Panchami Poem: ಅಣ್ಣ-ತಂಗಿಯರ ಸಂಬಂಧ ಬೆಸೆಯುವ ನಾಗರ ಪಂಚಮಿ ಕುರಿತು ಖ್ಯಾತ ವೈದ್ಯ ಡಾ. ಅರುಣ ಇನಾಮದಾರ ರಚಿತ ಕವನ

ವಿಜಯಪುರ: ವಗರದ ಚರ್ಮರೋಗ ಖ್ಯಾತ ತಜ್ಞ ವೈದ್ಯ ಡಾ. ಅರುಣ ಇನಾಮದಾರ ಕೇವಲ ತಮ್ಮ ವೃತ್ತಿಯಲ್ಲಷ್ಟೇ ಶ್ರೇಷ್ಠರಾಗಿಲ್ಲ. ಸಾಹಿತ್ಯ ಅದರಲ್ಲೂ ವಚನ ಸಾಹಿತ್ಯದಲ್ಲಿಯೂ ಎತ್ತಿದ ಕೈ ಎನಿಸಿಕೊಂಡಿದ್ದಾರೆ.

ನಾನಾ ಶರಣರ ವಚನಗಳನ್ನು ಆಂಗ್ಲ ಭಾಷೆಗೆ ಭಾಷಾಂತರ ಮಾಡುವ ಮೂಲಕ ಈಗಾಗಲೇ ಗಮನ ಸೆಳೆದಿರುವ ಅವರು ಆಗಾಗ ಕವನಗಳನ್ನೂ ಬರೆಯುವ ಮೂಲಕ ಮೆಚ್ಚುಗೆ ಗಳಿಸುತ್ತಿದ್ದಾರೆ.

ನಾಗರ ಪಂಚಮಿ ಅಂಗವಾಗಿ ಅಣ್ಣ-ತಂಗಿಯರ ಸಂಬಂಧ ಬೆಸೆಯುವ ಕವನವನ್ನು ವಿಶೇಷವಾಗಿ ಬಸವ ನಾಡು ವೆಬ್ ಗಾಗಿ ರಚಿಸಿದ್ದಾರೆ. ಅವರ ಕವನ ಇಲ್ಲಿದೆ.

ಡಾ. ಅರುಣ ಇನಾಮದಾರ

ಪಂಚಮಿ ಹಬ್ಬ

ಜೋಕಾಲಿ ತೂಗಿ
ಉಂಡಿ ಚಕ್ಕುಲಿ ತಿಂದು
ಕಕ್ಕುಲಿತೆಯ ತವರಮನಿಯಲಿ
ಉಕ್ಕುತಲಿರುವ ಪ್ರೀತಿಯ ಸೆಲೆಯಲಿ
ಅಣ್ಣ ತಮ್ಮಂದಿರ ಆಟ ನೋಡಿ
ತಂದೆ ತಾಯಿಯರ ಪ್ರೀತಿಯ ಮೋಡಿಯ ಸವೆದು …. ನಲಿಯುವ ಅಕ್ಕ ತಂಗಿಯರ ಹಬ್ಬ…
ನಾಗರ ಪಂಚಮಿ ಹಬ್ಬ
ಬಂದು ನಾರಿಯರಿಗೆಲ್ಲಾ
ಸಂತಸದ ಉಬ್ಬು…
ಅತ್ತೀ ಮನೀಗ ಉಂಡಿ ಚಿವಡಾ ಬೀರಿ
ಕುಬುಸಾ ಸೀರಿ ಕೊಟ್ಟು
ಊರಾಗಿನ ಗೆಳತಿಯರೆಲ್ಲಾ
ಜೋಕಾಲಿ ಜೂಕಿ
ಜ್ವಾಕಿ ಜತನದಿಂದ
ಮತ್ತೆ ಮತ್ತೆ ಬರಲಿ ಪಂಚಮಿ ಹಬ್ಬ
ಮನೆ ಮಂದಿಯೆಲ್ಲ ಸಂಭ್ರಮಿಸುವ ಹಬ್ಬ.

Leave a Reply

ಹೊಸ ಪೋಸ್ಟ್‌