KV Awarded: ವಿಜಯಪುರ ಕೇಂದ್ರೀಯ ವಿದ್ಯಾಲಯಕ್ಕೆ ಸ್ವಚ್ಛ ವಿದ್ಯಾಲಯ ಪುರಸ್ಕಾರ ರಾಜ್ಯ ಪ್ರಶಸ್ತಿ- ರಾಷ್ಟ್ರ ಮಟ್ಟಕ್ಜೆ ಆಯ್ಕೆಯಾದ ಶಾಲೆ

ವಿಜಯಪುರ: ನಗರದ ಕೇಂದ್ರೀಯ ವಿದ್ಯಾಲಯಕ್ಕೆ ಸ್ವಚ್ಛ ವಿದ್ಯಾಲಯ ಪುರಸ್ಕಾರ 2022-23 ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ. ಅಲ್ಲದೇ, ರಾಷ್ಟ್ರಮಟ್ಟದ ಸ್ಪರ್ಧೆಗೂ ಶಾಲೆ ಆಯ್ಕೆಯಾಗಿದೆ.

ವಿಜಯಪುರ ಕೇಂದ್ರೀಯ ವಿದ್ಯಾಲಯ

ಇದನ್ನೂ ಓದಿ: 

ವಿಜಯಪುರ ಕೇಂದ್ರಿಯ ವಿದ್ಯಾಲಯಕ್ಕೆ ಪ್ಲಾಸ್ಟಿಕ್ ಮುಕ್ತ ಶಾಲೆ ಪ್ರಶಸ್ತಿ

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಪರವಾಗಿ ಪ್ರಾಚಾರ್ಯ ಸೆಬಿ ಸೆಬಾಸ್ಟಿಯನ್ ಅವರ ಪರವಾಗಿ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ‌ ರಮೇಶ ಚವ್ಹಾಣ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇದನ್ನೂ ಓದಿ:

Kendriya Vidyalaya: ಶಾಲಾ ಸಂಸತ್ತು ಪದಗ್ರಹಣ ಸಮಾರಂಭ- ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಭಾಗಿ

 

ವಿಜಯಪುರ ಕೇಂದ್ರೀಯ ವಿದ್ಯಾಲಯಕ್ಜೆ ಸಂದ ಪ್ರಶಸ್ತಿ

ಈ ಪ್ರಶಸ್ತಿ ಆಯ್ಕೆಗೆ ಪರಿಗಣಿಸಲಾದ ಮಾನದಂಡಗಳಲ್ಲಿ ವಿಜಯಪುರ ಕೇಂದ್ರೀಯ ವಿದ್ಯಾಲಯ ಶೇ. 100 ರಷ್ಟು ಅಂಕ ಗಳಿಸುವ ಮೂಲಕ ಗಮನ ಸೆಳೆದಿದೆ.‌‌ ಕುಡಿಯುವ ನೀರು, ಶೌಚಾಲಯ, ಕೈ ತೊಳೆಯಲು ಸಾಬೂನು ವ್ಯವಸ್ಥೆ, ನಡವಳಿಕೆ, ಸಾಮರ್ಥ್ಯ ವೃದ್ಧಿ, ಕೊರೊನಾ ಸಂದರ್ಭದಲ್ಲಿ ಸ್ಪಂದನೆ ಅಂಶಗಳನ್ನು ಪ್ರಶಸ್ತಿ ಆಯ್ಕೆಗೆ ಪ್ರಮುಖ‌ ಮಾನದಂಡಗಳಾಗಿ ಪರಿಗಣಿಸಲಾಗಿತ್ತು.

ವಿಜಯಪುರ ಕೇಂದ್ರೀಯ ವಿದ್ಯಾಲಯಕ್ಕೆ ನೀಡಲಾದ ಪ್ರಶಸ್ತಿ ಪತ್ರ

ಇದನ್ನೂ ಓದಿ:

ಎರಡು ವರ್ಷಗಳ ಬಳಿಕ ಭೌತಿಕವಾಗಿ ಪರೀಕ್ಷೆ ಬರೆದು ಖುಷಿಯಿಂದ ಅಡ್ವಾನ್ಸ್ ಹೋಳಿ ಹಬ್ಬ ಆಚರಿಸಿದ ವಿದ್ಯಾರ್ಥಿಗಳು

ಶಾಲೆಗೆ ಈ ಪ್ರಶಸ್ತಿ‌‌ ಲಭಿಸಿರುವುದಕ್ಕೆ ಪ್ರಿನ್ಸಿಪಾಲ್ ಸೆಬಿ ಸೆಬಾಸ್ಟಿಯನ್ ಮತ್ತು ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ರಮೇಶ ಚವ್ಹಾಣ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಶಾಲೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಶವಿದೆ. ಸ್ವಚ್ಛತೆ ಮತ್ರು ನೈರ್ಮಲ್ಯಕ್ಕೆ ಆದ್ಯತೆ ನೀಡಿದ್ದೇವೆ. ಎಲ್ಲ ಶಿಕ್ಷಕ ಮತ್ತು ಇತರ ಸಿಬ್ಬಂದಿ ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳ ಸಹಕಾರ ಮತ್ತು ಪ್ರೋತ್ಸಾಹ ಈ ಪ್ರಶಸ್ತಿಗೆ ಭಾಜನರಾಗಲು ಪ್ರಮುಖ ಕಾರಣವಾಗಿದೆ ಎಂದು ಸೆಬಿ ಸೆಬಾಸ್ಟಿಯನ್ ಮತ್ತು‌ ರಮೇಶ ಚವ್ಹಾಣ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌