Football Appu: ಫುಟಬಾಲ್ ಕ್ರೀಡಾಪಟುಗಳಿಗೆ ನೆರವಿಗೆ ಸದಾ ಸಿದ್ಧ- ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಫುಟಬಾಲ್ ಕ್ರೀಡಾಪಟುಗಳಿಗೆ ಅಗತ್ಯವಾಗಿರುವ ನೆರವಿಗೆ ಸದಾ ಸಿದ್ಧರಿರುವುದಾಗಿ ಮಾಜಿ ಸಚಿವ ಮತ್ತ ವಿಜಯಪುರ ಪುಟಬಾಲ್ ಸಂಸ್ಥೆಯ ಜಿಲ್ಲಾಧ್ಯಕ್ಷ ಅಪ್ಪು ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಜಿಲ್ಲಾ ಪುಟಬಾಲ್ ಸಂಸ್ಥೆಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ಫುಟಬಾಲ್ ಸಂಸ್ಥೆಯಿಂದ ಫುಟಬಾಲ್ ಆಟಗಾರರಿಗೆ ಬೇಕಾಗುವ ಯಾವುದೇ ಸಹಾಯ ಸಹಕಾರಕ್ಕೆ ಸಿದ್ಧನಿದ್ದೇನೆ. ಯಾವುದೇ ಸಂದರ್ಭದಲ್ಲಿ ಸಮಸ್ಯೆಗಕನ್ನು ನನ್ನ ಗಮನಕ್ಕೆ ತಂದರೆ ಶೀಘ್ರದಲ್ಲಿ ಅವುಗಳನ್ನು ಬಗೆಹರಿಸಿ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.

ವಿಜಯಪುರ ಜಿಲ್ಲಾ ಫುಟಬಾಲ್ ಸಂಸ್ಥೆಯ ಸಭೆಯಲ್ಲಿ ಪಾಲ್ಗೊಂಡ ಪದಾಧಿಕಾರಿಗಳು, ಸದಸ್ಯರು

 

ಫುಟಬಾಲ್ ಕ್ರೀಡಾಪಟುಗಳು ಮುಂಬರುವ ದಿನಗಳಲ್ಲಿ ಸೂಕ್ ತರಬೇತಿಯನ್ನು ಪಡೆಯವೇಕು. ಈ ಮೂಲಕ ಜಿಲ್ಲಾ ಮಟ್ಟಕ್ಕೆ ಮಾತ್ರವಲ್ಲ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಎಂಬ ಸದಾಶಯ ತಮ್ಮದಾಗಿದೆ. ಇದನ್ನು ಫುಟವಾಲ್ ಆಟಗಾರರು ಈಡೇರಿಸಬೇಕೆಂದು ಹೇಳಿದರು.

 

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾ ವ್ಗಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಬಿ. ಎಂ. ಕೋಕರೆ ಮಾತನಾಡಿ, ಮಾಜಿ ಸಚಿವ ಮತ್ತು ಪುಟಬಾಲ್ ಸಂಸ್ಥೆ ಅಧ್ಯಕ್ಷ ಅಪ್ಪು ಪಟ್ಟಣಶೆಟ್ಟಿ
ಅವರು ಈ ಹಿಂದೆ ಜವಳಿ ಖಾತೆ ಸಚಿವರಾಗಿದ್ದಾಗ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಆಗ ನಾನು ನಾನು ಆವಾಗ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷನಾಗಿದ್ದೆ. ಇಂಥ ರಾಷ್ಟ್ರಮಟ್ಟದ ಪಂದ್ಯಾವಳಿವನ್ನು ಏರ್ಪಡಿಸಿ ದೇಶಾದ್ಯಂತ ವಿಜಯಪುರ ಜಿಲ್ಲೆಯ ಹೆಸರು ಪಸರಿಸುವಂತೆ ಮಾಡಿದ್ದರು. ಕ್ರೀಡಾಸಕ್ತರಾಗಿರುವ ಅಪ್ಪು ಪಟ್ಟಣಶೆಟ್ಟಿ ಕ್ರೀಡಾಕೂಟಗಳಿಗೆ ತನು, ಮನ, ಧನದಿಂದ ಸಗಾಯ ಮಾಡುವ ಹೃದಯ ವೈಶಾಲ್ಯತೆ ಹೊಂದಿದ್ದಾರೆ. ಈಗ ಪುಟಬಾಲ್ ಸಂಸ್ಥೆಯ ಜಿಲ್ಕಾಧ್ಯಕ್ಷರಾಗಿರುವುದು ಕ್ರೀಡೆಯ ಅಭಿವೃದ್ಧಿಗೆ ಪೂರರಕವಾಗಿದೆ.‌ ಮುಂಬರುವ ದಿನಗಳಲ್ಲಿ ಅಪ್ಪು ಪಟ್ಟಣಶೆಟ್ಟಿ ಅವರು ಕರ್ನಾಟಕ ಪುಟಬಾಲ್ ಸಂಸ್ಥೆಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೇಂದ್ರ ರಾಷ್ಟ್ರೀಯ ತೋಟಗಾರಿಗೆ ಮಂಡಳಿಗೆ ನಿರ್ದೇಶಕರಾಗಿ ನೇಮಕರಾದ ಬಿ. ಎಂ. ಕೊಕರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಭೆಯಲ್ಲಿ ವಿಜಯಪುರ ಜಿಲ್ಲಾ ಫುಟಬಾಲ್ ಸಂಸ್ಥೆಯ ಉಪಾಧ್ಯಕ್ಷ ಮಿಲಿಂದ ಚಂಚಲಕರ, ಪ್ರಧಾನ ಕಾರ್ಯದರ್ಶಿ ಕೃಷ್ಣಾ ಗಾಡಿವಡ್ಡರ, ಕೋಶಾಧ್ಯಕ್ಷ ಡುಮ್ಮಾ ದರ್ಗಾ, ಸತೀಶ ಪಾಟೀಲ, ಸುಂದರ ಹಲವಾಯಿ, ರಫೀಕ ನದಾಫ್, ವಿಠ್ಠಲ ಸೂರ್ಯವಂಶಿ, ಸುಧೀರ ಚವ್ಹಾಣ, ರವಿ ಮಾನೆ, ಜಗದೀಶ ಮುಚ್ಚಂಡಿ, ಸಂಸ್ಥೆಯ ಪದಾಧಿಕಾರಿಗಳು, ಕ್ರೀಡಾಪಟುಗಳು ಸೇರಿದಂತೆ ಪುಟಬಾಲ್ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌