CA Pass: ಕೃಷ್ಣಾ ತೀರದ ರೈತ ಕುಟುಂಬದ ಯುವತಿ ಸಿಎ ಪರೀಕ್ಷೆ ಪಾಸ್

ವಿಜಯಪುರ: ಬಸವ ನಾಡಿನ ಯುವತಿ ಸಿಎ ಪರೀಕ್ಷೆ ಪಾಸು ಮಾಡುವ ಮುಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಹೊಸದಿಲ್ಲಿಯ ಭಾರತೀಯ ಲೆಕ್ಕಪರಿಶೋಧನಾ ಸಂಸ್ಥೆ ನಡೆಸಿದ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಅಂತಿಮ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ‌ ಹಣಮಾಪುರದ ಯುವತಿ ಸೌಮ್ಯಾ ಪಾಟೀಲ ಉತ್ತೀರ್ಣರಾಗಿದ್ದಾಳೆ.

ವಿಜಯಪುರ ನಗರದ ವಜ್ರಹನುಮಾನ‌ ನಗರದಲ್ಲಿ ವಾಸಿಸುವ ಯುವತಿಯದಯ ರೈತರ ಕುಟುಂಬ. ‌ತಂದೆ ಬೇಸಾಯ ಮಾಡುತ್ತಿದ್ದರೆ ತಾಯಿ ಗೃಹಿಣಿಯಾಗಿದ್ದಾರೆ.

ಸಿಎ ಪರೀಕ್ಷೆ ಪಾಸು ಮಾಡಿರುವ ಸೌಮ್ಯ ಪಾಟೀಲ

ವಿಜಯಪುರ ನಗರದ ಸುಭಾಸ ಪಾಟೀಲ ಆ್ಯಂಡ್ ಕಂಪನಿಯಲ್ಲಿ ಸಿಎ ಆಗಿರುವ ಶರಣಗೌಡ .ಬಿ. ಪಾಟೀಲ ಅವರಿಂದ ತರಬೇತಿ ಪಡೆದಿರುವ ಈ ಯುವತಿ ಕೃಷ್ಣಾ ತೀರದ ಹಣಮಾಪುರದ(ಗೂಗ್ಯಾಳ) ಗ್ರಾಮದ ರೈತ ದಂಪತಿಯಾದ ಗೋವಿಂದಗೌಡ ಎಸ್. ಪಾಟೀಲ ಮತ್ತು ಸುಚಿತ್ರಾ ಜಿ. ಪಾಟೀಲ ಪುತ್ರಿಯಾಗಿದ್ದಾರೆ.

ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲನಿ ಬಳಿ ಇರುವ ಆದರ್ಶ ವಿದ್ಯಾ ಮಂದಿರದಲ್ಲಿ ಪ್ರಾಥಮಿಕ, ವಿಜಯಪುರ ನಗರದ ನವರಸಪುರ ಕಾಲನಿಯಲ್ಲಿರುವ ಸಿಕ್ಯಾಬ್ ನಲ್ಲಿ ಹೈಸ್ಕೂಲಿನಲ್ಲಿ 10ನೇ ತರಗತಿಯವರೆಗೆ ಓದಿದ ಅವರು ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಪಾಸಾಗಿದ್ದಾರೆ.

ನಂತರ ಸಿಎ ಓದಲು ಅನುಕೂಲವಾಗವಂತೆ ಅವರು ಇಗ್ನೋ(IGNOU) ನಲ್ಲಿ ಬಿ. ಕಾಂ. ಪದವಿ ಪಡೆದಿದ್ದಾರೆ.

ತಮ್ಮ ಸಾಧನೆಯ ಕುರಿತು ವಸವ ನಾಡು ವೆಬ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ಸಿಎ ಪರೀಕ್ಷೆ ಪಾಸು ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸಾಧನೆಗೆ ತಕ್ಕ ಫಲ‌ ಸಿಕ್ಕಿದೆ. ಇದಕ್ಕೆ ತಂದೆ, ತಾಯಿ‌ ಆಶೀರ್ವಾದ, ಅಕ್ಕನ‌ ಪ್ರೋತ್ಸಾಹ, ಗುರು- ಹಿರಿಯರ ಮಾರ್ಗರ್ಧನ ಪ್ರಮುಖ ಕಾರಣವಾಗಿದೆ. ಈಗ ಜನಸೇವೆ ಮತ್ತು ರಾಷ್ಟ್ರ ಸೇವೆಗೆ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಆರಂಭದಲ್ಲಿ ಪ್ರತಿದಿನ ಸುಮಾರು‌ 12 ಗಂಟೆ ಅಧ್ಯಯನ‌ ಮಾಡುತ್ತಿದ್ದ ಸೌಮ್ಯ ಪಾಟೀಲ‌ ನಂತರ ಅಧ್ಯಯನ ಮನನವಾದ ಬಳಿಕ ಪ್ರತಿದಿನ‌ 8 ಗಂಟೆಗಳ ಕಾಲ‌ ಅಭ್ಯಾಸ ಮಾಡುತ್ತಿರುವುದಾಗಿ ಬಸವ ನಾಡು ವೆಬ್ ಗೆ ದೂರವಾಣಿ ಮೂಲಕ ಮಾಹಿತಿ‌ ನೀಡಿದ್ದಾರೆ.

ಇವರ ಅಕ್ಕ ಮನಿಶಾ ಪಾಟೀಲ‌ ಕಲಬುರಗಿಯ ಖ್ವಾಜಾ ಬಂದೇನವಾಜ್ ಡೀಮ್ಡ್ ವಿವಿಯ ಮನಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ. ಇವರ ತಂಗಿ ವಿಜಯಪುರದಲ್ಲಿ 10ನೇ ತರಗತಿ ಓದುತ್ತಿದ್ಸಾರೆ.

ಬಸವ ನಾಡಿನ ಯುವತಿ ಸೌಮ್ಯ ಪಾಟೀಲ ಅವರ ಈ ಸಾಧನೆಗೆ ಸಿಕ್ಯಾಬ್ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಹಣಮಂತ ಯಡಹಳ್ಳಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌