Millets Awareness: ಹಲಗಣಿಯಲ್ಲಿ ಸಿರಿ ಧಾನ್ಯಗಳ ಮಾಹಿತಿ, ಜ್ಞಾನ ವಿಜಾಸ ಕೇಂದ್ರ ಉದ್ಘಾಟನೆ ಕಾರ್ಯಕ್ರಮ

ವಿಜಯಪುರ: ಸಿರಿ ದಾನ್ಯಗಳ ಬಳಕೆ ಮಾಹಿತಿ ಮತ್ತು ಹಲಗಣೇಶ್ವರ ಹೊಸ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ‌ ಹಲಗಣಿಯಲ್ಲಿ ನಡೆಯಿತು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿ ರಿಯಾಜ್ ಅತ್ತಾರ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾ. ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಹೊಳೆವ್ಗೋಳ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲೆ ಮುಖ್ಯೋಪಾಧ್ಯಾಯ ರಮೇಶ ಊಟಗಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತರು ತಂತಮ್ಮ ಹೊಲಗದ್ದೆಗಳಲ್ಲಿ ಸಿರಿಧಾನ್ಯಗಳ ಕೃಷಿಯನ್ನು ಮಾಡಿದರೆ […]

CM Bagina: ಕೆ ಅರ್ ಎಸ್ ಬಾಗೀನ ಅರ್ಪಿಸಿದ ಸಿಎಂ- ಬಸವ ನಾಡಿನ ಆಲಮಟ್ಟಿ ಯಾವಾಗ ಬರ್ತೀರಾ?

ಬೆಂಗಳೂರು: ಕಾವೇರಿ‌ ಜಲಾನಯನ ಪ್ರದೇಶದಲ್ಲಿ ಸುರಿದ ಉತ್ತಮ ಮಳೆ ಆ ಭಾಗದಲ್ಲಿ‌ ಬರುವ ಜಲಾಷಯಗಳು ಭರ್ತಿಯಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಸೇರಿದಂತೆ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಈಗ ಮಹಾರಾಷ್ಟ್ರದಲ್ಲಿಯೂ ಉತ್ತಮ ಮಳೆಯಾಗಿದ್ದು ಆಲಮಟ್ಟಿ‌ ಜಲಾಷಯಕ್ಕೂ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಒಂದು ವೇಳೆ ಕೆ ಬಿ ಜೆ […]

CA Pass: ಕೃಷ್ಣಾ ತೀರದ ರೈತ ಕುಟುಂಬದ ಯುವತಿ ಸಿಎ ಪರೀಕ್ಷೆ ಪಾಸ್

ವಿಜಯಪುರ: ಬಸವ ನಾಡಿನ ಯುವತಿ ಸಿಎ ಪರೀಕ್ಷೆ ಪಾಸು ಮಾಡುವ ಮುಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಹೊಸದಿಲ್ಲಿಯ ಭಾರತೀಯ ಲೆಕ್ಕಪರಿಶೋಧನಾ ಸಂಸ್ಥೆ ನಡೆಸಿದ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಅಂತಿಮ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ‌ ಹಣಮಾಪುರದ ಯುವತಿ ಸೌಮ್ಯಾ ಪಾಟೀಲ ಉತ್ತೀರ್ಣರಾಗಿದ್ದಾಳೆ. ವಿಜಯಪುರ ನಗರದ ವಜ್ರಹನುಮಾನ‌ ನಗರದಲ್ಲಿ ವಾಸಿಸುವ ಯುವತಿಯದಯ ರೈತರ ಕುಟುಂಬ. ‌ತಂದೆ ಬೇಸಾಯ ಮಾಡುತ್ತಿದ್ದರೆ ತಾಯಿ ಗೃಹಿಣಿಯಾಗಿದ್ದಾರೆ. ವಿಜಯಪುರ ನಗರದ ಸುಭಾಸ ಪಾಟೀಲ ಆ್ಯಂಡ್ ಕಂಪನಿಯಲ್ಲಿ ಸಿಎ ಆಗಿರುವ ಶರಣಗೌಡ .ಬಿ. […]

ADGP Alokkunar: ಬಸವ ನಾಡಿನಲ್ಲಿ ಪೊಲೀಸ್ ಕವಾಯತು ವೀಕ್ಷಿಸಿದ ಅಲೋಕ ಕುಮಾರ

ವಿಜಯಪುರ: ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ ಕುಮಾರ ಅವರು ವಿಜಯಪುರದಲ್ಲಿ ಪೊಲೀಸ್ ಕವಾಯತು ಪರಿವೀಕ್ಷಣೆ ನಡೆಸಿದರು. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ನಾನಾ ಪೊಲೀಸ್ ಪದಾತಿ ದಳಗಳಿಂದ ಗೌರವ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ವಲಯ ಐಜಿಪಿ ಸತೀಶಕುಮಾರ,  ಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ, ಎಎಸ್ಪಿ ಡಾ. ರಾಮ‌ ಲಕ್ಷ್ಮಣ ಅರಸಿದ್ಧಿ, ಲೋಕಾಯುಕ್ತ ಎಸ್ಪಿ ಅನಿತಾ ಸೇರಿದಂತೆ ವಿಜಯಪುರ ಜಿಲ್ಲೆಯ ನಾನಾ ಹಿರಿಯ […]