KSAWU Music Programme: ಮಹಿಳಾ ವಿವಿಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಂಗೀತ ವಿಭಾಗ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ನಗರದ ದೃಷ್ಟಿ ಫೌಂಡೇಶನ್ ಮತ್ತು ಭಾರತ ಸಂಸ್ಕೃತಿ ಸಚಿವಾಲಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಧಾರವಾಡದ ಪ್ರಖ್ಯಾತ ಗಾಯಕಿ ವಿದುಷಿ ಸುಜಾತಾ ಗುರವ ಅವರು ವಿವಿಯ ಜ್ಞಾನವಾಹಿನಿ ಸ್ಟುಡಿಯೋದಲ್ಲಿ ಹಿಂದುಸ್ಥಾನಿ ಗಾಯನವನ್ನು ನಡೆಸಿಕೊಟ್ಟರು.

ಮಹಿಳಾ ವಿವಿಯಲ್ಲಿ ಶಾಸ್ತ್ರೀಯ ಗಾಯನವನ್ನು ನಡೆಸಿಕೊಟ್ಟ ವಿದುಷಿ ಸುಜಾತಾ ಗುರವ ಅವರನ್ನು ಸನ್ಮಾನಿಸಲಾಯಿತು

 

ಈ ಕಾರ್ಯಕ್ರಮದಲ್ಲಿ ದೃಷ್ಟಿ ಫೌಂಡೇಶನ್‌ನ ಸಂಯೋಜಕರಾದ ಡಾ.ಪಿ.ಬಿ.ಕುಲಕರ್ಣಿ ಹಾಗೂ ಮೀನಾ ಅಥಣಿ, ಧಾರವಾಡದ ಸಮಾಜ ಸೇವಕ ಗೋಪಾಲ ಜೋಷಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರಗೌಡ ಕಾಕಡೆ, ಸಂಗೀತ ವಿಭಾಗದ ಸಂಯೋಜಕ ಡಾ.ಜಿ.ಬಿ.ಸೋನಾರ್, ಡಾ.ಹರೀಶ್ ಹೆಗಡೆ ಹಾಗೂ ನಗರದ ಸಂಗೀತಾಸಕ್ತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಾಸ್ತ್ರೀಯ ಗಾಯನವನ್ನು ನಡೆಸಿಕೊಟ್ಟ ವಿದುಷಿ ಸುಜಾತಾ ಗುರವ ಹಾಗೂ ಗೋಪಾಲ ಜೋಷಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಯ ಸಂಗೀತ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾಥಿನಿಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌