ವಿಜಯಪುರ: ಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಮತ್ತು ಜ್ಞಾನ ಜೋಳಿಗೆ ಸಂಸ್ಥಾಪಕ, ಸಮಾಜ ಸೇವಕ ಮತ್ತು ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ಅವರ 42ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ನಾನಾ ಕಡೆ ಸಮಾಜಮುಖಿ ಕಾರ್ಯಕ್ರಮ ನಡೆಸಿದರು.
ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್, ಜ್ಞಾನ ಜೋಳಿಗೆ ಫೌಂಡೇಶನ್ ವಾವ್ ಕಿಡ್ಸ್. ಕಿಡ್ಸ್ ಕಿಂಗ್ಡಮ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು. ನಂತರ ವಾವ್ ಕಿಡ್ಸ್ .ಕಿಡ್ಸ್ ಕಿಂಗಡಂ ಶಾಲೆಗಳಲ್ಲಿ ಜನ್ಮದಿನಾಚರಣೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಫ್ಟವೇರಿ ಉದ್ಯಮಿ ಸಾಗರ ಅವಟಿ, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಮೂಲಕ ನಾಡಿನ ಸಾವಿರಾರು ಅನಾಥ ಮಕ್ಕಳ ಬಾಳಿಗೆ ಬೆಳಕಾಗಿರುವ ಸಂಗಮೇಶ ಬಬಲೇಶ್ವರ ಅವರ ಕಾರ್ಯ ನಮ್ಮೆಲ್ಲರಿಗೂ ಮಾದರಿಯಾದದೆ. ಶಿಕ್ಷಣ ಸಹಕಾರ ಮತ್ತು ಸಾಮಾಜಿಕ ರಂಗದಲ್ಲಿ ಅವರು ಕೈಗೊಂಡಿರುವ ಕಾರ್ಯಗಳು ಯುವಕರಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಮೋಹನ ದಳವಾಯಿ, ರವಿ ಕಿತ್ತೂರ, ಮಂಜುನಾಥ ನಿಡೋಣಿ, ಸತೀಶ ನಡಗಡ್ಡಿ, ಪ್ರದೀಪ ಲಿಂಗದಳ್ಳಿ, ಸೋಮೇಶ ಇಂಡೋರ, ಅಮಿತಕುಮಾರ ಬಿರಾದಾರ, ಮಂಜುನಾಥ ಪಾಟೀಲ, ಪುಂಡಲೀಕ ಬೇವೂರ, ಸಂತೋಷ ಬಿರಾದಾರ, ಮೋಹನ ಸುಬೇದಾರ, ರವಿ ಪಾಟೀಲ, ರವಿ ಕೆಂಗನಾಳ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.