ವಿಜಯಪುರ: 12ನೇ ಶತಮಾನದ ಸಮಾಜ ಸುಧಾರಕ ಅಣ್ಣ ಬಸವಣ್ಣನವರ ತವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಈ ಬಾರಿ ವಿಶ್ವಗುರು ಬಸವೇಶ್ವರ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಈ ವರ್ಷದ ಜಾತ್ರಾ ಕಮಿಟಿ ರಚನೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಶ್ರೀ ಬಸವೇಶ್ವರ ಜಾತ್ರಾ ಸಮಿತಿಯ ನೂತನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಈ ವಿಷಯ ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ವಿಶ್ವಗುರು ಬಸವಣ್ಣನವರ ಜಾತ್ರೆಯು ಸರಳವಾಗಿ ಆಚರಿಸಲಾಗಿತ್ತು. ಆದರೆ, ಈ ವರ್ಷ ಜಾತ್ರೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಅಲ್ಲದೇ, ಈ ವರ್ಷ ಜಾತ್ರೆಯನ್ನು ಮೂರು ದಿನದ ಬದಲಾಗಿ ಐದು ದಿನಗಳವರೆಗೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಈ ವರ್ಷ ಶ್ರಾವಣ ಮಾಸದ ಅಂಗವಾಗಿ ನಡೆಯಲಿರುವ ಪ್ರವಚನ ಕಾರ್ಯಕ್ರಮವನ್ನು ಬೈಲೂರು ಮುಂಡರಗಿಯ ನಿಷ್ಕಲ್ಮಂಟಪದ ಪೂಜಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ನಡೆಸಿಕೊಡಲಿದ್ದಾರೆ. ಈ ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ, ಕುಸ್ತಿ, ಭಾರ ಎತ್ತುವದು ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅನೇಕ ಕಲಾತಂಡಗಳಿಗೆ ಅಹ್ವಾನ ನೀಡಲಾಗುವುದು ಎಂದು ಈರಣ್ಣ ಪಟ್ಟಣಶೆಟ್ಟಿ ತಿಳಿಸಿದರು
ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಸಂಚಾಲಕರಾಗಿ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ, ಉಪಾಧ್ಯಕ್ಷರಾಗಿ ಸಂಗಮೇಶ ವಾಡೆದ, ಮೀರಾಸಾಬ ಕೋರಬು, ಯಮನೂರಿ ಬಿದರಕುಂದಿ, ಪರಶುರಾಮ ಜಮಖಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಅಳ್ಳಗಿ, ಖಜಾಂಚಿಯಾಗಿ ರವಿ ಚಿಕ್ಕೊಂಡ ಅವರನ್ನು ಕೂಡಲಸಂಗಮ ಅಭಿವೃದ್ದಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಆಯ್ಕೆ ಮಾಡಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಗೊಳಸಂಗಿ, ಬಸಣ್ಣ ದೇಸಾಯಿ, ಕಲ್ಲೂರ, ಸಂಗಮೇಶ ಓಲೆಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಸುಭಾಷ್ ಚಿಕ್ಕೊಂಡ, ಯಮನಪ್ಪ ನಾಯ್ಕೋಡಿ ಬಸವರಾಜ್ ಹಾರಿವಾಳ, ಶಂಕರಗೌಡ ಚಿಕ್ಕೊಂಡ, ಅನಿಲ ಅಗರವಾಲ, ಸಂಕನಗೌಡ ಪಾಟೀಲ, ಶೇಖರ ಗೊಳಸಂಗಿ l, ನಿಂಗಪ್ಪ ಅವಟಿ, ಬಸಗೊಂಡ ಹಾದಿಮನಿ ಬಸವರಾಜ ಕೋಟಿ, ವಿಶ್ವನಾಥ ಹಾರಿವಾಳ, ಸುನಿಲ ಚಿಕ್ಕೊಂಡ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.