Doctors Experience: ನೈಜ ಜೀವನದ ಅನುಭವದಿಂದ ಶ್ರೇಷ್ಠ ವೈದ್ಯರಾಗಲು ಸಾಧ್ಯ- ಡಾ. ಆರ್. ಎಸ್. ಮುಧೋಳ

ವಿಜಯಪುರ: ವೈದ್ಯರಾಗುವವರು ಕೇವಲ ಪುಸ್ತಕದಿಂದ ತಿಳಿದುಕೊಂಡರೆ ಸಾಲದು. ನೈಜ ಜೀವನದ ಅನುಭವದಿಂದ ಕಲಿತುಕೊಂಡರೆ ಶ್ರೇಷ್ಠ ವೈದ್ಯರಾಗಲು ಸಾಧ್ಯ ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದರು. ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ್ ವೈದ್ಯಕೀಯ ಆಸ್ಪತ್ರೆ, ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದಿಂದ ವಿಜಯಪುರ ನಗರ ಹೊರ ವಲಯದಲ್ಲಿರುವ ರಂಭಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಕುಟುಂಬ ದತ್ತು ಪಡೆಯುವ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು. […]

Journalists Siddheshwar Swamiji: ಪತ್ರಕರ್ತರು ಸಾರ್ವಜನಿಕ ಶಿಕ್ಷಕರು- ಶ್ರೀ ಸಿದ್ಧೇಶ್ವರ ಸ್ಚಾಮೀಜಿ

ವಿಜಯಪುರ: ಪ್ರತಿದಿನ ಹೊಸ ಹೊಸ ಸಂಗತಿಗಳನ್ನು ವರದಿ ಮಾಡುವ ಪತ್ರಕರ್ತರು ಸಾರ್ವಜನಿಕರ ಶಿಕ್ಷಕರು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾಡನಾಡಿದರು. ಪತ್ರಿಕೆಗಳಿಗೆ ಓದುಗರ ಮನಸ್ಸು ವಿಕಾಸಗೊಳಿಸುವ, ಮುಖವಿದೆ, ಸರಕಾರದ ನಡೆ, ನುಡಿ ತಿದ್ದುವ ಮುಖವಿದೆ. ‌ಈ ಮುಖದಲ್ಲಿ ಯಾವ ಮುಖವೂ ವಿಮುಖವಾಗಬಾರದು. ಪತ್ರಿಕೆಗಳಲ್ಲಿ ಕ್ರೀಡೆಗಳಿಗೂ ಒಂದು ಪುಟ ಮೀಸಲಿರುತ್ತದೆ. ಯುವಜನತೆಗೆ ಈ […]

Media Hugar: 4ನೇ ಅಂಗವಾಗಿ ಪತ್ರಿಕೋದ್ಯಮ ವಿಫಲವಾಗಿದೆ- 5ನೇ ಅಂಗವಾಗಿ ಸ್ವತಂತ್ರ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ- ಸುಭಾಷ ಹೂಗಾರ

ವಿಜಯಪುರ: ಸಮಾಜದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ಈಗ ವಿಫಲವಾಗಿದೆ. ವಿಶ್ವಾದ್ಯಂತ ಈಗ 5ನೇ ಅಂಗವಾಗಿ ಸ್ವತಂತ್ರ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಸುಭಾಷ ಹೂಗಾರ ತಿಳಿಸಿದ್ದಾರೆ. ವಿಜಯಪುರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಪತ್ರಿಕೋದ್ಯಮ ವೃತ್ತಿಯ ಮೂಲ ಉದ್ದೇಶ ಮತ್ತು ಆಶಯ ಬದಲಾಗಬಾರದು. ಸಮಾಜದಲ್ಲಿ ತಾಯಿಯ ಪಾತ್ರವನ್ನು ಪತ್ರಿಕೋದ್ಯಮ ನಿರ್ವಹಿಸಬೇಕು. ಪತ್ರಕರ್ತರಲ್ಲಿ ಮತ್ತು ಮಾಧ್ಯಮ ಮುಖ್ಯಸ್ಥರಲ್ಲಿ […]

DC Journalism: ಟಿ ಆರ್ ಪಿ, ಪ್ರಸರಣ ಸಂಖ್ಯೆಯನ್ನು ಹೆಚ್ಚಿಸಲು ಸುದ್ದಿಗಳ ವೈಭವೀಕರಣ ಸಲ್ಲದು- ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ಟಿ ಆರ್ ಪಿ ಮತ್ತು ಪ್ರಸರಣ ಸಂಖ್ಯೆ ಹೆಚ್ಚಿಸಲು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಸುದ್ದಿಗಳ ವೈಭವೀಕರಣ ಮಾಡಬಾರದು ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಕಿವಿಮಾತು ಹೇಳಿದ್ದಾರೆ. ವಿಜಯಪುರದಲ್ಲಿ ಪತ್ರಿಕಾ ದಿನಾಚರಣೆ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ರು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಲೇಖನಿ ಖಡ್ಗಕ್ಕಿಂತ ಹರಿತವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿವೆ. ಸಾರ್ವಜನಿಕರ ಕಣ್ಣು ಮತ್ತು ಕಿವಿಯಾಗಿ ಪತ್ರಿಕೆಗಳು ಕೆಲಸ ಮಾಡುತ್ತಿವೆ. ಸರಕಾರದ ಲೋಪದೋಷಗಳನ್ನು […]

Street Business: ವಿಜಯಪುರದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಭ್ರಮಾಚರಣೆಯ ಸ್ವನಿಧಿ ಮಹೋತ್ಸವ: ವಿಜಯಪುರದಲ್ಲಿ ಯಶಸ್ವಿ

ವಿಜಯಪುರ: ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ, ಐತಿಹಾಸಿಕ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಮುಖ ನಗರವಾಗಿ ಆಯ್ಕೆಯಾದ, ಐತಿಹಾಸಿಕ ಹಿನ್ನೆಲೆಯ ವಿಜಯಪುರದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೌಶಲಾಭಿವೃದ್ಧಿ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಸ್ವನಿಧಿ ಮಹೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕೇಂದ್ರ ಸರಕಾರದ ಮಹತ್ವದ ಈ ಸ್ವನಿಧಿ ಮಹೋತ್ಸವಕ್ಕೆ ರಾಷ್ಟ್ರ ಮಟ್ಟದ 75 ನಗರಗಳು ಹಾಗೂ ಕರ್ನಾಟಕ ರಾಜ್ಯ ಮಟ್ಟದ ಮೂರು ನಗರಗಳ ಪೈಕಿ ವಿಜಯಪುರ ನಗರ ಕೂಡ ಆಯ್ಕೆಯಾಗಿದ್ದರಿಂದ ನಗರದ ಕಂದಗಲ್ ಶ್ರೀ […]