Press Card Warn: ಪತ್ರಕರ್ತರ ಸಂಘದ ಐಡಿ ಕಾರ್ಡ್ ದುರ್ಬಳಕೆ ಸಹಿಸಲ್ಲ- ಸಂಗಮೇಶ ಚೂರಿ ಎಚ್ಚರಿಕೆ
ವಿಜಯಪುರ: ಕಾರ್ಯನಿರತ ಪತ್ರಕರ್ತರ ಕಾನಿಪ ಗುರುತಿನಚೀಟಿ(ID Card) ದುರ್ಬಳಕೆ ಸಹಿಸುವುದಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಎಚ್ಚರಿಕೆ ನೀಡಿದ್ದಾರೆ.. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು. ಗುರುತಿನ ಕಾರ್ಡ್ ದುರುಪಯೋಗ ಪಡಿಸಿಕೊಂಡು ಸಂಘಕ್ಕೆ ಕೆಟ್ಟ ಹೆಸರು ತರುವಂಥ ಕೆಲಸವನ್ನು ಯಾವ ಸದಸ್ಯರೂ ಮಾಡಬಾರದು. ಗುರುತಿನ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುವುದನ್ನು ನಾನು ಸಹಿಸುವುದಿಲ್ಲ. ಸಂಘವು […]
Commonwealth Bronze: ಕನ್ನಡಿಗ ಪಿ. ಗುರುರಾಜ ಗೆ ಕಾಮನವೆಲ್ತ್ ಗೇಮ್ಸ್ ನಲ್ಲಿ ಕಂಚು- ಪಿಎಂ, ಸಿಎಂ ಅಭಿನಂದನೆ
ವಿಜಯಪುರ: ಕನ್ನಡಿಗ ಗುರುರಾಜ ಬರ್ಮಿಂಗಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಎರಡನೇ ಪದಕ ಗೆಲ್ಲಿಸಿ ಕೊಟ್ಟಿದ್ದಾರೆ. 61 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಗುರುರಾಜ ಪೂಜಾರಿ ಕಂಚಿನ ಪದಕ ಜಯಿಸಿ ಪದಕಗಳ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಮೆಡಲ್ ಗೆಲ್ಲಿಸಿ ಕೊಟ್ಟಿದ್ದಾರೆ. ಕನ್ನಡಿಗ ವೇಟ್ ಲಿಫ್ಟರ್ ಸ್ನ್ಯಾಚ್ ವಿಭಾದಲ್ಲಿ 118 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ 151 […]
Irrigation Karajol: ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ- ನಿರಪೇಕ್ಷಣಾ ಪತ್ರ ನೀಡಲು ಪರಿಸರ ಇಲಾಖೆಗೆ ಪರಿಸರ ತಜ್ಞರ ಸಮಿತಿ ಶಿಫಾರಸು- ಗೋವಿಂದ ಕಾರಜೋಳ
ಬೆಂಗಳೂರು: ವಿಜಯಪುರ ಮತ್ತು ಇಂಡಿ ತಾಲೂಕಿನ ರೈತರಿಗೆ ವರದಾನವಾಗಲಿರುವ ಮಹತ್ವಾಕಾಂಕ್ಷೆಯ ಹೊರ್ತಿ ರೇವಣ ಸಿದ್ದೇಶ್ವರ ಯೋಜನೆಗೆ ಪರಿಸರ ತಜ್ಞರ ಸಮಿತಿ ನಿರಪೇಕ್ಷಣಾ ಪತ್ರ ನೀಡಲು ಪರಿಸರ ಇಲಾಖೆಗೆ ಶಿಫಾರಸ್ಸು ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರ, ಇಂಡಿ ಮುಂತಾದ ಭಾಗಗಳ ರೈತರಿಗೆ ಈ ಯೋಜನೆ ಮಹತ್ವದ ನೀರಾವರಿ ಯೋಜನೆಯಾಗಿದೆ. ಈ ಯೋಜನೆ ಅನುಷ್ಠಾನದ ಸಂಕಲ್ಪದೊಂದಿಗೆ ಪರಿಸರ ಇಲಾಖೆಯ ನಿರಪೇಕ್ಷಣಾ ಪತ್ರ ಪಡೆದುಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. […]