Irrigation Karajol: ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ- ನಿರಪೇಕ್ಷಣಾ ಪತ್ರ ನೀಡಲು ಪರಿಸರ ಇಲಾಖೆಗೆ ಪರಿಸರ ತಜ್ಞರ ಸಮಿತಿ ಶಿಫಾರಸು- ಗೋವಿಂದ ಕಾರಜೋಳ

ಬೆಂಗಳೂರು: ವಿಜಯಪುರ ಮತ್ತು ಇಂಡಿ ತಾಲೂಕಿನ ರೈತರಿಗೆ ವರದಾನವಾಗಲಿರುವ ಮಹತ್ವಾಕಾಂಕ್ಷೆಯ ಹೊರ್ತಿ ರೇವಣ ಸಿದ್ದೇಶ್ವರ ಯೋಜನೆಗೆ ಪರಿಸರ ತಜ್ಞರ ಸಮಿತಿ ನಿರಪೇಕ್ಷಣಾ ಪತ್ರ ನೀಡಲು ಪರಿಸರ ಇಲಾಖೆಗೆ ಶಿಫಾರಸ್ಸು ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ‌.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರ, ಇಂಡಿ ಮುಂತಾದ ಭಾಗಗಳ ರೈತರಿಗೆ ಈ ಯೋಜನೆ ಮಹತ್ವದ ನೀರಾವರಿ ಯೋಜನೆಯಾಗಿದೆ. ಈ ಯೋಜನೆ ಅನುಷ್ಠಾನದ ಸಂಕಲ್ಪದೊಂದಿಗೆ ಪರಿಸರ ಇಲಾಖೆಯ ನಿರಪೇಕ್ಷಣಾ ಪತ್ರ ಪಡೆದುಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.‌‌ ಈ ಪ್ರಸ್ತಾವನೆಯನ್ನು ರಾಜ್ಯ ಮಟ್ಟದ ಪರಿಸರ ತಜ್ಞರ ಸಮಿತಿಯಲ್ಲಿ ಸವಿಸ್ತಾರವಾಗಿ ಚರ್ಚಿಸಿದ ನಂತರ ಪರಿಸರ ತಜ್ಞರ ಸಮಿತಿಯು ಪರಿಸರ ತೀರುವಳಿ ನೀಡಲು ಶಿಫಾರಸ್ಸು ಮಾಡಿದೆ, ಈ ನಿರ್ಧಾರ ಸಮಸ್ತ ಇಂಡಿ‌ ಮತ್ತು ವಿಜಯಪುರ ತಾಲೂಕಿನ ರೈತರಲ್ಲಿ ಅತೀವ ಸಂತೋಷ ಮೂಡಿಸಿದೆ. ಈ ಯೋಜನೆಯಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಮತ್ತು ವಿಜಯಪುರ ತಾಲೂಕಿನ ಸುಮಾರು 56 ಹಳ್ಳಿಗಳ ಒಟ್ಟಾರೆ 49,730 ಹೇಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಯೋಜನೆಯ ಮೊದಲನೇ ಹಂತದಲ್ಲಿ ಇಂಡಿ ತಾಲೂಕಿನ 28000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರು ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌