CM Bagina: ಕೆ ಅರ್ ಎಸ್ ಬಾಗೀನ ಅರ್ಪಿಸಿದ ಸಿಎಂ- ಬಸವ ನಾಡಿನ ಆಲಮಟ್ಟಿ ಯಾವಾಗ ಬರ್ತೀರಾ?

ಬೆಂಗಳೂರು: ಕಾವೇರಿ‌ ಜಲಾನಯನ ಪ್ರದೇಶದಲ್ಲಿ ಸುರಿದ ಉತ್ತಮ ಮಳೆ ಆ ಭಾಗದಲ್ಲಿ‌ ಬರುವ ಜಲಾಷಯಗಳು ಭರ್ತಿಯಾಗುವಂತೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ.

ಕೆ ಆರ್ ಎಸ್‌ ಜಲಾಷಯಕ್ಕೆ ಪತ್ನಿ ಜೊತೆ ಬಂದು ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಸೇರಿದಂತೆ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಈಗ ಮಹಾರಾಷ್ಟ್ರದಲ್ಲಿಯೂ ಉತ್ತಮ ಮಳೆಯಾಗಿದ್ದು ಆಲಮಟ್ಟಿ‌ ಜಲಾಷಯಕ್ಕೂ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಒಂದು ವೇಳೆ ಕೆ ಬಿ ಜೆ ಎನ್ ಎಲ್ ಅಧಿಕಾರಿಗಳು ಮನಸ್ಸು ಮಾಡಿದ್ದರೆ‌ ಆಲಮಟ್ಟಿ‌ ಜಲಾಷಯ ಇಷ್ಟೊತ್ತಿಗೆ ಭರ್ತಿಯಾಗಿರುತ್ತಿತ್ತು. ಆದರೆ, ಒಳಹರಿವಿಗಿಂತ ಹೊರಹರಿವು ಹೆಚ್ಚಾದ ಕಾರಣ ಆಲಮಟ್ಟಿ ಜಲಾಷಯ ಸಂಪೂರ್ಣ ಭರ್ತಿಯಾಗಲು ಇನ್ನೂ ಸುಮಾರು 50 ಟಿಎಂಸಿ ನೀರು ಹರಿದು ಬರಬೇಕಿದೆ.

ಆಲಮಟ್ಟಿ ಜಲಾಷಯದ ಮಾಹಿತಿ

ಜಲಾಷಯದ ಗರಿಷ್ಠ ನೀರು ಸಂಗ್ರಹ ಮಟ್ಟ- 519.60 ಮೀ.

ಈಗಿನ‌ ಮಟ್ಟ- 517.52 ಮೀ.

ನೀರು ಸಂಗ್ರಹ ಸಾಮರ್ಥ್ಯ- 123.08 ಟಿಎಂಸಿ

ಈಗಿನ ಸಂಗ್ರಹ- 91.130 ಟಿಎಂಸಿ

ಒಳಹರಿವು- 128957 ಕ್ಯೂಸೆಕ್

ಹೊರ ಹರಿವು- 83784 ಕ್ಯೂಸೆಕ್(ವಿದ್ಯುತ್ ಉತ್ಪಾದಕ ಘಟಕಗಳ ಮೂಲಕ- 45000 ಕ್ಯೂಸೆಕ್, ಕ್ರಸ್ಟಗೇಟ್ ಗಳ ಮೂಲಕ- 38333 ಕ್ಯೂಸೆಕ್.

ಆಲಮಟ್ಟಿಗೆ ಯಾವಾಗ ಬರ್ತೀರಾ ಸಿಎಂ?

ಮಹಾರಾಷ್ಟ್ರದಲ್ಲಿ ಇನ್ನೂ ಮಳೆಗಾಲ ಮುಂದುವರೆದಿರುವ ಹಿನ್ನೆಲೆಯಲ್ಲಿ ಜಲಾಷಯದಲ್ಲಿ ಸಂಪೂರ್ಣ ನೀರು ಸಂಗ್ರಹಿಸಿಲ್ಲ ಎಂದು ಕೆ ಬಿ ಜೆ ಎನ್ ಎಲ್ ಮೂಲಗಳು ತಿಳಿಸಿವೆ.

ಸರಕಾರ ಮತ್ತು ಸಿಎಂ ಮನಸ್ಸು ಮಾಡಿದ್ದರೆ ಕಳೆದ ವಾರವಷ್ಟೇ ಜಲಾಷಯ ಸಂಪೂರ್ಣ ಭರ್ತಿ ಮಾಡಿ ಒಳ ಮತ್ತು ಹೊರ ಹರಿವನ್ನು ಸಮಾನವಾಗಿ ಕಾಪಾಡಿಕೊಂಡು ಕೃಷ್ಣಾ ನದಿಗೆ ಗಂಗಾಪೂಜೆ ಸಲ್ಲಿಸಿ ಬಾಗೀನ‌ ಅರ್ಪಿಸಬೇಕಿತ್ತು.

ಆದರೆ, ರಾಜ್ಯದಲ್ಲಿ ಯಾವ ಸರಕಾರ ಅಧಿಕಾರಕ್ಕೆ ಬಂದರೇನು? ಯಾವ ಭಾಗದ ಮುಖ್ಯಮಂತ್ರಿ ಅಧಿಕಾರದಲ್ಲಿದ್ದರೇನು? ಉತ್ತರ ಕರ್ನಾಟಕಕ್ಕೆ ಮಲತಾಯಿ‌ ಧೋರಣೆ ತಪ್ಪಿದ್ದಲ್ಲ ಎಂಬುದು ಮತ್ತೋಮ್ಮೆ ಸಾಬೀತಾಗಿದೆ.

ಈಗ ಬಸವ ನಾಡಿನ ಜನ ಆಲಮಟ್ಟಿಗೆ ಯಾವಾಗ ಬರ್ತೀರಾ ಸಿಎಂ? ಎಂದು ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸುತ್ತಿದ್ದಾರೆ.

Leave a Reply

ಹೊಸ ಪೋಸ್ಟ್‌