತಾರೆ ಎಂದು ಡಿ. ಕೆ. ಶಿವಕುಮಾರ ಅವರೇ ಹೇಳಿದ್ದಾರೆ. ಇದು 2023ನೇ ಸಾರ್ವತ್ರಿಕ ಚುನಾವಣೆ ಪ್ರಚಾರಕ್ಕೆ ಚಾಲನೆ ಕಾರ್ಯಕ್ರಮ ಅಲ್ಲ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದರು.

Leave a Reply

ಹೊಸ ಪೋಸ್ಟ್‌