ವಿಜಯಪುರ: ಕನ್ನಡಿಗ ಗುರುರಾಜ ಬರ್ಮಿಂಗಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಎರಡನೇ ಪದಕ ಗೆಲ್ಲಿಸಿ ಕೊಟ್ಟಿದ್ದಾರೆ.
61 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಗುರುರಾಜ ಪೂಜಾರಿ ಕಂಚಿನ ಪದಕ ಜಯಿಸಿ ಪದಕಗಳ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಮೆಡಲ್ ಗೆಲ್ಲಿಸಿ ಕೊಟ್ಟಿದ್ದಾರೆ.
ಕನ್ನಡಿಗ ವೇಟ್ ಲಿಫ್ಟರ್ ಸ್ನ್ಯಾಚ್ ವಿಭಾದಲ್ಲಿ 118 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ 151 ಕೆಜಿ ಭಾರ ಎತ್ತಿದ್ದಾರೆ. ಈ ಮೂಲಕ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಭಾರತ ಮೂರನೇ ಸ್ಥಾನ ಅಂದರೆ ಕಂಚಿನ ಪದಕ ಗೆಲ್ಲಲು ಕಾರಣರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
https://twitter.com/narendramodi/status/1553364876906487808?t=86_LJ838AGvVBV4vHyHVbg&s=08
ಕನ್ನಡಿಗ ಪಿ. ಗುರುರಾಜ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಪಿ. ಗುರುರಾಜ ಅವರ ಸಾಧನೆಯಿಂದ ಅತೀವ ಸಂತೋಷವಾಗಿದೆ. ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿರುವುದಕ್ಕೆ ಅಭಿನಂದನನೆಗಳು. ನಿರ್ಣಾಯಕ ಹಂತದಲ್ಲಿ ಸ್ಥಿರತೆ ಕಾಪಾಡಿಕೊಂಡು ಉತ್ತಮ ಪ್ರದರ್ಶನ ತೋರಿದ್ದಾರೆ. ಅವರ ಕ್ರೀಡಾ ಜೀವನದಲ್ಲಿ ಮತ್ತಷ್ಟು ಮೈಲುಗಲ್ಲುಗಳನ್ನು ಸಾಧಿಸಲಿ ಎಂದು ಶುಭ ಕೋರುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ
https://twitter.com/BSBommai/status/1553373445005553665?t=bREN2RH9VW-oMct1A0GxvQ&s=08
ಕಾಮನ್ ವೆಲ್ತ್ ಕ್ರೀಡಾಕೂಟದ 61 ಕೆಜಿ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಾಷ್ಟ್ರದ ಕೀರ್ತಿ ಪತಾಕೆಯನ್ನು ಎತ್ತರಕ್ಕೇರಿಸಿದ ಪಿ. ಗುರುರಾಜ ಅವರಿಗೆ ಹಾರ್ದಿಕ ಅಭಿನಂದನೆಗಳು. ಅವರು ಕರ್ನಾಟಕದ ಕುಂದಾಪುರದವರು ಎನ್ನುವುದು ನಾಡಿಗೆ ಹೆಮ್ಮೆಯ ಸಂಗತಿ. ಅವರಿಗೆ ಉಜ್ವಲ ಯಶಸ್ಸು ಪ್ರಾಪ್ತವಾಗಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕನ್ನಡಿಗ ಗುರುರಾಜ ಪೂಜಾರಿ ಅವರಿಗೆ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಅಂದ ಹಾಗೆ, ಗುರುರಾಜ ಪೂಜಾರಿ 2018ರಲ್ಲಿ ಗೋಲ್ಡ್ಡಕೋಸ್ಟ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು. ಈಗ ಉತ್ತಮ ಸಾಧನೆಯನ್ನು ಮುಂದುವರೆಸಿದ್ದು, ಕಂಚಿನ ಪದಕ ಜಯಿಸುವ ಮೂಲಕ ಕನ್ನಡಿಗರು ಮತ್ತು ಇಡೀ ದೇಶ ಜನ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ಮತ್ತು ಎರಡನೇ ಸಲ 151 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.