AP Birthday Cancel: ಅಪ್ಪು ಪಟ್ಟಣಶೆಟ್ಟಿ ಮಾದರಿ ನಡೆ- ಜನ್ಮದಿನ ಕಾರ್ಯಕ್ರಮ ರದ್ದು ಪಡಿಸಿ ಶ್ರದ್ಧಾಂಜಲಿ ಸಭೆ ನಡೆಸಿ ಬಿಜೆಪಿ ಕಾರ್ಯಕರ್ತನಿಗೆ ಗೌರವ ಸಲ್ಲಿಕೆ

ವಿಜಯಪುರ: ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಮ್ಮ ಜನ್ಮದಿನದಂದು ಉತ್ತಮ ನಿರ್ಧಾರ ಕೈಗೊಳ್ಳುವ ಮೂಲಕ ಮಾದರಿ ನಡೆ ಅನುಸರಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರೂ ಆಗಿರುವ ಅಪ್ಪು ಪಟ್ಟಣಶೆಟ್ಟಿ ಈಗ 53ನೇ ವರ್ಷ ಪೂರೈಸಿದ್ದಾರೆ.  ಹೀಗಾಗಿ ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಮತ್ತು ಹಿತೈಷಿಗಳು ವಿಜಯಪುರ ನಗರದ ಶಿವಾಜಿ ಚೌಕಿನಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಿದ್ದರು.  ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದ ಹಿನ್ನೆಲೆಯಲ್ಲಿ ಜನ್ಮದಿನವನ್ನು ಸಾಂಕೇತಿಕವಾಗಿ ಆಚರಿಸಿದ್ದರು.  ಆದರೆ, ಈ ಬಾರಿ ಕೊರೊನಾ ಭಯ ದೂರವಾಗಿರುವ ಹಿನ್ನೆಲೆಯಲ್ಲಿ ಅಪ್ಪು ಪಟ್ಟಣಶೆಟ್ಟಿ ಅವರ ಬೆಂಬಲಿಗರು ವಿಜಯಪುರ ನಗರದ ಶಿವಾಜಿ ಚೌಕಿ ಜನ್ಮದಿನ ಆಚರಿಸಲು ತಯಾರಿ ಮಾಡಿದ್ದರು.

ಮುಸ್ಸಂಜೆ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ದಿಢೀರ್ ರದ್ದು ಪಡಿಸಿದ ಅಪ್ಪು ಪಟ್ಟಣಶೆಟ್ಟಿ ಹುಟ್ಟು ಹಬ್ಬದ ಕಾರ್ಯಕ್ರಮ ಆಚರಣೆ ಬೇಡ.  ಆದರೆ, ಶ್ರದ್ಧಾಂಜಲಿ ಸಭೆ ನಡೆಸೋಣ ಎಂದು ತಮ್ಮ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರಿಗೆ ಹೇಳಿದರು. ಆಗ ಇವರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಇದಕ್ಕೆ ಒಪ್ಪಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಕೊಲೆ ಘಟನೆಯಿಂದ ವಿಚಲಿತರಾಗಿದ್ದ ಅಪ್ಪು ಪಟ್ಟಣಶೆಟ್ಟಿ, ಜನ್ಮದಿನದ ಕಾರ್ಯಕ್ರಮವನ್ನು ರದ್ದುಗೊಳಿಸಿದರು.  ಅಲ್ಲದೇ, ಸ್ವತಃ ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೋಂಡು ಮಾತನಾಡಿದರು.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೋಂಡ ಬಿಜೆಪಿ ಕಾರ್ಯಕರ್ತರು

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಬರ್ಬ ಹತ್ಯೆಗಳು, ಮಾರಣಾಂತಿಕ ಹಲ್ಲೆಗಳನ್ನು ಖಂಡಿಸುತ್ತೇನೆ.  ಯಾವುದೇ ಸರಕಾರವಿದ್ದರೂ ಕೂಡ ಕಾರ್ಯಕರ್ತರಿಗೆ ನೋವಾಗಿದೆ.  ನಾನೂ ಕೂಡ ಸಾಮಾನ್ಯ ಕಾರ್ಯಕರ್ತರನಾಗಿ ಬೆಳೆದು ಬಂದಿದ್ದೇನೆ.  ಬಿಜೆಪಿ ಪರ ಕಾರ್ಯಕರ್ತನಾಗಿ ಕೆಲಸ ಮಾಡಿದ್ದರಿಂದ ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ತಾವು ರಾಜಕೀಯದಲ್ಲಿ ಬೆಳೆಯಲು ಕಾರಣವಾಗಿದೆ.  ಯಾರೂ ಚಪ್ಪಾಳೆ ಹೊಡೆಯಬೇಡಿ.  ಇದು ಚಪ್ಪಾಳೆ ಗಿಟ್ಟಿಸಿಕೊಳ್ಳುವ ಕಾರ್ಯಕ್ರಮವೂ ಅಲ್ಲ.  ನಾನೂ ಕೂಡ ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದು ಬಂದು ಎರಡು ಬಾರಿ ನಾನಗೆ ಪಕ್ಷ ಟಿಕೆಟ್ ನೀಡಿ ಸಚಿವರನ್ನಾಗಿ ಮಾಡಿದ್ದೇನೆ.  ಸಚಿವನಾಗಿ ಶಾಸಕನಾಗಿ ನಾನು ಹಲವಾರು ಸಮಾಜ ಮುಖಿ ಕೆಲಸ ಮಾಡಲು ಬಿಜೆಪಿ ಕಾರಣವಾಗಿದೆ ಎಂದು ಅವರು ಹೇಳಿದರು.

 

ಬಿಜೆಪಿ ನನ್ನ ರಾಜಕೀಯ ಗುರು.  ಬಿಜೆಪಿ ಆದರ್ಶಗಳನ್ನು ನೋಡಿ ನಾನು ಬಿಜೆಪಿ ಸೇರಿದ್ದೆ.  ಈ ಪಕ್ಷದಲ್ಲಿ ದೇಶ ಮತ್ತು ಧರ್ಮಕ್ಕಾಗಿ ಸಾಕಷ್ಟು ಹೋರಾಟಗಳನ್ನು ಬಿಜೆಪಿ ಮಾಡಿದೆ.  ಈ ಹಿನ್ನೆಲೆಯಲ್ಲಿ ಈ ಪಕ್ಷದಲ್ಲಿ ಕೆಲಸ ಮಾಡಲು ಬಿಜೆಪಿ ಸೇರಿಕೊಂಡಿದ್ದೆ.  ನಾನೆಂದೂ ಬಿಜೆಪಿ ಬಿಟ್ಟು ಕೆಲಸ ಮಾಡಿಲ್ಲ.  ರಾಜಕೀಯದ ಕೊನೆಯ ವರೆಗೂ ಬಿಜೆಪಿಯಲ್ಲಿರುತ್ತೇನೆ.  ಪಕ್ಷ ಅಧಿಕಾರ ನೀಡಲಿ ಅಥವಾ ಬಿಡಲಿ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರೆಯುತ್ತೇನೆ ಎಂದು ಅವರು ತಿಳಿಸಿದರು.

ಪ್ರವೀಣ ಅವರ ಕೊಲೆ ನಮಗೆಲ್ಲರಿಗೂ ಬಹಳ ನೋವು ತಂದಿದೆ.  ಹೆಚ್ಚಿಗೆ ಮಾತನಾಡಲು ಆಗುತ್ತಿಲ್ಲ ಎಂದು ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಅಪ್ಪು ಪಟ್ಟಣಶೆಟ್ಟಿ ಈ ಸಂದರ್ಭದಲ್ಲಿ ತಿಳಿಸಿದರು.

ಪ್ರವೀಣ ನೆಲ್ಲಾರೆ ಗೌರವಾರ್ಥ ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಅಲ್ಲದೇ, ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅಮರ್ ರಹೆ ಅಮರ್ ರಹೆ, ಪ್ರವೀಣ ನೆಟ್ಟಾರ್ ಅಮರ್ ರಹೆ ಎಂದು ಘೋಷಣೆ ಹಾಕಿದರು.

ಈ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಮುಖಂಡರಾದ ಗೋಪಾಲ ಘಟಕಾಂಬಳೆ, ಭೀಮಾಶಂಕರ ಹದನೂರ, ರಾಜೇಂದ್ರ ವಾಲಿ, ಜಗದೀಶ ಮುಚ್ಚಂಡಿ, ಭರತ ಕೋಳಿ, ಜಗದೀಶ ಮುಚ್ಚಂಡಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು, ಅಪ್ಪು ಪಟ್ಟಣಶೆಟ್ಟಿ ಅವರ ಬೆಂಬಲಿಗರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌