ವಿಜಯಪುರ: ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಸಂಯೋಜಿತ ವಿಜಯಪುರ ಜಿಲ್ಲಾ ಸಮಿತಿಯ 4ನೇ ಸಮ್ಮೇಳನವು ವಿಜಯಪುರದಲ್ಲಿ ಯಶಸ್ವಿಯಾಗಿ ನಡೆಯಿತು.
ಜಲನಗರದಲ್ಲಿರು ಶಿವಶರಣೆ ನಿಂಬೆಕ್ಕಾ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಂಗನವಾಡಿ ನೌಕರರ ಸೇವೆಯನ್ನು ಖಾಯಂ ಮಾಡಬೇಕು. ಅಲ್ಲಿಯವರೆಗೆ ಕನಿಷ್ಠ ವೇತನ ಜಾರಿಗೆ ಮಾಡಬೇಕು. ಅಂಗನವಾಡಿ ನೌಕರರಿಗೆ ಗ್ರಾಚ್ಯೂಟಿ ನೀಡಬೇಕು. ಆದರೆ, ಎರಡೂ ಸತಕಾರಗಳು ಅಂಗನವಾಡಿ ನೌಕರರಿಗೆ ತಾರತಮ್ಯ ಮಾಡುತ್ತಿವೆ. ಆದ್ದರಿಂದ ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ತರಲು ಆಗ್ರಹಿಸಿ ಇದೆ ಜು. 26, 27 ಮತ್ತು 28ರಂದು ದೆಹಲಿ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಘಟನೆಯ ಪ್ರತಿ ವಲಯದಿಂದ ಐದು ಜನರು ಕಡ್ಡಾಯವಾಗಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಶಾಂತಾ ಘಂಟೆ, ಮುಖಂಡರಾದ ಭೀಮಶಿ ಕಲಾದಗಿ, ಅಣ್ಣಾರಾಯ ಈಳಗೇರ ಕೂಡ ಮಾತನಾಡಿದರು.
ಈ ಸಮ್ಮೇಳನದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಹೊಸ ವಿಜಯಪುರ ಜಿಲ್ಲಾ ಸಮಿತಿ ರಚನೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಸುನಂದಾ ನಾಯಕ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ತಳವಾರ, ಖಜಾಂಚಿಯಾಗಿ ಪ್ರತಿಭಾ ಕುರಡೆ, ಗೌರವಾಧ್ಯಕ್ಷರಾಗಿ ಭಾರತಿ ವಾಲಿ ಅವರನ್ನು ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ ಸುವರ್ಣಾ ಹಲಗಣಿ, ಗೀತಾ ನಾಯಕ, ಶೋಭಾ ಕಬಾಡೆ, ದಾನಮ್ಮಾ ಗುಗ್ಗರಿ, ಸರಸ್ವತಿ ಮಠ, ವಲಯವಾರು ಎಲ್ಲ ಅಂಗನವಾಡಿ ನೌಕರರು ಈ ಉಪಸ್ಥಿತರಿದ್ದರು.