Govt Nomination: ಚಂದ್ರಶೇಖರ ಕವಟಗಿ ಸೇರಿದಂತೆ 25 ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ ಸರಕಾರ

ಬೆಂಗಳೂರು: ರಾಜ್ಯ ಸರಕಾರ ಬಸವ ನಾಡು ವಿಜಯಪುರ ಜಿಲ್ಲೆಯ ಚಂದ್ರಶೇಖರ ಕವಟಗಿ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ನಾನಾ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡಿ ಅದೇಶ ಹೊರಡಿಸಿದೆ.  ನಿಗಮಗಳು ಮತ್ತು ನೂತನ ಅಧ್ಯಕ್ಷರ ಹೆಸರುಗಳು ಇಂತಿವೆ. ಚಂದ್ರಶೇಖರ ಕವಟಗಿ- ಲಿಂಬೆ ಅಭಿವೃದ್ಧಿ ಮಂಡಳಿ, ದೇವೇಂದ್ರನಾಥ ಕೆ. ನಾದ, ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಚೆಂಗಾವರ ಮಾರಣ್ಣ- ಕಾಡುಗೊಲ್ಲ ಅಭಿವೃದ್ಧಿ ನಿಗಮ, ಎಂ. ಕೆ. ಶ್ರೀನಿವಾಸ(ಮಿರ್ಲೆ ಶ್ರೀನಿವಾಸಗೌಡ್ರು)- ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು, […]

Thieves Arrest: ಸೆಂಟ್ರಿಂಗ್ ಪ್ಲೇಟ್ ಕಳ್ಳರನ್ನು ಬಂಧಿಸಿ ರೂ. 10.25 ಲಕ್ಷ ಮೌಲ್ಯದ ಸಾಮಗ್ರಿ, ವಾಹನ ವಶಪಡಿಸಿಕೊಂಡ ವಿಜಯಪುರ ಗ್ರಾಮೀಣ ಪೊಲೀಸರು

ವಿಜಯಪುರ: ವಿಜಯಪುರ ಗ್ರಾಮೀಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.  ಮನೆ ಮೇಲ್ಛಾವಣಿ ನಿರ್ಮಿಸಲು ಬಳಸುವ ಸೆಂಟ್ರಿಂಗ್ ಪ್ಲೇಟ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರು ಜನ ಆರೋಪಿಗಳನ್ನು ಬಂಧಿಸಿದ್ದು, 1094 ಸೆಂಟ್ರಿಂಗ್ ಪ್ಲೇಟ್ ಮತ್ತು ಅವುಗಳನ್ನು ಸಾಗಿಸಲು ಬಳಸುತ್ತಿದ್ದ ಲಘು ಸರಕು ಸಾಗಣೆ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಾತಾರ ನಗರದ ಸಿಲವಲ್ ಚೌಪಲಿ ಮಂದಿರದ ಅನಿಲ ಗ್ಲೋಷಮ್ ಸೊಸಾಯಿಟಿ ನಿವಾಸಿ ಮತ್ತು ಬಾಂಡೆ ವ್ಯಾಪಾರಿ ಫರೀದ ತಂದೆ, ಅನ್ವರ ಶೇಖ(32), ಮಹಾರಾಷ್ಟ್ರ ಮೂಲಕ ಮತ್ತು […]

Ayurvedic Results: ಬಿ ಎಲ್ ಡಿ ಇ ಸಂಸ್ಥೆಯ ಎವಿವಿ ಆಯುರ್ವೇದ ಕಾಲೇಜಿನಲ್ಲಿ ಶೇ. 90.69 ಫಲಿತಾಂಶ

ವಿಜಯಪುರ: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಏರ್ಪಡಿಸಿದ್ದ 2021-22 ನೇ ವರ್ಷದ ಆಯುರ್ವೇದ ವೈದ್ಯಕೀಯ ಪರೀಕ್ಷೆ ಅಂತಿಮ ವರ್ಷದ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು,   ಬಿ ಎಲ್ ಡಿ ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ಶೇ.90.69 ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕಸ್ತೂರಿ ಹಿರೇಮಠ ಶೇ.80.07, ನಂದಾ ಕುರಿ ಶೇ.79.45, ಶಿಲ್ಪಾ ಸೂರ್ಯವಂಶಿ ಶೇ.79.21, ಶೃತಿ ಬಿರಾದಾರ ಶೇ.78.43, ಲಕ್ಷ್ಮೀ […]

Congress Katti: ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ- ಇದನ್ನು ಅರ್ಥೈಸಿಕೊಳ್ಳದ ಕೈ ನಾಯಕುರ ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ- ಉಮೇಶ ಕತ್ತಿ

ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ.  ಇದನ್ನು ಅರ್ಥ ಮಾಡಿಕೊಳ್ಳದ ಕೈ ನಾಯಕರು ಸಿಎಂ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಲ್ಲ.  ಡಿ. ಕೆ. ಶಿವಕುಮಾರ ಮುಖ್ಯಮಂತ್ರಿ ಆಗಲ್ಲ.  ಸಿಎಂ ಆಗಬೇಕೆಂದು ಇನ್ಯಾರು ಹಂಬಲ ಪಡುತ್ತಿದ್ದಾರೆ, ಅವರು ಹಂಬಲ ಪಡುತ್ತಿರಲಿ.  ಎಲೆಕ್ಷನ್ ಆಗುವವರೆಗೂ ಅವರ ಚಟಗಳನ್ನ ತೀರಿಸಿಕೊಳ್ಳಲಿ.  ಆದರೆ, ಬಿಜೆಪಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದು […]

BLDEA Rameshkumar: ಬಿ ಎಲ್ ಡಿ ಇ ಸಂಸ್ಥೆಯ ಕಟ್ಟಿ ಬೆಳೆಸಿದ ಮಹನೀಯರ ಸ್ಮರಣೆ- ಜು. 27 ರಂದು ನಡೆಯುವ ಕಾರ್ಯಕ್ರಮದಲ್ಲಿ ರಮೇಶಕುಮಾರ ಭಾಗಿ

ವಿಜಯಪುರ: ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಪೂಜ್ಯ ಡಾ.ಫ.ಗುಹಳಕಟ್ಟಿ, ಬಂಥನಾಳ ಶಿವಯೋಗಿಗಳ, ಮಹಾದಾನಿ ಬಂಗಾರಮ್ಮ ಸಜ್ಜನ, ಶಿಕ್ಷಣ ಪ್ರೇಮಿ ದಿ. ಬಿ. ಎಂ. ಪಾಟೀಲ ಅವರ ಸ್ಮರಣೆ ಅಂಗವಾಗಿ ವರ್ತಮಾನದ ಬದುಕು ಎಂಬ ವಿಷಯದ ಕುರಿತು ಕರ್ನಾಟಕ ವಿಧಾನಸಭೆ ಮಾಜಿ ಅಧ್ಯಕ್ಷ, ಶಾಸಕ ಕೆ.ಆರ್.ರಮೇಶಕುಮಾರ ಅವರು ಮಾತನಾಡಲಿದ್ದಾರೆ. ದಿ.27 ಬುಧವಾರ ಬೆ.11ಗಂ. ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಧಾರವಾಡ […]

Alamatti Arrest: ಮಹಿಳಾ ವೇ಼ಷ ಧರಿಸಿ ಅಲಮಟ್ಟಿ ಡ್ಯಾಂ‌ ಪ್ರವೇಶಿಸಲು ಯತ್ನಿಸಿದ ಯುವಕ ಪೊಲೀಸರ ವಶ

ವಿಜಯಪುರ: ಮಹಿಳೆಯರ ವೇಷ ಧರಿಸಿ ಆಲಮಟ್ಟಿ ಜಲಾಶಯ ಪ್ರವೇಶಿಸಲು ಯತ್ನಿಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರಕ್ಕೆ ಬೆಳಗಿನ ಜಾವ ಬುರ್ಖಾ ಧರಿಸಿದ ಮಹಿಳೆ ಒಬ್ಬರು ಜಲಾಶಯದ ಆವರಣ ಪ್ರವೇಶಿಸಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಪ್ರವೇಶ ದ್ವಾರದಲ್ಲಿ ತಪಾಸಣೆಗೆ ನಿರತರಾಗಿರುವ ಪೊಲೀಸರು ಇಷ್ಟು ಬೇಗ ಡ್ಯಾಂ ಒಳಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಅವನನ್ನು ವಾಪಸ್ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳೆಯ ಧ್ವನಿಯನ್ನು ಕೇಳಿದ ಪೊಲೀಸರು ಇದು […]

Health Campaign: ಬಸವನ ಬಾಗೇವಾಡಿಯಲ್ಲಿ ಅಪೌಷ್ಠಿಕತೆ, ಅನಿಮಿಯಾ ಮುಕ್ತ ಭಾರತ ಜಾಗೃತಿ ಅಭಿಯಾನ

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯೂನಿಸೇಫ್, ಬೆಂಗಳೂರಿನ ಆರೋಗ್ಯ ನಿರ್ವಹಣೆ ಮತ್ತು ಸಂಶೋಧನೆ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಅಪೌಷ್ಠಿಕತೆ ಮತ್ತು ಅನಿಮಿಯಾ ಮುಕ್ತ ಭಾರತ ಜಾಗೃತಿ ಅಭಿಯಾನ ನಡೆಯಿತು. ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ. ಕೆ. ಚವ್ಹಾಣ ಉದ್ಗಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ಅನಿಮಿಯಾದಿಂದ […]