CPI Transfer: ರಾಜ್ಯದಲ್ಲಿ 92 ಸಿಪಿಐ ಗಳ ವರ್ಗಾವಣೆ- ವಿಜಯಪುರಕ್ಕೆ ಯಾರು ಬಂದ್ರು? ಯಾರು ವರ್ಗಾವಣೆಯಾದ್ರು? ಇಲ್ಲಿದೆ ಮಾಹಿತಿ
ಬೆಂಗಳೂರು: ರಾಜ್ಯ ಸರಕಾರ ವಿಧಾನ ಸಭೆ ಚುನಾವಣೆಗೆ ಇನ್ನೂ ಒಂದು ವರ್ಷಕ್ಕೂ ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ 92 ಸಿಪಿಐಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯ ಹಲವಾರು ಸಿಪಿಐಗಳನ್ನು ವರ್ಗಾವಣೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯಿಂದ ವರ್ಗಾವಣೆಯಾದ ಮತ್ತು ಬೇರೆ ಜಿಲ್ಲೆಯಿಂದ ವಿಜಯಪುರಕ್ಕೆ ಬಂದವರ ಪಟ್ಟಿ ಇಲ್ಲಿದೆ. ಸುರೇಶ ಬೆಂಡೆಗುಂಬಳ- ವಿಜಯಪುರ ಸಿಇಎನ್ ನಿಂದ- ಹುನಗುಂದ ಸರ್ಕಲ್ ಧೃವರಾಜ ಪಾಟೀಲ- ವಿಜಯಪುರ ರೇಲ್ವೆಯಿಂದ- ನವಲಗುಂದ ಸರ್ಕಲ್ ಶರಣಗೌಡ ಎಂ. ನ್ಯಾಮಣ್ಣವರ- ರಾಜ್ಯ […]
BJP Kuchabal: ಪ್ರತಿಪಕ್ಷಗಳು ಉಚಿತ ಯೋಜನೆ ಘೋಷಣೆ ಮಾಡಿ ಜನರ ಬಲ ಕುಂದಿಸುತ್ತವೆ- ಆರ್. ಎಸ್. ಪಾಟೀಲ ಕೂಚಬಾಳ
ವಿಜಯಪುರ: ಪ್ರತಿಪಕ್ಷಗಳು ಉಚಿತ ಯೋಜನೆಗಳನ್ನು ಘೋಷಣೆ ಮಾಡಿ ಜನರ ಬಲವನ್ನು ಕುಂದಿಸುವ ಕೆಲಸ ಮಾಡುತ್ತಿವೆ. ಆದರೆ, ಬಿಜೆಪಿ ಮಾತ್ರ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಹೇಳಿದ್ದಾರೆ. ವಿಜಯಪುರದಲ್ಲಿ ನಡೆದ ಬಿಜೆಪಿ ಜಿಲ್ಲಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತವಾಡಿದರು. ಬಿಜೆಪಿ ಹೊರತಾದ ರಾಜಕೀಯ ಪಕ್ಷಗಳು ಆಳ್ವಿಕೆ ನಡೆಸಿದ ರಾಜ್ಯಗಳಲ್ಲಿ ಕೇವಲ ಚುನಾವಣೆ ದೃಷ್ಠಿಕೋನದಿಂದ ಉಚಿತ ಯೋಜನೆಗಳ ದುಂಬಾಲು ಬಿದ್ದು ಆ ರಾಜ್ಯಗಳನ್ನು […]
Swamiji Injured: ಇಳಕಲ್ ಬಳಿ ಬಸ್ ಅಪಘಾತ- ವನಶ್ರೀ ಸಂಸ್ಥಾನ ಮಠದ ಶ್ರೀಗಳಿಗೆ ಗಾಯ- ಆತಂಕ ಬೇಡ ಎಂದು ಸ್ವಾಮೀಜಿ ವಿಡಿಯೋ ಸಂದೇಶ
ವಿಜಯಪುರ: ಬಾಗಲಕೋಟೆ ಜಿಲ್ಲೆಯ ಇಳಕಲ್ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ ವಿಜಯಪುರದ ವನಶ್ರೀ ಸಂಸ್ಥಾನ ಮಠದ ಶ್ರೀಗಳಿಗೆ ಪೆಟ್ಟಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಬಳಿ ಇರುವ ವನಶ್ರೀ ಸಂಸ್ಥಾನ ಮಠದ ಗಾಣಿಗ ಗುರುಪೀಠದ ಡಾ. ಜಯಬಸವ ಕುಮಾರ ಜಗದ್ಗುರುಗಳು ವಿಜಯಪುರದಿಂದ ಹರಿಹರ ಪೀಠಕ್ಕೆ ತೆರಳುತ್ತಿದ್ದರು. ಸೋಮವಾರ ರಾತ್ರಿ ಖಾಸಗಿ ಸಾರಿಗೆ ಸಂಸ್ಥೆಗೆ ಸೇರಿದ ವಿ ಆರ್ ಎಲ್ ಬಸ್ ಇಳಕಲ್ ಸಮೀಪ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಡಾ. ಜಯಬಸವ […]
Monsoon Festivals: ವಿಜಯಪುರ ಜಿಲ್ಲೆಯಲ್ಲಿ ಸಾಲು ಸಾಲು ಹಬ್ಬಗಳ ಸಂಭ್ರಮ ಗೋಂಧಳಿ ಸಮಾಜದ ದುರ್ಗಾದೇವಿ ಜಾತ್ರೆ ಬಲು ಅಂದ
ವಿಜಯಪುರ: ಮುಂಗಾರು ಆರಂಭವಾದರೆ ಸಾಕು ಬಸವ ನಾಡು ವಿಜಯಪುರದಲ್ಲಿ ಸಾಲು ಸಾಲು ಹಬ್ಬಗಳು ಒಂದೊಂದಾಗಿಯೇ ಬರುತ್ತವೆ. ಇಲ್ಲಿನ ಜನರೂ ಅಷ್ಟೇ, ಈ ಹಬ್ಬಗಳನ್ನು ಸಂಭ್ರಮ ಮತ್ತು ಸಡಗರಗಳಿಂದ ಆಚರಿಸುತ್ತಾರೆ. ಬಹುಷಃ ಇಡೀ ಕರ್ನಾಟಕದಲ್ಲಿ ವರ್ಷವಿಡೀ ಪ್ರತಿದಿನ ಒಂದಿಲ್ಲೋಂದು ಊರಲ್ಲಿ ಆಚರಣೆ, ಉತ್ಸವ, ಜಾತ್ರೆ ನಡೆಯುವ ಜಿಲ್ಲೆ ಎಂದರೆ ಅದು ವಿಜಯಪುರ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಇಲ್ಲಿ ಆಚರಣೆಗಳೂ ನಡೆಯುವೆ. ಆಷಾಢ ಮಾಸ ಆರಂಭವಾಗುತ್ತಿದ್ದಂತೆ ದೇವತೆಗಳ ಜಾತ್ರೆಗಳು ಸಾಲು ಸಾಲಾಗಿ ಬರುತ್ತವೆ. ದುರ್ಗಾದೇವಿ, ಮರಗಮ್ಮ, ಹುಲಿಗೆಮ್ಮ, ಕೊಂತೆಮ್ಮ […]
DC Babaleshwar: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ- ಬಬಲೇಶ್ವಕ್ಕೆ ಭೇಟಿ ನೀಡಿದ ಡಿಸಿ
ವಿಜಯಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ.ದಾನಮ್ಮನವರ ಪ್ರತಿ ಮಂಗಳವಾರ ತಾಲೂಕು ಕಚೇರಿ ಭೇಟಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈಗ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಬಬಲೇಶ್ವರ ತಾಲೂಕು ಕಚೇರಿಗೆ ಭೇಟಿ ನೀಡಿದರು. ಅಲ್ಲಿ, ಕಚೇರಿ ಇಲಾಖೆಯ ಕಡತಗಳನ್ನು ಪರಿಶೀಲನೆ ನಡೆಸಿದ ಡಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅಷ್ಟೇ ಅಲ್ಲ, ಕಡತಗಳ ತ್ವರಿತ ವಿಲೇವಾರಿ ಮಾಡುವಂತೆ ತಹಸೀಲ್ದಾರ ಮತ್ತೀತರ ಅಧಿಕಾರಿಗಳಿಗೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ […]
Ukraine Students: ಪೋಷಕರಿಂದ ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಆಕ್ರೋ಼ಶ- ಯಾಕೆ ಗೊತ್ತಾ?
ವಿಜಯಪುರ: ರಷ್ಯಾ ಸಮರ ಸಾರಿದ ಹಿನ್ನೆಲೆಯಲ್ಲಿ ಉಕ್ರೇನಿನಲ್ಲಿ ಅಧ್ಯಯನ ಮಾಡುತ್ತಿದ್ದ ಭಾರತೀಯ ವೈದ್ಯ ವಿದ್ಯಾರ್ಥಿಗಳು ಈಗಾಗಾಲೇ ತಾಯ್ನಾಡಿಗೆ ಮರಳಿದ್ದಾರೆ. ಇವದನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರಕಾರ ನಡೆಸಿದ ಪ್ರಯತ್ನ ತಮಗೆಲ್ಲ ಗೊತ್ತೆ ಇದೆ. ಅಂದು ಅತಂತ್ರರಾಗಿ ಭಾರತಕ್ಕೆ ಬಂದ ಮೆಡಿಕಲ್ ವಿದ್ಯಾರ್ಥಿಗಳಿಗೆ ಬಸವ ನಾಡು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಕೇಂದ್ರ ಅಧ್ಯಯನ ಮಾಡಿಕೊಡುವ ಮೂಲಕ ಈ ರೀತಿ ಸ್ಪಂದಿಸಿದ […]