Ayurvedic Results: ಬಿ ಎಲ್ ಡಿ ಇ ಸಂಸ್ಥೆಯ ಎವಿವಿ ಆಯುರ್ವೇದ ಕಾಲೇಜಿನಲ್ಲಿ ಶೇ. 90.69 ಫಲಿತಾಂಶ

ವಿಜಯಪುರ: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಏರ್ಪಡಿಸಿದ್ದ 2021-22 ನೇ ವರ್ಷದ ಆಯುರ್ವೇದ ವೈದ್ಯಕೀಯ ಪರೀಕ್ಷೆ ಅಂತಿಮ ವರ್ಷದ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು,   ಬಿ ಎಲ್ ಡಿ ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ಶೇ.90.69 ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕಸ್ತೂರಿ ಹಿರೇಮಠ ಶೇ.80.07, ನಂದಾ ಕುರಿ ಶೇ.79.45, ಶಿಲ್ಪಾ ಸೂರ್ಯವಂಶಿ ಶೇ.79.21, ಶೃತಿ ಬಿರಾದಾರ ಶೇ.78.43, ಲಕ್ಷ್ಮೀ ಮೂಡಗಿ ಶೇ.78.72, ಶ್ವೇತಾ ಸಿಂದಗಿ ಶೇ.76.78, ಸೌಮ್ಯಕುಮಾರಿ ಶೇ.76.47, ಪವಿತ್ರಾ ಬಿರಾದಾರ ಶೇ.73.03 ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಈ ಬಾರಿ ಪರೀಕ್ಷೆಯಲ್ಲಿ ಎಂಟು ಜನ ಡಿಸ್ಟಿಂಕ್ಷನ್, 17 ಜನ ಪ್ರಥಮï ಮತ್ತು 14 ದ್ವಿತೀಯ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವೈದ್ಯ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ, ಶಾಸಕ ಡಾ.ಎಂ.ಬಿ.ಪಾಟೀಲ ಹಾಗೂ ನಿರ್ದೇಶಕ, ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಆಡಳಿತ ಮಂಡಳಿ ಹಾಗೂ ಬೋಧಕ ಸಿಬ್ಬಂದಿ ಶುಭ ಹಾರೈಸಿದ್ದಾರೆ.

Leave a Reply

ಹೊಸ ಪೋಸ್ಟ್‌