ವಿಜಯಪುರ: ಕೇಂದ್ರ ಸರಕಾರ ಇಡಿ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ವಿಜಯಪುರ ನಗರದಲ್ಲಿ ಗಾಂಧಿಚೌಕಿನನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ನಡೆಯನ್ನು ಖಂಡಿಸಿದರು. ನಂತರ ಗಾಂಧಿ ಚೌಕಿನಿಂದ ಅಂಬೇಡ್ಕರ್ ಚೌಕ್ ಮೂಲಕ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕೇಂದ್ರ ಸರಕಾರ ದ್ವೇಷ ರಾಜಕೀಯದಲ್ಲಿ ಮುಳುಗಿದೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ. ಮುಗಿದ ಅಧ್ಯಾಯವಾಗಿರುವ ನ್ಯಾಷನಲ್ ಹೆರಾಲ್ಸ್ ಪತ್ರಿಕೆಯ ಆಂತರಿಕ ವಿಚಾರವನ್ನು ಮತ್ತೆ ಕೆದಕಿ ಸೋನಿಯಾ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿರುವುದು ಖಂಡನಾರ್ಹ. ಪ್ರತಿಪಕ್ಷದವರ ಮನೋಬಲ ಕುಗ್ಗಿಸುವ ಪ್ರಯತ್ನವನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಕೇಂದ್ರ ಸರಕಾರವು ಏನೇ ಪ್ರಯತ್ನ ಮಾಡಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಸೋನಿಯಾ ಗಾಂಧಇ ಮತ್ತು ರಾಹುಲ ಗಾಂಧಿ ಪರವಾಗಿ ದೇಶಾದ್ಯಂತ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ನಿಲ್ಲುತ್ತಾರೆ ಎಂದು ಹೇಳಿದರು.
ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಕೇವಲ ದ್ವೇಷದ ರಾಜಕಾರಣ ಮಾಡುತ್ತಿದೆ. ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಾಂವಿಧಾನಿಕ ಸಂಸ್ಥೆಯಾದ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ವಿಚಾರಣೆಗೆ ಒಳಪಡಿಸುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಹಾಳುಗೆಡುವಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಇತ್ತೀಚೆಗೆ ಬಿಜೆಪಿ ಶಾಸಕರು ಮಾಜಿ ಉಪರಾಷ್ಟ್ರಪತಿ ಹಮೀದ ಅನ್ಸಾರಿ ಅವರನ್ನು ದೇಶದ್ರೋಹಿ ಎಂದು ಹೇಳಿಕೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರೊ. ರಾಜು ಆಲಗೂರ ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಿಠ್ಠಲ ಧೋಂಡಿಬಾ ಕಟಕಧೋಂಡ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ ಮುಶ್ರೀಫ್, ಬಿ. ಎಸ್. ಪಾಟೀಲ ಯಾಳಗಿ, ಕಾಂತಾ ನಾಯಕ, ವಸಂತ ಹೊನಮೋಡೆ, ಅಶೋಕ ಮನಗೂಳಿ, ಮಲ್ಲಣ್ಣ ಸಾಲಿ, ಸುಭಾಷ ಛಾಯಾಗೋಳ, ಮಹ್ಮದ ರಫೀಕ್ ಟಪಾಲ, ಚಾಂದಸಾಬ ಗಡಗಲಾವ, ಎಸ್. ಎಂ. ಪಾಟೀಲ ಗಣಿಹಾರ, ವಿದ್ಯಾರಾಣಿ ತುಂಗಳ, ಡಾ. ವಿಶ್ವನಾಥ ಮಠ, ಸಂಗನಗೌಡ ಪಾಟೀಲ ಹರನಾಳ, ಆನಂದ ದೊಡಮನಿ, ರಾಮನಗೌಡ ಬಗಲಿ, ಜಮೀರ ಅಹ್ಮದ ಬಕ್ಷಿ, ಆರತಿ ಶಹಾಪೂರ, ಗುರು ತಾರನಾಳ, ವಿನೋದ ವ್ಯಾಸ, ಬಶೀರ ಬೇಪಾರಿ, ರಫೀಕ ಪಕಾಲಿ, ಎಸ್. ಬಿ. ಹಾರಿವಾಳ, ಈರನಗೌಡ ಎಸ್. ಬಿರಾದಾರ, ಸಿದ್ದಣ್ಣ ಗೌಡನ್ನವರ, ಬಾಳನಗೌಡ ಪಾಟೀಲ, ಸುಜಾತಾ ಕಳ್ಳಿಮನಿ, ವಿದ್ಯಾವತಿ ಅಂಕಲಗಿ, ಕಾಂಗ್ರೆಸ್ ಜಿಲ್ಲಾ ಅಂಗಘಟಕಗಳ ಅಧ್ಯಕ್ಷರಾದ ಬಾಪುಗೌಡ ಪಾಟೀಲ ವಡವಡಗಿ, ಶ್ರೀಕಾಂತ ಛಾಯಾಗೋಳ, ಶಾಹಜಾನ ಮುಲ್ಲಾ, ಎಸ್. ವಿ. ಹಜೇರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಸೋಮನಾಥ ಕಳ್ಳಿಮನಿ, ಈರಣ್ಣ ಪಟ್ಟಣಶೆಟ್ಟಿ, ಶರಣಪ್ಪ ಯಕ್ಕುಂಡಿ, ಹಾಜಿಲಾಲ ದಳವಾಯಿ, ಈರಪ್ಪ ಜಕ್ಕಣ್ಣವರ, ತಮ್ಮಣ್ಣ ಮೇಲಿನಕೇರಿ, ಹೊನಮಲ್ಲ ಸಾರವಾಡ, ಎ. ಎಂ. ಸುತಾರ, ಚನಬಸಪ್ಪ ನಂದರಗಿ, ಎಂ. ಎ. ಖತೀಬ, ಇರ್ಫಾನ ಶೇಖ್, ನಾಗರಾಜ ಲಂಬು, ರಜಾಕಸಾಬ ಕಾಖಂಡಕಿ, ರೇಣುಕಾ ಲೋಹಗಾಂವಕರ, ಸುಜಾತಾ ಸಿಂಧೆ, ಕಸ್ತೂರಿ ಬಿರಾದಾರ, ಕಸ್ತೂರಿ ಪೂಜಾರಿ, ದಾನಮ್ಮಾ ಜಿರಲಿ, ರಮೇಶ ದಳವಾಯಿ, ಮಲ್ಲನಗೌಡ ಎಸ್. ಬಿರಾದಾರ, ಧನರಾಜ ಎ., ಗಣೇಶ ಮಣೂರ, ರವೀಂದ್ರ ಜಾಧವ, ಜಕ್ಕಪ್ಪ ಯಡವೆ, ಮಾದೇವ ನಾಟೀಕಾರ, ಎಂ. ಎ. ಮುಲ್ಲಾ, ಮುದಸ್ಸರ ವಾಲಿಕಾರ, ಇಲಿಯಾಸ ಸಿದ್ದಿಕಿ, ಸಂತೋಷ ಬಾಲಗಾಂವಿ, ತಾಜುದ್ದೀನ ಖಲೀಫಾ, ಎಂ. ಎ. ಅಥಣಿ, ಬಿ. ಎಸ್. ಬ್ಯಾಳಿ, ನಿಂಗನಗೌಡ ಬಿರಾದಾರ, ಎಸ್. ಎಸ್. ಹೆಬ್ಬಾಳ, ಶಿವಕುಮಾರ ದೇಸಾಯಿ, ಸರಿತಾ ನಾಯಕ, ಸಲೀಂ ಪೀರಜಾದೆ, ದೀಪಾ ಕುಂಬಾರ, ಗೌರಮ್ಮಾ ಮುತ್ತತ್ತಿ, ಲಲಿತಾ ದೊಡಮನಿ, ಪ್ರಭಾವತಿ ನಾಟಿಕಾರ, ಮಂಜುಳಾ ಜಾಧವ, ರುಕ್ಮಿಣಿ ರಾಠೋಡ, ಭಾರತಿ ಹೊಸಮನಿ, ಸುಂದರಪಾಲ ರಾಠೋಡ, ಸಲೀಂ ಉಸ್ತಾದ, ಅನುಪಮ ಬಬಲೇಶ್ವರ, ಲಕ್ಷ್ಮಣಗೌಡ ಎನ್. ಬಿರಾದಾರ, ಅಕ್ಬರ ನಾಯಕ, ಕೆ. ಕೆ. ಬನ್ನೆಟ್ಟಿ, ಆರ್. ಡಿ. ಹಕ್ಕೆ, ಸುಭಾಸ ತಳಕೇರಿ, ಶಿವಾನಂದ ಹೊನವಾಡ, ಬಸವರಾಜ ಕಲ್ಲೂರ, ಶರಣಪ್ಪ ಬೆಲ್ಲದ, ಬಾಬು ಯಾಳವಾರ ಮುಂತಾದವರು ಉಪಸ್ಥಿತರಿದ್ದರು.