Pinchani Adalat: ಆಗಷ್ಟ1 ರಿಂದ 20ರ ವರೆಗೆ ಬಬಲೇಶ್ವರ ಮತಕ್ಷೇತ್ರದ ನಾನಾ ಗ್ರಾ. ಪಂ. ಗಳಲ್ಲಿ ಪಿಂಚಣಿ ಅದಾಲತ

ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ತಿಕೋಟಾ ಮತ್ತು ಬಬಲೇಶ್ವರ ತಾಲೂಕುಗಳಲ್ಲಿ ಅಗಷ್ಟ 1 ರಿಂದ ಅಗಷ್ಟ 20ರ ವರೆಗೆ ಗ್ರಾಮ ಪಂಚಾಯಿತಿವಾರು ಪಿಂಚಣಿ ಅದಾಲತ ನಡೆಸಲು ನಿರ್ಧರಿಸಲಾಗಿದೆ.

ಶಾಸಕರಾದ ಎಂ. ಬಿ. ಪಾಟೀಲ ಅವರ ಸೂಚನೆಯಂತೆ ನಡೆಯುತ್ತಿರುವ ಈ ಪಿಂಚಣಿ ಅದಾಲತ ಕಾರ್ಯಕ್ರಮದಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದು ಪಿಂಚಣಿದಾರರಿಂದ ಕುಂದು-ಕೊರತೆ ಆಲಿಸಿ ಪರಿಹಾರ ಒದಗಿಸಲಿದ್ದಾರೆ.

ಪಿಂಚಣಿ ಅದಾಲತನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಫಲಾನುಭವಿಗಳು ಮತ್ತು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಲು ಬಯಸುವವರು ಬಬಲೇಶ್ವರ ಶಾಸಕರ ಕಚೇರಿಯಿಂದ ಅರ್ಜಿಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಅಗಸ್ಟ 1 ರಿಂದ ತಿಕೋಟಾ ತಾಲೂಕಿನಲ್ಲಿ ಗ್ರಾಮ ಪಂಚಾಯತಿವಾರು ನಡೆಯಲಿರುವ ಪಿಂಚಣಿ ಅದಾಲತ ಮಾಹಿತಿ.

ಅಗಷ್ಟ 1 ಬೆ. 11ಕ್ಕೆ ಬರಟಗಿ, ಮ. 1ಕ್ಕೆ ಅರಕೇರಿ
ಅಗಷ್ಟ 2ರಂದು ಬೆ. 11ಕ್ಕೆ ಲೋಹಗಾವ ಮ. 1ಕ್ಕೆ ಸಿದ್ಧಾಪುರ ಕೆ.
ಅಗಷ್ಟ 3 ಬೆ. 11ಕ್ಕೆ ಹೊನವಾಡ, ಮ. 1ಕ್ಕೆ ಕೊಟ್ಯಾಳ
ಅಗಷ್ಟ 4 ಬೆ. 11ಕ್ಕೆ ತೊರವಿ(ಅತಾಲಟ್ಟಿ), ಮ. 1ಕ್ಕೆ ತಾಜಪೂರ ಎಚ್.
ಅಗಷ್ಟ 5 ಬೆ. 11ಕ್ಕೆ ಜಾಲಗೇರಿ, ಮ. 1ಕ್ಕೆ ಟಕ್ಕಳಕಿ
ಅಗಷ್ಟ 6 ಬೆ. 11ಕ್ಕೆ ಘೋಣಸಗಿ, ಮ. 1ಕ್ಕೆ ಬಿಜ್ಜರಗಿ
ಅಗಷ್ಟ 8 ಬೆ. 11ಕ್ಕೆ ಬಾಬಾನಗರ, ಮ. 1ಕ್ಕೆ ಕನಮಡಿ

ಅಗಸ್ಟ 10 ರಿಂದ ಬಬಲೇಶ್ವರ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿವಾರು ನಡೆಯಲಿರುವ ಪಿಂಚಣಿ ಅದಾಲತ ಮಾಹಿತಿ.

ಅಗಷ್ಟ 10 ಬೆ. 11ಕ್ಕೆ ಅರ್ಜುಣಗಿ, ಮ. 1ಕ್ಕೆ ಬೋಳಚಿಕ್ಕಲಕಿ
ಅಗಷ್ಟ 11 ಬೆ. 11ಕ್ಕೆ ದೇವರಗೆಣ್ಣೂರು, ಮ. 1ಕ್ಕೆ ಹೊಸೂರು
ಅಗಷ್ಟ 12 ಬೆ. 11ಕ್ಕೆ ಜೈನಾಪುರ, ಮ. 1ಕ್ಕೆ ಮಮದಾಪುರ
ಅಗಷ್ಟ 16 ಬೆ. 11ಕ್ಕೆ ಹಲಗಣಿ, ಮ. 1ಕ್ಕೆ ಗುಣದಾಳ
ಅಗಷ್ಟ 17 ಬೆ. 11ಕ್ಕೆ ಹೊನಗನಹಳ್ಳಿ, ಮ. 1ಕ್ಕೆ ಕಾರಜೋಳ
ಅಗಷ್ಟ 18 ಬೆ. 11ಕ್ಕೆ ಸಾರವಾಡ, ಮ. 1ಕ್ಕೆ ನಿಡೋಣಿ
ಅಗಷ್ಟ 19 ಬೆ. 11ಕ್ಕೆ ಕಾಖಂಡಕಿ, ಮ. 1ಕ್ಕೆ ಕುಮಠೆ
ಅಗಷ್ಟ 20 ಬೆ. 11ಕ್ಕೆ ಕಂಬಾಗಿ

ಪಿಂಚಣಿ ಅದಾಲತ ಕುರಿತು ಆಯಾ ಗ್ರಾಮಗಳಲ್ಲಿ ಜನರಿಗೆ ಮಾಹಿತಿ ನೀಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅರ್ಹ ಫಲಾನುಭವಿಗಳು ನಿಗದಿತ ದಿನಾಂಕಗಳಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಬಲೇಶ್ವರ ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

ಹೊಸ ಪೋಸ್ಟ್‌