Students Exhibition: ಜು. 16ರ ರಂದು ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಒಪನ್ ಡೆ ಪ್ರಾಜೆಕ್ಟ್ ಎಕ್ಸಿಬಿಷನ್- ಡಾ. ವಿ. ಜಿ. ಸಂಗಮ

ವಿಜಯಪುರ: ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಪ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜು. 16 ರಂದು ಒಪನ್ ಡೆ ಪ್ರಾಜೆಕ್ಟ್ ಎಕ್ಸಿಬಿಷನ್ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಕಾಲೇಜಿನ ನಾನಾ ವಿಷಯಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸೃಜನಶಿಲತೆ ಮತ್ತು ನಾವಿನ್ಯತೆಯ ಅವಿಷ್ಕಾರದೊಂದಿಗೆ ಸಿದ್ಧಪಡಿಸಲಾದ ಪ್ರಾಜೆಕ್ಟ್ ಗಳ ಪ್ರಾತ್ಯಕ್ಷಿಕೆ ನಡೆಯಲಿದ್ದು, ಈ ಕಾರ್ಯಕ್ರಮವನ್ನು ವಿಜಯಪುರ ಎಸ್ಪಿ ಡಾ. ಎಚ್. ಡಿ. ಆನಂದಕುಮಾರ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಅಂತಿಮ ವರ್ಷದ 660 ವಿದ್ಯಾರ್ಥಿಗಳು ತಯಾರಿಸಿರುವ 232 ಪ್ರಾಜೆಕ್ಟ್ ಗಳ ಪ್ರದರ್ಶನ ನಡೆಯಲಿದೆ.  ಮಾಸ್ಟರ್ ಆಫ್ ಕಂಪ್ಯೂಟರ ಆಪ್ಲಿಕೇಷನ್ ವಿಭಾಗದಿಂದ 12 ಪ್ರೊಜೆಕ್ಟಗಳು, 12 ವಿದ್ಯಾರ್ಥಿಗಳಿಂದ ಮೆಡಿಕಲ್ ಇಮೆಜ ಪ್ರೊಸೆಸಿಂಗ್, ಇಂಟರನೆಟ್ ಆಫ್ ಥಿಂಗ್ಸ್, ವಾಣಿಜ್ಯ ಬಳಕೆಗೆ ಉಪಯೋಗವಾಗುವ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಅವರು ತಿಳಿಸಿದರು.

ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಸುದ್ದಿಗೋಷ್ಯಿಯಲ್ಲಿ ಮಾನತಾಡಿದರು

ಇದೇ ರೀತಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೆಷನ್ ವಿಭಾಗದಿಂದ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಂಡು 34 ಪ್ರಾಜೆಕ್ಟ್ ಗಳನ್ನು ಮಾಡಿದ್ದಾರೆ.  ಕೃಷಿಗೆ ಸಹಾಯವಾಗುವ ಯಾಂತ್ರಿಕೃತ ಸಲಕರಣೆಗಳು, ಸಾಮಾನ್ಯ ಜನರ ಜೀವನ ಶೈಲಿಯನ್ನು ಸುದಾರಿಸುವ ಯೋಜನೆಗಳು, ಆರೋಗ್ಯ ರಕ್ಷಣೆಗೆ ಸಂಬಂದಿಸಿದ ಮತ್ತು ರೋಗಗಳ್ನು ಪತ್ತೆ ಹಚ್ಚಲು ಸಹಾಯ ಮಾಡುವ ಹಾಗೂ ಇಂದನ ಸಂಪನ್ಮೂಲಗಳ ಸಮರ್ಪಕ ಬಳಕೆ ಇನ್ನೂ ಮುಂತಾದ ಯೋಜನೆಗಳ ಪ್ರಾತ್ಯಕ್ಷತೆಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದರು.

ಸಿವಿಲ್ ಎಂಜಿನಿಯರಿಂಗ್ ವಿಭಾಗದ 138 ವಿದ್ಯಾರ್ಥಿಗಳು 36 ಪ್ರಾತ್ಯಕ್ಷತೆಗಳನ್ನು ತಯಾರಿಸಿದ್ದಾರೆ.  ಇಂದಿನ ದಿನದ ಸಾಮಾಜಿಕ ಸಮಸ್ಯೆಗಳನ್ನು ಸಮರ್ಥನೀಯ ವಿಧಾನದಿಂದ ಪರಿಹರಿಸುವ ಯೋಜನೆಗಳು, ಗ್ರಾಮೀಣ ರಸ್ತೆಗಳಿಗೆ ಸಬಗ್ರೇಡ್‍ನ್ನು ಸುದಾರಿಸುವುದು, ಮೇಲ್ಚಾವಣಿ ಟೈಲ್ಸಗಳಿಗೆ ಪ್ಲಾಸ್ಟಿಕ್ ತ್ಯಾಜ್ಯದ ಬಳಕೆ, ಸಕ್ಕರೆ ಮತ್ತು ಡೈರಿ ಉದ್ಯಮದಿಂದ ತ್ಯಾಜ್ಯ ನೀರಿನ ಸಂಗ್ರಹಣೆ ಇನ್ನೂ ಉಪಯುಕ್ತ ಪ್ರಾತ್ಯಕ್ಷತೆಗಳು ಇವಾಗಿವೆ ಎಂದು ಪ್ರಾಚಾರ್ಯರು ತಿಳಿಸಿದರು.

ಆರ್ಕಿಟೆಕ್ಚರ್ ವಿಭಾಗದಿಂದ 25 ಪ್ರಾಜೆಕ್ಟ್ ಗಳನ್ನು ತಯಾರಿಸಲಾಗಿದ್ದು,  ಸುಸ್ತಿರ ಪರಿಸರ ಸ್ನೇಹಿ ಕಟ್ಟಡದ ವಿನ್ಯಾಸ, ಗುಣಾತ್ಮಕ ಮತ್ತು ನಕಾರತ್ಮಕ ಪ್ರಭಾವದ ಕುರಿತು ಯೋಜನೆಗಳ ಪ್ರಾತ್ಯಕ್ಷತೆಗಳು ಇರಲಿವೆ.  ಅಟೋಮೊಬೈಲ್ ವಿಭಾಗದಿಂದ ಪ್ರಾತ್ಯಕ್ಷತೆಯು ವಿದ್ಯುತ್ ಚಾಲಿತ ಯಂತ್ರವು ಹಸಿರು ಶಕ್ತಿ ಮತ್ತು ಪರ್ಯಾಯ ಶಕ್ತಿ ಮತ್ತು ಲೆಡ್‍ಆಸಿಡ್ ಬಳಸಿ ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುತ್ತದೆ, ವಾಹನವು ಅತ್ಯಂತ ಕಡಿಮೆ ವೆಚ್ಚದ ಮತ್ತು ಕಡಿಮೆ ನಿರ್ವಹಣೆ ಜೊತೆಗೆ ಪ್ರಕೃತಿ ಸ್ನೇಹಿಯಾಗಿದೆ.  ಇನಫಾರ್ಮೆಷನ್ ಸೈನ್ಸ್ ವಿಭಾಗದಿಂದ 48 ವಿದ್ಯಾರ್ಥಿಗಳು 12 ಪ್ರಾಜೆಕ್ಟ್ ತಯಾರಿಸಿದ್ದಾರೆ.  ಈ ಯೋಜನೆಗಳು ಹೃದಯ ಕಾಯಿಲೆ ಮೂನ್ಸುಚನೆ, ಕ್ಯಾನ್ಸರ್ ರೋಗ ಪತ್ತೆ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಬೆಳೆಗಳ ರೋಗಕ್ಕೆ ಕೃಷಿ ಮೂನ್ಸುಚನೆಗಳು, ಹಸಿರು ಮನೆ ಇನ್ನೂ ಮುಂತಾದವುಗಳ ಕುರಿತಾಗಿದ್ದು, ಇವುಗಳ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಅವರು ಹೇಳಿದರು.

ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಸುಮಾರು 38, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಿಂದ  30, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಿಂದ  43 ಪ್ರಾಜೆಕ್ಟ್ ಗಳನ್ನು ಈ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುತ್ತದೆ ಎಂದು ಡಾ. ವಿ. ಜಿ. ಸಂಗಮ ತಿಳಿಸಿದರು.

ಪ್ಲೆಸಮೆಂಟ್ ವಿವರ

ಈ ಕಾಲೇಜಿನಲ್ಲಿ ಪದವಿ ಪಡೆದ ನೂರಾರು ಜನರು ಈಗಾಗಲೇ ನಾನಾ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿದ್ದಾರೆ.  ಇವರಿಗೆ ಉದ್ಯೋಗ ಒದಗಿಸುವಲ್ಲಿ ಕಾಲೇಜಿನಲ್ಲಿರುವ ನಿಯೋಜನೆ(ಪ್ಲೇಸಮೆಂಟ್) ವಿಭಾಗ ನಾನಾ ಕಂಪನಿಗಳೊಂದಿಗೆ ಸತತ ನಡೆಸಿ ಯಶಸ್ವಿಯಾಗಿದೆ.  ಈ ಮೂಲಕ ಎಂಜಿನಿಯರಿಂಗ್ ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಒದಗಿಸಲು ಸದಾ ಶ್ರಮಿಸುತ್ತಿದೆ.  ಅಲ್ಲದೇ, ವಿದ್ಯಾರ್ಥಿಗಳನ್ನು ಮೊದಲ ತಲಮಾರಿನ ಉದ್ಯಮಿಗಳಾಗಲು ಪ್ರೆರಿಪಿಸುತ್ತಿದೆ.  ವಿದ್ಯಾರ್ಥಿಗಳಿಗೆ ಅಪ್ಟಿಟ್ಯುಡ್ ಟೆಸ್ಟ್ ತಯಾರಿ, ವ್ಯಕ್ತಿತ್ವ ಅಭಿವೃದ್ಧಿ ಮತ್ತು ಉದ್ಯಮ-ಸಂಸ್ಥೆಯ ಸಂವಹನಗಳ ಮೇಲೆ ಕಾರ್ಯನಿರ್ವಹಿಸುತ್ತವೆ.  ಬಿ ಎಲ್ ಡಿ ಇ ಸಂಸ್ಥೆಯ ವಿದ್ಯಾರ್ಥಿಗಳು ತಾಂತ್ರಿಕ ಅವಿಷ್ಕಾರದ ಮೂಲಕ ಮೌಲ್ಯವನ್ನು ಸೇರಿಸುವ ದ್ಯೇಯವನ್ನು  ಹೊಂದಿದ್ದಾರೆ.  ಹೀಗಾಗಿ ಉದ್ಯೋಗದಾತರು ವಿದ್ಯಾರ್ಥಿಗಳಲ್ಲಿನ ಮೌಲ್ಯವನ್ನು ಕಂಡುಕೊಂಡಿದ್ದಾರೆ ಎಂದು ಪ್ರಿನ್ಸಿಪಾಲರು ತಿಳಿಸಿದರು.

ಮಹಾವಿದ್ಯಾಲಯದಲ್ಲಿ ಉದ್ಯೋಗಾವಕಾಶಗಳನ್ನು ಕೊಡಿಸುವದರ ಜೊತೆಗೆ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅವಶ್ಯವಿರುವ ಕೌಶಲ್ಯವನ್ನು ನುರಿತ ತರಬೇತುದಾರರಿಂದ ಉದ್ಯಮಕ್ಕೆ ಪೂರಕವಾಗುವ ಶೈಕ್ಷಣಿಕ ತರಬೇತಿ ನೀಡಲಾಗುತ್ತದೆ. ಇದರಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಹೆರಳವಾಗಿ ಉದ್ಯೋಗವಾಕಾಶಗಳು  ಸಿಗುತ್ತಿವೆ.  2021-22 ರಲ್ಲಿ ಈವರೆಗೆ ಸುಮಾರು 530 ವಿದ್ಯಾರ್ಥಿಗಳಿಗೆ ಪ್ಲೆಸಮೆಂಟ್ ವಿಭಾಗದಿಂದ ಉದ್ಯೋಗ ಒದಗಿಸಲಾಗಿದೆ.  ವಾರ್ಷಿಕವಾಗಿ ರೂ. 12 ಲಕ್ಷಕ್ಕೂ ಹೆಚ್ಚು ವೇತನ ದೊರೆಯುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮತ್ತು ಸರಾಸರಿ ಸುಮಾರು ವಾರ್ಷಿಕ ರೂ. 4.50  ಲಕ್ಷ ವೇತನ ಸಿಗುವ ಕಂಪನಿಗಳಲ್ಲಿ ಪದವೀಧರರಿಗೆ ಉದ್ಯೋಗ ತೊರೆತಿದೆ.  ಬಹುರಾಷ್ಟ್ರೀಯ ಕಂಪನಿಗಳಾದ ಇನ್ಪೊಸಿಸ್, ವಿಪ್ರೋ, ಟಿ.ಸಿ.ಎಸ್. ಕಾಗ್ನಿಜಂಟ್, ಅಸೆಸ್‍ಂಚ್ಯುರ, ಫೇಲಾಬೆಲ್, ಮೈಂಡ ಟ್ರಿ, ಟೆಕಮಹಿಂದ್ರ, ಕ್ಯಾಪಜಮಿನಿ, ಐ.ಬಿ.ಎಂ. ಕಿರ್ಲೊಸ್ಕರ್, ಮೊನೊಸೆಪ್ಟ್ ಇನ್ನೂ ಮುಂತಾದ ಕಂಪನಿಗಳಿಂದ ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ ಎಂದು ಅವರು ಹೇಳಿದರು.

ಮೂರು ಹಂತದ ತರಬೇತಿ

ಪ್ಲೇಸಮೆಂಟ್ ವಿಭಾಗ ಮೂರು ಹಂತಗಳಲ್ಲಿ ತರಬೇತಿ ನೀಡುತ್ತಿದೆ.  ಮೊದಲ ಹಂತದಲ್ಲಿ ದ್ವಿತಿಯ ವರ್ಷದ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳು ಮತ್ತು ಸಂವಹನ ಕೌಶಲ್ಯ, ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಯೋಗ್ಯತಾ ಪರೀಕ್ಷೆ ಹಾಗೂ ಓದುವ  ಕೌಶಲ್ಯತೆ ಮತ್ತು ತೃತೀಯ ಹಂತದಲ್ಲಿ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ  ತಾಂತ್ರಿಕತೆ ಪ್ರಾವಿಣ್ಯತೆ, ಗುಂಪುಚರ್ಚೆ ಹಾಗೂ ವ್ಯಯಕ್ತಿಕ ಸಂದರ್ಶನದ ಕೌಶಲ್ಯದ ತರಭೇತಿಯನ್ನು  ಕೊಡಲಾಗುತ್ತದೆ.  ಇದರ ಜೊತೆಗೆ ಕೈಗಾರಿಕೆಯಲ್ಲಿ ನುರಿತ ತಜ್ಞರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸೂಕ್ತ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಡಾ. ವಿ. ಜಿ. ಸಂಗಮ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯರಾದ ಡಾ. ಜಿ. ವಿ. ಪಾಟೀಲ, ಡಾ. ಪಿ. ವಿ. ಮಾಳಜಿ, ಡಾ. ಮಹಾಂತೇಶ ಬಿರಾದಾರ, ಡಾ. ಶಶಿಕಾಂತ ಚೋಳಕೆ, ಡಾ. ಆಸೀಫ್ ಮೋಮಿನ್ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌