Journalists Tagadur: ಕಾರ್ಯ ಮರೆತವರು ಪತ್ರಕರ್ತರ ಸಂಘಕ್ಕೆ ಬೇಕಾಗಿಲ್ಲಃ- ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಾರ್ಯ ಮರೆತವರು ಬೇಕಾಗಿಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಸ್ಪಷ್ಟಪಡಿಸಿದ್ದಾರೆ.  ವಿಜಯಪುರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಹೆಸರೇ ಸೂಚಿಸಿದಂತೆ ಸಂಘದಲ್ಲಿ ಕಾರ್ಯನಿರತರಿಗೆ ಅವಕಾಶವಿದೆ.  ಕಾರ್ಯ ಮರೆತವರು ನಮಗೆ ಬೇಕಾಗಿಲ್ಲ.  ಅಂಥವರ ಅವಶ್ಯಕತೆಯೂ ನಮಗಿಲ್ಲ ಎಂದು ಖಾರವಾಗಿ ಹೇಳಿದರು. ಕಾರ್ಯನಿರತ ಯಾವ ಪತ್ರಕರ್ತರಿಗೂ ಸಂಘದ ಸದಸ್ಯತ್ವ ಕಾರ್ಡ ನೀಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ.  […]

Siddharamaiah Mushriff: ಸಿದ್ಧರಾಮಯ್ಯ ಅಮೃತ ಮಹೋತ್ಸವಕ್ಕೆ ವಿಜಯಪುರದಿಂದ 175 ವಾಹನಗಳಲ್ಲಿ ಕಾರ್ಯಕರ್ತರ ಪ್ರಯಾಣ- ಅಬ್ದುಲಹಮೀದ ಮುಶ್ರಿಫ್

ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ವಿಜಯಪುರ ನಗರದಿಂದ 175 ನಾನಾ ವಾಹನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಾವಣಗೆರೆಗೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲಹಮೀದ ಮುಶ್ರಿಫ್ ತಿಳಿಸಿದ್ದಾರೆ.  ವಿಜಯಪುರ ನಗರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ಧರಾಮಯ್ಯ ಜನಾನುರಾಗಿ ಜನನಾಯಕ.  ಸಕಲ ವರ್ಗಗಳ ಕಲ್ಯಾಣವನ್ನು ಬಯಸಿದ ನೇತಾರರಾಗಿದ್ದಾರೆ.  ಅವರು ವಿಜಯಪುರ ಜಿಲ್ಲೆಗೆ ನೀಡಿದ ಕೊಡುಗೆ ಅನನ್ಯ.  ಕೊಡುಗೆ ನೀಡಿರುವ ಭಾಗ್ಯಗಳ ಸರದಾರ ಸಿದ್ಧರಾಮಯ್ಯ ಅವರ ಜನ್ಮದಿನೋತ್ಸವಕ್ಕೆ […]

Journalists Conference: ವಿಜಯಪುರದಲ್ಲಿ ಪತ್ರಕರ್ತರ 37ನೇ ರಾಜ್ಯ ಮಟ್ಟದ ಸಮ್ಮೇಳನ ಯಶಸ್ಸಿಗೆ ಶಿವಾನಂದ ತಗಡೂರ ಮನವಿ

ವಿಜಯಪುರ: ನಗರದಲ್ಲಿ ನಡೆಯಲಿರುವ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಯಶಸ್ಸಿಗೆ ಶ್ರಮಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮನವಿ ಮಾಡಿದ್ದಾರೆ.  ವಿಜಯಪುರ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.  ವಿಜಯಪುರ ಜಿಲ್ಲೆಯ ಹಲವಾರು ಪತ್ರಕರ್ತರು ಹಾಗೂ ಸಂಘದ ಜಿಲ್ಲಾ ಪದಾಧಿಕಾರಿಗಳು ಪತ್ರಕರ್ತರ ರಾಜ್ಯ ಸಮ್ಮೇಳನ ವಿಜಯಪುರ ಜಿಲ್ಲೆಗೆ ವಹಿಸಿ ಕೊಡುವಂತೆ ಕಳೆದ ಮೂರು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದರು.  […]

Airport Kajalol: ವಿಜಯಪುರ ಏರಪೋರ್ಟ್ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವ ಗೋವಿಂದ ಕಾರಜೋಳ- ನಂತರ ಹೇಳಿದ್ದೇನು ಗೊತ್ತಾ?

ವಿಜಯಪುರ: ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಅವರು ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಬುರಣಾಪುರ ಬಳಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದರು.  ಕಾಮಗಾರಿಯ ಪ್ರಗತಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಜು. 31ರವರೆಗೆ ಮೊದಲನೇ ಹಂತದ ಕಾಮಗಾರಿಯ ಶೇ.64 ಭೌತಿಕ ಮತ್ತು 63.17 ಆರ್ಥಿಕ ಪ್ರಗತಿ ಸಾಧಿಸಲಾಗಿದೆ.   ಎರಡನೇ ಹಂತದ ಕಾಮಗಾರಿಯಲ್ಲಿ ಶೇ.10.34ರಷ್ಟು ಭಔತಿಕ ಮತ್ತು ಶೇ.4.26ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ  ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವಿಜಯಪುರ […]