Women Rights: ಮಹಿಳಾ ಹಕ್ಕುಗಳು, ಕಾನೂನು ಅರಿವು ಕಾರ್ಯಕ್ರಮ- ನ್ಯಾಯಾಧೀಶ ವೆಂಕಣ್ಣ ಹೊಸಮನಿ ಉದ್ಘಾಟನೆ

ವಿಜಯಪುರ: ತೋಟ್ಟಿಲು ತೂಗುವ ಕೈ ಜಗತ್ತನ್ನೆ ತೂಗಬಹುದು.  ಮಹಿಳೆ  ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕಿಯವಾಗಿ ಬೇಳೆಯಲು ಸಾಕಷ್ಟು ಅವಕಾಶಗಳಿವೆ ಎಂದು ವಿಜಯಪುರ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಹೊಸಮನಿ ಹೇಳಿದರು.

ವಿಜಯಪುರದ ಕಂದಗಲ ಹಣಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳು ಹಾಗೂ ನವದೆಹಲಿಯ ಭ್ರಷ್ಟಾಚಾರ ವಿರೋಧಿ ಸಂಸ್ಥೆ ವಿಜಯಪುರ ಜಿಲ್ಲಾ ಮಹಿಳಾ ಘಟಕ ಸಹಯೋಗದಲ್ಲಿ  ಆಯೋಜಿಸಲಾಗಿದ್ದ ಮಹಿಳಾ ಹಕ್ಕುಗಳು ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಟಾಟಿಸಿ ಅವರು ಮಾತನಾಡಿದರು.

ಮಹಿಳಾ ಹಕ್ಕುಗಳು ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಮಹಿಳೆಯರು

ಹಿಂದುಳಿದ ಮಹಿಳೆಯರು ಮೌಡ್ಯಗಳನ್ನು, ಮೂಡನಂಬಿಕೆಗಳು ಮತ್ತು ದಾಸ್ಯದ ಸಂಕೋಲೆಯನ್ನು ತೊರೆದು ಮುನ್ನುಗಬೇಕು.  ಮಹಿಳೆ ಅಬಲೆಯಲ್ಲ.  ಸಬಲೆ ಎನ್ನುವುದನ್ನು ತೊರಿಸಬೇಕಾಗಿದೆ.  ಆ ನಿಟ್ಟಿನಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಮಹಿಳ ಘಟಕ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ.  ಮುಂದಿನ ದಿನಗಳಲ್ಲಿ ಪ್ರತಿ ಹಂತದಲ್ಲಿಯೂ ನಾವು ನಿಮ್ಮ ಜೋತೆ ನಿಲ್ಲುತ್ತೇವೆ ಎಂದು ವೆಂಕಣ್ಣ ಹೊಸಮನಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಮತ್ತು ನವದೆಹಲಿಯ ಮಾನವ ಹಕ್ಕುಗಳು ಹಾಗೂ ಭ್ರಪ್ಟಾಚಾರ ಸಂಸ್ಥೆ ನವದೆಹಲಿ ರಾಷ್ಟ್ರೀಯ ಅಧ್ಯಕ್ಷ ಡಾ. ಮೋಹನರಾವ ನಲವಡೆ, ಜಿಲ್ಲಾ ಅಧ್ಯಕ್ಷ ಸಂತೋಷ ಸಾಲವಾಡಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ ಉಕ್ಕಲಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ  ಸಿದ್ದಮ್ಮಾ ಕೊಳೂರಗಿ, ಜಿಲ್ಲಾ ಸಮಾಜ ಕಲ್ಯಾಣಾಅಧಿಕಾರಿ ರಾಮನಗೌಡ ಕನ್ನೊಳ್ಳಿ, ಡಾ. ಬಿ. ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರಲೆ ಮಾತನಾಡಿದರು.

ಈ ಸಂದರ್ಭದಲ್ಲಿ ಶಂಕರ, ಸಮಾಜ ಸೇವಕಿ ಎನ್. ಆರ್. ನಾಗರತ್ನ, ಜಾಗೃತಿ ಮಹಿಳಾ ಸಂಘದ ಸಲಹಾ ಸಮಿತಿಯ ಅಧ್ಯಕ್ಷ ರವಿ ಕಿತ್ತೂರ ಉಪಸ್ಥಿತರಿದರು.

ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷರಾದ ಯಶೋದಾ ಮೇಲಿನಕೆರಿ, ರೇಣುಕಾ ಮಾದರ (ಅರಳದಿನ್ನಿ), ನಂದಾ ಗುನ್ನಾಪುರ, ಜಯಶ್ರೀ ಬಿಂಗಿ, ಶಿವಲಿಲಾ ಚಲವಾದಿ, ಪುಷ್ಪಾ ಮನ್ನೂರ, ಮಲ್ಲಮ್ಮಾ ಹವಳಗಿ, ಜಯಶ್ರೀ ಚಿಗರಿ, ಕಸ್ತೂರಿಬಾಯಿ ಪಾಟೀಲ, ಉಮಾಶ್ರೀ ವಾಘಮೊರೆ, ಚಂದಾಬಾಯಿ ಮಾದರ, ಪಾರ್ವತಿ ಮಾದರ, ಯಲ್ಲವ್ವ ಕತ್ನಳಿ, ರೇಣುಕಾ ಬಗಲಿ, ರೇವಮ್ಮಾ ಗಾಡಿವಡ್ಡರ ಅವರು ಪದಗ್ರಹಣ ಮಾಡಿರುವ ಗುರುತಿನ ಚೀಟಿ ಮತ್ತು ಅಧಿಕಾರ ಪತ್ರವನ್ನು ವಿತರಿಸಲಾಯಿತು.

ಅಶೋಕ ಕಾಳೆ ಸ್ವಾಗತಿಸಿದರು.  ಮಠಪತಿ ನಿರೂಪಿಸಿದರು.  ನಂದಾ ಗುನ್ನಾಪುರ ವಂದಿಸಿದರು.

Leave a Reply

ಹೊಸ ಪೋಸ್ಟ್‌