Millets Awareness: ಹಲಗಣಿಯಲ್ಲಿ ಸಿರಿ ಧಾನ್ಯಗಳ ಮಾಹಿತಿ, ಜ್ಞಾನ ವಿಜಾಸ ಕೇಂದ್ರ ಉದ್ಘಾಟನೆ ಕಾರ್ಯಕ್ರಮ

ವಿಜಯಪುರ: ಸಿರಿ ದಾನ್ಯಗಳ ಬಳಕೆ ಮಾಹಿತಿ ಮತ್ತು ಹಲಗಣೇಶ್ವರ ಹೊಸ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ‌ ಹಲಗಣಿಯಲ್ಲಿ ನಡೆಯಿತು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿ ರಿಯಾಜ್ ಅತ್ತಾರ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾ. ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಹೊಳೆವ್ಗೋಳ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲೆ ಮುಖ್ಯೋಪಾಧ್ಯಾಯ ರಮೇಶ ಊಟಗಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತರು ತಂತಮ್ಮ ಹೊಲಗದ್ದೆಗಳಲ್ಲಿ ಸಿರಿಧಾನ್ಯಗಳ ಕೃಷಿಯನ್ನು ಮಾಡಿದರೆ ಹೆಚ್ಚು ಲಾಭವನ್ನು ಗಳಿಸಬಹುದಾಗಿದೆ. ಇತ್ತೀಚಿನ‌ ದಿನಗಳಲ್ಲಿ ಸಿರಿಧಾನ್ಯ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಲಗಣಿ ಗ್ರಾಮಮದಲ್ಲಿ ಇಂಥ ಕಾರ್ಯಕ್ರಮವನ್ನು ಮಾಡಿರುವುದರಿಂದ. ಮಹಿಳೆಯರಿಗೆ ಹಾಗೂ ರೈತ ಬಾಂಧವರಿಗೆ ವರವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗ್ರಾ. ಪಂ. ಸದಸ್ಯ ರಾಜುಗೌಡ, ಒಕ್ಕೂಟದ ಅಧ್ಯಕ್ಷೆ ಮಂಜುಳಾ, ಬಸನಗೌಡ ಬಿರಾದಾರ, ಗ್ರಾ. ಪಂ. ಕಾರ್ಯದರ್ಶಿ ರಫೀಕ, ವಲಯ ಮೇಲ್ವಿಚಾರಕ ಕಿಶೋರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗೀತಾ, ಸೇವಾ ಪ್ರತಿನಿಧಿಗಳು, ಶ್ರೀನಿವಾಸ್ ಬಿರಾದಾರ, ಮಲ್ಲಿಕಾರ್ಜುನ ಗುಣದಾಳ, ಬಾಲರಾಜ ಹೊಳೆವುಗೋಳ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌